ಕುಷ್ಟಗಿ: ಪಟ್ಟಣದ 5ನೇ ವಾರ್ಡನಲ್ಲಿ ಪುರಸಭೆ ಅನುಮತಿ ಇಲ್ಲದೇ ಮಹಿಳಾ ಶೌಚಾಲಯ ತೆರವಿಗೆ ಮುಂದಾದ ಸಾಮಾಜಿಕ ಕಾರ್ಯಕರ್ತನಿಗೆ ಮಹಿಳೆಯರು ಬುಡಕ್ಕೆ ನೀರು ಕಾಯಿಸಿದ ಘಟನೆ ನಡೆದಿದೆ.
ಪಟ್ಟಣದ 5 ವಾರ್ಡ ನಲ್ಲಿರುವ ಮಹಿಳಾ ಸಾಮೂಹಿಕ ಶೌಚಾಲಯದ ಮರ್ಯಾದೆ ಗೋಡೆ ಈಗಲೂ ಬಳಕೆ ಇದೆ. ಪುರಸಭೆ ಮುಖ್ಯಾಧಿಕಾರಿ ಅನುಮತಿ ಇಲ್ಲದೇ ಭಾನುವಾರ ರಜೆ ದಿನದಂದು, ಪುರಸಭೆ ಆಧ್ಯಕ್ಷರ ಅನುಮತಿ ಇದೆ ಎಂದು ಜೆಸಿಬಿಯಿಂದ ಶೌಚಾಲಯದ ಕಟ್ಟಡ ತೆರವಿಗೆ ಮುಂದಾಗಿದ್ದರು.
ಶೌಚಾಲಯದ ಮೂಲೆಯ ಗೋಡೆ ಒಡೆಯುತ್ತಿದ್ದಾಗ ರೊಚ್ಚಿಗೆದ್ದ ಮಹಿಳೆಯರು ಏಕಾಏಕಿ ಮುತ್ತಿಗೆ ಹಾಕಿ ಕಾರ್ಯಕರ್ತನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ನೀರಿಳಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಜೆಸಿಬಿ ಚಾಲಕ ಹಾಗೂ ಸಾಮಾಜಿಕ ಕಾರ್ಯಕರ್ತ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ಪ್ರತಿಕ್ರಿಯಿಸಿ ಈ ಪ್ರಕರಣದಲ್ಲಿ ಪುರಸಭೆ ಅಧ್ಯಕ್ಷರ ಕುಮ್ಮಕ್ಕು ಇದ್ದು, ಸಾಮಾಜಿಕ ಕಾರ್ಯಕರ್ತ ಪುರಸಭೆ ಅಧ್ಯಕ್ಷರ ಚೇಲಾ ಆಗಿದ್ದಾನೆ.
ಶೌಚಾಲಯದ ಜಾಗೆ ಕಬಳಿಸುವ ಹುನ್ನಾರ ಇದೆ. ಈ ಪ್ರಕರಣ ಬಗ್ಗೆ ಸೋಮವಾರ ಮುಖ್ಯಾಧಿಕಾರಿಗೆ ದೂರು ಸಲ್ಲಿಸುವೆ. ಕ್ರಮ ಕೈಗೊಳ್ಳದೆ ಇದ್ದರೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವೆ ಎಂದಿದ್ದಾರೆ.
ಇದನ್ನೂ ಓದಿ : ಜೂ. 11 : ಕಾಪು ಶ್ರೀ ಹೊಸ ಮಾರಿಗುಡಿ ಜೀರ್ಣೋದ್ಧಾರದ ಮುಂಬಯಿ ಸಮಿತಿ ರಚನೆಗೆ ಪೂರ್ವಬಾವಿ ಸಭೆ