Advertisement
ಶ್ರೀ ರಾಮಾಯಣ ದರ್ಶನಂ ಮಹಾಛಂದಸ್ಸಿನ ಮಹಾಕಾವ್ಯ. ಖಂಡಜಾತಿಯ ಝಂಪೆತಾಳಕ್ಕೆ ಸುಲಲಿತವಾಗಿ ಹಾಡಬಹುದಾದ ಈ ರಚನೆ ಲಲಿತ ರಗಳೆಯ ಲಯವನ್ನು ಹೊಂದಿದೆ. ಯಕ್ಷಗಾನದ ಹಾಡುಗಳು ವೈವಿಧ್ಯಮಯ ತಾಳಬಂಧಗಳನ್ನು ಹೊಂದಿದೆ. ಕೇವಲ ಝಂಪೆ ತಾಳದ ಹಾಡುಗಳನ್ನೇ ಪ್ರಸಂಗದುದ್ದಕ್ಕೂ ಭಾಗವತರು ಹಾಡಿದರೆ ಅದು ಏಕತಾನತೆಯಿಂದ ನೀರಸವೆನಿಸದೆ ಇರಲಾರದು. ಆದುದರಿಂದ ಯಕ್ಷಗಾನದ ಪ್ರದರ್ಶನಕ್ಕೆ ವೈವಿಧ್ಯಮಯ ತಾಳಗಳು ಮತ್ತು ವಿಧವಿಧದ ರಾಗಪ್ರಯೋಗ ಅನಿವಾರ್ಯ. ಕಾವ್ಯದ ಸಾಲುಗಳನ್ನು ಯಕ್ಷಗಾನದ ಹಾಡುಗಳನ್ನಾಗಿ ಪರಿವರ್ತಿಸುವಾಗ ಇರುವ ಸವಾಲು ಇದೇ. ಈ ಸವಾಲನ್ನು ಭಾರದ್ವಾಜರು ಸಮರ್ಥವಾಗಿ ಎದುರಿಸಿದ್ದಾರೆ.
Related Articles
Advertisement
ಶ್ರೀ ರಾಮಾಯಣ ದರ್ಶನಂ ಕಾವ್ಯದ ಸಾಲುಗಳನ್ನು ಸ್ಮರಿಸುತ್ತಾ ಕೆಳಗಿನ ಹಾಡುಗಳನ್ನು ಗುನುಗಿ ನೋಡಿ.|| ಸಾರಂಗ ಅಟ ||
ಶ್ರೀ ವೀಣಾಪಾಣಿ ವಾಣಿ | ಸಂಗೀತ ಕ | ಲಾವಿನೋದಿನಿ ಕಲ್ಯಾಣಿ
ಕಾವ್ಯ ಕನ್ನಡದ ವಾ | ಗ್ದೇವಿ ಬ್ರಹ್ಮನ ರಾಣಿ
ಪಾವನ ರಸತೀರ್ಥ | ಭಾವಗಂಗಾ ವೇಣಿ ||1||
|| ಬೇಗಡೆ ತ್ರಿವುಡೆ ||
ವೀರ ರಘುಕುಲವಾರ್ದಿಚಂದ್ರಮನೆ |
ದಿಟವೈಸೆ ಈ ಸಂ-|
ಸಾರ ತರುವಿನ ಫಲದ ಸುಖಸ್ಮರಣೆ
ಪೂರ್ವ ಪದ್ಧತಿವಿಡಿದು ಮಾಡುವ
ಘೋರತರ ದಿಗ್ವಿಜಯ ಸಮರದ
ಕ್ರೂರಹಿಂಸೆಯ ತ್ಯಜಿಸಿ ಕರುಣೆಯ
ತೋರುವುದು ಜಗದಾದಿ ಚೇತನ ||1||
ಈ ಹಾಡು ತ್ರಿವುಡೆ, ಏಕ, ಅಷ್ಟತಾಳಗಳಲ್ಲಿ ಹಾಡಲು ಅನುಕೂಲವಾಗಿದೆ || ಸಾಂಗತ್ಯ ರೂಪಕ ||
ಗುರುದೇವ ನಿಮ್ಮ ಕಾರುಣ್ಯದಿಂ ಲಭಿಸಿತು
ತರುಲತೆಗಳ ಹಸಿರುಸಿರು ||
ಪುರದ ಜೀವನೆ ದಾರಿದ್ರé ಸಂಕಟ ವನ್ಯ
ಸಿರಿಯ ಸಂಸ್ಕೃತಿ ಮುಂದೆಯಲು¤ ||1|| || ಕಂದ ||
ಕ್ರತು ಸಂರಕ್ಷಣ ಗೌತಮ
