Advertisement

ಕೊನೆಗೂ ದುರಸ್ತಿ ಕಂಡ ಕೆವಿಜಿ ವೃತ್ತ ರಸ್ತೆ

06:15 AM Jan 31, 2019 | |

ಸುಳ್ಯ  ಪ್ರಯಾಣಿಕರ ಪಾಲಿಗೆ ನರಕ ಸದೃಶವಾಗಿದ್ದ ನಗರದ ಕುರುಂಜಿಬಾಗ್‌ನ ಕೆವಿಜಿ ವೃತ್ತ ರಸ್ತೆ ಕೊನೆಗೂ ದುರಸ್ತಿ ಕಂಡಿದೆ. ಹಳೆಯ ಇಂಟರ್‌ಲಾಕ್‌ ಅನ್ನು ತೆಗೆದು, ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದು, ಕೆಲ ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

Advertisement

ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸಹಿತ ಸಾವಿರಾರು ಜನರು ತೆರಳುವ ಪ್ರಮುಖ ವೃತ್ತ ಇದಾಗಿತ್ತು. ಹಲವು ಸಮಯಗಳಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ನ.ಪಂ. ಸಾಮಾನ್ಯ ಸಭೆಗಳಲ್ಲಿ ತಾಸುಗಟ್ಟಲೆ ಚರ್ಚೆ ಆಗಿದ್ದರೂ ಪರಿಹಾರ ಸಿಕ್ಕಿರಲಿಲ್ಲ.

ನ.ಪಂ. ಕೆಲ ಜನಪ್ರತಿನಿಧಿಗಳು ಶಾಸಕರಲ್ಲಿ ಅನುದಾನ ಒದಗಿಸಲು ಮನವಿ ಮಾಡಿದ್ದರು. ಅದರಂತೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2018 ಸೆ. 8ರಂದು ಶಾಸಕ ಅಂಗಾರ ಗುದ್ದಲಿಪೂಜೆ ನೆರವೇರಿಸಿದ್ದರು. ಮರಳಿನ ಸಮಸ್ಯೆ ಇದೆ ಎಂದು ಜಿ.ಪಂ. ಎಂಜಿನಿಯರ್‌ಗಳು ಅಸಹಾಯಕತೆ ವ್ಯಕ್ತಪಡಿಸಿದ್ದ ಕಾರಣ ಕಾಮಗಾರಿ ಮೂರು ತಿಂಗಳ ಬಳಿಕ ಆರಂಭಗೊಂಡಿತ್ತು.

ಪ್ರಮುಖ ವೃತ್ತ
ನಗರದ ಹಲವು ವೃತ್ತಗಳಲ್ಲಿ ಕೆವಿಜಿ ವೃತ್ತವೂ ಒಂದಾಗಿದೆ. ತಾಲೂಕು ಕಚೇರಿ, ತೋಟಗಾರಿಕಾ ಇಲಾಖೆ, ನ್ಯಾಯಾಲಯ ಸಹಿತ ಪ್ರಮುಖ ಜನಸಂಪರ್ಕ ಕಚೇರಿಗಳು ಇಲ್ಲಿವೆ. ದಿನಂಪ್ರತಿ ಸರಕಾರಿ ಕಚೇರಿ, ಶಿಕ್ಷಣ ಸಂಸ್ಥೆಗಳಿಗೆ ಸಾವಿರಾರು ಮಂದಿ ಬರುತ್ತಾರೆ. ಇಷ್ಟಾದರೂ ತಾತ್ಕಾಲಿಕ ದುರಸ್ತಿ ಆಗದೆ ಜನರು ಅಕ್ಷರಶಃ ಪರದಾಟ ನಡೆಸಿದ್ದರು. ಈ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆಯೂ ನಡೆದಿತ್ತು. ಬ್ಲಾಕ್‌ ಕಾಂಗ್ರೆಸ್‌, ರಿಕ್ಷಾ ಚಾಲಕ ಮಾಲಕರು, ಸ್ಥಳೀಯ ವರ್ತಕರು ರಸ್ತೆ ದುರಸ್ತಿಗೆ ಆಗ್ರಹಿಸಿದ್ದರು. ತಹಶೀಲ್ದಾರ್‌, ನ.ಪಂ. ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next