Advertisement

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಪ್ರಶಸ್ತಿ ಪ್ರಕಟ

10:44 PM Jul 21, 2022 | Team Udayavani |

ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 2022ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಅಧ್ಯಕ್ಷ ಡಾ| ಅಜಕ್ಕಳ ಗಿರೀಶ ಭಟ್‌ಪ್ರಕಟಿಸಿದ್ದಾರೆ.

Advertisement

ಕರ್ನಾಟಕ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ| ಸಿ.ಆರ್‌. ಯರವಿನ ತೆಲಿಮಠ, ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಆರ್‌. ವಿ.ಎಸ್‌. ಸುಂದರಂ, ಲೇಖಕಿ ವಿಜಯಾ ಗುತ್ತಲ, ಭಾಷಾಂತರಕಾರ ಕೆ.ನಲ್ಲತಂಬಿ ಹಾಗೂ ಅನುವಾದಕ ವಿ.ಕೃಷ್ಣ ಅವರು  ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.   ಪ್ರಶಸ್ತಿಯು 50 ಸಾ. ರೂ. ಮತ್ತು ಪುರಸ್ಕಾರ ಒಳಗೊಂಡಿದೆ.

ಪುಸ್ತಕ ಬಹುಮಾನ :

2021ರಲ್ಲಿ ಪ್ರಕಟವಾದ ಅನುವಾದಿತ ಕೃತಿಗಳಿಗೆ ವಿವಿಧ ವಿಭಾಗಗಳಲ್ಲಿ ನೀಡಲಾಗುವ ಪುಸ್ತಕ ಬಹುಮಾನಗಳನ್ನೂ ಪ್ರಕಟಿಸಲಾಗಿದೆ.

ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಗೊಂಡ  “ದ ಎಸೆನ್ಶಿಯಲ್‌ ಮಹಾಭಾರತ’ ಕೃತಿ  (ಅನುವಾದಕರು: ಅರ್ಜುನ ಭಾರದ್ವಾಜ ಮತ್ತು ಹರಿ ರವಿಕುಮಾರ್‌)ಗೆ  ಪುಸ್ತಕ ಬಹುಮಾನ ದೊರೆತಿದೆ.

Advertisement

ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ ಗೊಂಡ  “ಪರ್ದಾ -ಪಾಲಿಗಮಿ’ (ಅನುವಾದಕರು: ದಾದಾಪೀರ್‌ ಜೈಮನ್‌ ) ಕೃತಿ ಮತ್ತು ಇಂಗ್ಲಿಷ್‌ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ನೀಡುವ ಬಹುಮಾನಕ್ಕೆ  ಮಲರಿÌಳಿ ಕೆ. ಅವರ  “ಕಳ್ಳಿಗಾಡಿನ ಇತಿಹಾಸ’ ಕೃತಿ  ಮತ್ತು ಮೋಹನ ಕುಮಾರ ಕುಂಟಾರು ಅವರ  “ಪ್ರೇಮಪತ್ರ’ ಕೃತಿ  ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿವೆ.

ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ ನೀಡುವ ಪುಸ್ತಕ ಬಹುಮಾನಕ್ಕೆ ಡಾ| ಎಚ್‌.ಆರ್‌. ವಿಶ್ವಾಸ ಅವರ  “ಉತ್ತರಕಾಂಡಂ’ ಕೃತಿ ಆಯ್ಕೆ ಆಗಿದೆ. ಪುಸ್ತಕ ಬಹುಮಾನವು ತಲಾ 25 ಸಾವಿರ  ರೂ.  ಬಹುಮಾನ ಮತ್ತು ಪುರಸ್ಕಾರ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next