Advertisement
2016ರಲ್ಲಿ ಕುವೈತ್ ನಗರದಲ್ಲಿ 54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿಕೊಂಡಿದ್ದು. 76 ವರ್ಷಗಳಲ್ಲಿ ಭೂಮಿಯ ಮೇಲೆ ವರದಿಯಾದ ಅತ್ಯಧಿಕ ಉಷ್ಣಾಂಶ ಅದಾಗಿತ್ತು. ಕಳೆದ ವರ್ಷವೂ ಕುವೈತ್‌ನ ತಾಪಮಾನ 50 ಡಿಗ್ರಿ ಸೆಲ್ಸಿಯೆಸ್ ತಲುಪಿದೆ. 2071-2100ರ ವೇಳೆಗೆ ಉಷ್ಣಾಂಶದಲ್ಲಿ ಇನ್ನೂ 4.5 ಡಿಗ್ರಿ ಸೆಲ್ಸಿಯೆಸ್ ಏರಿಕೆಯಾಗುವ ಸಾಧ್ಯತೆಯಿದೆ.
ಕುವೈತ್ ಹಿಂದುಳಿದ ರಾಷ್ಟ್ರವಲ್ಲ. ಕಚ್ಚಾ ಇಂಧನ ತಯಾರಿಕೆಯನ್ನೇ ಮುಖ್ಯ ಉದ್ಯಮವನ್ನಾಗಿಸಿಕೊಂಡಿರುವ ಈ ರಾಷ್ಟ್ರದಲ್ಲಿ ಜನಸಂಖ್ಯೆಯೂ ಕಡಿಮೆಯೇ. ಮಾಲಿನ್ಯ ನಿಯಂತ್ರಣಕ್ಕೆ ಎಲ್ಲ ರೀತಿಯ ಸೌಲಭ್ಯವಿದ್ದರೂ ರಾಷ್ಟ್ರಕ್ಕೆ ಮಾಲಿನ್ಯ ನಿಯಂತ್ರಣ ಸಾಧ್ಯವಾಗುತ್ತಿಲ್ಲ. 2035ರೊಳಗೆ ಹಸಿರುಮನೆ ಹೊರಸೂಸುವಿಕೆಯನ್ನು ಶೇ.7.4ರಷ್ಟು ಕಡಿಮೆಗೊಳಿಸುವುದಾಗಿ ಇತ್ತೀಚೆಗೆ ಮುಕ್ತಾಯವಾದ ತಾಪಮಾನ ಶೃಂಗಸಭೆಯಲ್ಲಿ ಕುವೈತ್ ಪ್ರತಿಜ್ಞೆ ಮಾಡಿತ್ತು.