ಬಂಕುರಾ : ರೇಷನ್ ಕಾರ್ಡ್ ನಲ್ಲಿ ದತ್ತಾ ಬದಲಿಗೆ ಕುತ್ತಾ ಎಂದು ಬರೆದಿದ್ದ ಕಾರಣ ನೊಂದ ವ್ಯಕ್ತಿಯೊಬ್ಬ ಸರಕಾರಿ ಅಧಿಕಾರಿಯ ಎದುರು ಬೌ..ಬೌ..ಬೌ..ಎಂದು ಬೊಗಳಿ ಆಕ್ರೋಶ ಹೊರ ಹಾಕಿದ ಪರಿಣಾಮ ಸತತ ಮೂರು ಬಾರಿ ಹೆಸರು ಬದಲಾವಣೆ ಆಗದೇ ಇದ್ದ ಪ್ರಕ್ರಿಯೆ ಇದೀಗ ಫಲ ಕೊಟ್ಟಿದೆ.
ಅಂದಹಾಗೆ ಶ್ರೀಕಾಂತಿ ದತ್ತಾ ಎಂಬ ವ್ಯಕ್ತಿಯ ಹೆಸರು ಪಡಿತರ ಚೀಟಿಯಲ್ಲಿ ಶ್ರೀಕಾಂತಿ ಕುತ್ತಾ ಎಂದಾಗಿತ್ತು ಪಡಿತರ ಚೀಟಿಯಲ್ಲಿ ಆದ ತಪ್ಪನ್ನು ಸರಿಪಡಿಸಲು ಶ್ರೀಕಾಂತಿ ಮೂರು ಮೂರು ಬಾರಿ ಅಧಿಕಾರಿಗಳ ಬಳಿ ಅರ್ಜಿ ಕೊಟ್ಟರೂ ಹೆಸರು ಮಾತ್ರ ಶ್ರೀಕಾಂತಿ ಕುತ್ತಾ ಎಂದೇ ಬಂದಿತ್ತು, ಇದರಿಂದ ಮನನೊಂದ ಶ್ರೀಕಾಂತಿ ದತ್ತಾ, ಇನ್ನು ಅಧಿಕಾರಿಗಳಿಗೆ ಅರ್ಜಿ ಕೊಟ್ಟು ಪ್ರಯೋಜನವಿಲ್ಲ ಇದಕ್ಕೆ ಬೇರೆ ರೀತಿಯಲ್ಲೇ ಪ್ರತಿಭಟನೆ ನಡೆಸಬೇಕು ಎಂದು ನಿರ್ಧರಿಸಿದ ಶ್ರೀಕಾಂತಿ ಅಧಿಕಾರಿ ಕಾರಿನಲ್ಲಿ ಬರುತ್ತಿದ್ದ ವೇಳೆ ಕಾರಿನ ಬಳಿ ಪಡಿತರ ಚೀಟಿ ಹಾಗೂ ಅರ್ಜಿಯನ್ನು ಹಿಡಿದು ನಿಂತ ಶ್ರೀಕಾಂತಿ ಅಧಿಕಾರಿ ಬಳಿ ಮಾತನಾಡದೆ ನಾಯಿಯ ರೀತಿಯಲ್ಲೇ ಬೌ… ಬೌ… ಬೌ… ಎಂದು ಬೊಗಳಿದ್ದಾನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿತ್ತು ಇದರಿಂದ ಮುಜುಗರಗೊಂಡ ಅಧಿಕಾರಿ ಕೂಡಲೇ ಅರ್ಜಿದಾರನ ಹೆಸರನ್ನು ತಿದ್ದುಪಡಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಇದಾದ ಎರಡೇ ದಿನಕ್ಕೆ ಪಡಿತರ ಚೀಟಿಯಲ್ಲಿ ಶ್ರೀಕಾಂತಿ ಕುತ್ತಾ ಇದ್ದ ಹೆಸರು ಶ್ರೀಕಾಂತಿ ದತ್ತಾ ಎಂದು ಬದಲಾಯಿಸಿದ್ದಾರೆ.