ಸತಿಶಾಪ ವಿಮುಕ್ತಿ ಜಾನಕೀ ಪರಿಣಯ ತಾಂ ||
ಪ್ರತಿಮಾತ್ಮಕ ಕೌಸಲ್ಯಾ
ಸುತದರ್ಶನ ಯಕ್ಷಗಾನದ ಮಹಾಕಾವ್ಯಂ ||1|| ಭಾಮಿನಿ
ಕಾರೊದಲ ಬಿರುಗಾಳಿ ಬೀಸಲು
ಬೇರದುರಿ ತಲೆತಿರುಗಿ ತೊನೆಯುವ
ಭೂರುಹಕೆ ಸಿಡಿಲೊಂದು ಬಡಿಯಲು ನೆಲಕೆ ಬೀಳ್ವಂತೆ
ಕ್ರೂರವಾಕ್ಯವ ಕೇಳ್ದು ಭರತ ಕು-
ಮಾರ ತಾಯಡಿಗುರುಳೆ ಕಂದನ
ಸಾರಿನೆಗಹುತ ಸಂತವಿಟ್ಟಳು ಹೃದಯದೊಸಗೆಯೊಳು || ಹೀಗೆ ಮಾತ್ರಗಣ ಮತ್ತು ಅಂಶಗಣದ ಪದ್ಯಗಳು ಹೃದ್ಯವಾಗಿ ಮೂಡಿ ಬಂದಿದೆ. ಭಾಷೆಯ ಬನಿ ಮೋಹಕವಾಗಿದೆ. ಸ್ಥಾಲೀಪುಲಕ ನ್ಯಾಯದಂತೆ ಒಂದೆರಡು ಹಾಡುಗಳನ್ನು ಮುಂದಿಟ್ಟಿದ್ದೇನೆ. ಈ ಕೃತಿಯ ಸಮಗ್ರ ಸೌಂದರ್ಯವನ್ನು ಹೇಳಬೇಕಾದರೆ ಇಡೀ ಪುಸ್ತಕವನ್ನೇ ಹಾಸಬೇಕಾದೀತು. ಯಕ್ಷರಾಮಾಯಣದ ಮೊದಲ ಕತೃì ಪಾರ್ತಿಸುಬ್ಬ. ಇತ್ತೀಚೆಗೆ ಹೊಸ್ತೋಟ ಮಂಜುನಾಥ ಭಾಗವತರೂ ಯಕ್ಷಗಾನ ರಾಮಾಯಣ ಬರೆದಿದ್ದಾರೆ. ಇದಕ್ಕೊಂದು ಹೊಸ ಸೇರ್ಪಡೆ ಶ್ರೀರಾಮ ಲೀಲಾದರ್ಶನಂ. ಮೊದಲೇ ಪ್ರಸಿದ್ಧವಾಗಿದ್ದ ಕಾವ್ಯವೊಂದನ್ನು ಯಕ್ಷಗಾನದ ಹಾಡುಗಳಲ್ಲಿ ವಿವರಿಸುವುದೇ ದೊಡ್ಡಸವಾಲು. ಭಾರದ್ವಾಜರ ಸೃಜನಶೀಲತೆ, ವಿರಾಟ್ ಪ್ರತಿಭೆ ಅತ್ಯದ್ಭುತವಾಗಿ ಕೆಲಸ ಮಾಡಿದೆ. ಪ್ರಸಂಗಗಳು ಪ್ರದರ್ಶನಗಳಾದರೆ ಸಾಲದು; ದರ್ಶನಗಳಾಗಬೇಕು. ಇದನ್ನು ಕೇವಲ ಕವಿಗಳು ತಿಳಿದರೆ ಸಾಲದು, ಕಲಾವಿದರೂ ತಿಳಿಯಬೇಕು. ಪ್ರದರ್ಶನ ಯೋಗ್ಯವಾದ ಈ ದರ್ಶನ ಯಕ್ಷಗಾನ ಪ್ರಸಂಗ ಸಾಹಿತ್ಯಗಳಲ್ಲೇ ಅನನ್ಯವೆಂದರೆ ಅತಿಶಯೋಕ್ತಿಯಾಗಲಾರದು. ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ ಕಾವ್ಯ ಜ್ಞಾನಪೀಠ ಪ್ರಶಸ್ತಿ ಪಡೆದ ಸುವರ್ಣಸಂಭ್ರಮದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ನೀಡಲ್ಪಟ್ಟ ಬೆಲೆಬಾಳುವ ಉಡುಗೊರೆಯಿದು. ತಾರಾನಾಥ ವರ್ಕಾಡಿ