ಕುಷ್ಟಗಿ: ಕುಷ್ಟಗಿ ಪುರಸಭೆ ಪೌರ ಕಾರ್ಮಿಕ ಏಕಾಏಕಿ ನಾಪತ್ತೆಯಾಗಿದ್ದು ಹುಡುಕಾಟ ಮುಂದುವರೆದಿದೆ.
ಕುಷ್ಟಗಿ ಪುರಸಭೆ ದಿನಗೂಲಿ ಸಿಬ್ಬಂದಿ, ಅಂಬೇಡ್ಕರ್ ನಗರದ ನಿವಾಸಿ 45 ವರ್ಷದ ರಾಜಶೇಖರ ಮರಿಯಪ್ಪ ನಾಗೂರು ಅವರು ತ್ಯಾಜ್ಯ ವಿಲೇವಾರಿ ಟ್ರಾಕ್ಟರ್ ಚಾಲಕ ಸೇವೆಯಲ್ಲಿದ್ದರು.
ಕಳೆದ ಮಾರ್ಚ್ 17 ರಂದು ಕೆಲಸಕ್ಕೆ ಹೋಗುವುದಾಗಿ ತಿಳಿಸಿ, ಪುರಸಭೆ ಕೆಲಸಕ್ಕೂ ಹಾಜರಾಗದೇ ಕಣ್ಮರೆಯಾಗಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಮಗಳ ಮದುವೆ ಕಾರಣ ನೀಡಿ ಅನಧಿಕೃತ ಗೈರಾಗಿದ್ದರು. ಮಾರ್ಚ್ 17 ರಂದು ಪತ್ನಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದಾತ ಮರಳಿ ಮನೆಗೆ ಬಂದಿಲ್ಲ.
ಈ ಹಿನ್ನೆಲೆಯಲ್ಲಿ ಕುಟುಂಬದವರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ನಾಪತ್ತೆಯಾದ ಪುರಸಭೆ ಸಿಬ್ಬಂದಿಯನ್ನು ಪತ್ತೆ ಹಚ್ಚುವಂತೆ ಮನವಿ ಮಾಡಲಾಗಿದೆ. ಪುರಸಭೆ ಸಿಬ್ಬಂದಿ ರಾಜಶೇಖರ ನಾಗೂರು ಏಕಾಏಕಿ ಕಣ್ಮರೆ ಪುರಸಭೆ ಸಿಬ್ಬಂದಿಗಳಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಿದೆ.
ಇದನ್ನೂ ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಜಿಗಿತ; ಮಾ.23ರಂದು ನಷ್ಟ ಕಂಡ ಷೇರು ಯಾವುದು?