Advertisement
ಇಲ್ಲಿನ ಆದರ್ಶ ಮಹಾವಿದ್ಯಾಲಯ ಮೈದಾನದಲ್ಲಿ ನಡೆದ ಭಾವೈಕ್ಯತೆ ಬೆಸೆಯುವ ಬೆಳದಿಂಗಳ ಬುತ್ತಿ ಜಾತ್ರೆಯಲ್ಲಿ ಅವರು ಆಶೀರ್ವಚನ ನೀಡಿದರು. ದೇಹದ ತೃಪ್ತಿಗಾಗಿ ವಿವಿಧ ತರಹದ ಅಡುಗೆಗಳಿರಬಹುದು, ಆದರೆ ಮನಸ್ಸಿನ ತೃಪ್ತಿಗಾಗಿ ಈ ರೀತಿಯಾಗಿ ಊಟ ಮಾಡುವವರು. ಮನೆಯಲ್ಲಿ ವಿವಿಧ ತರಹದ ಅಡುಗೆ ಮಾಡಿ ತಾವು ಮಾಡಿದ್ದನ್ನು ಕದ ಹಾಕಿಕೊಂಡು ಕೀಳು ಮಟ್ಟದ ಭಾವನೆಯಲ್ಲಿ ಊಟ ಮಾಡುವುದು ದೇಹದ ತೃಪ್ತಿಯಾಗಿದೆ. ಇದರಿಂದ ದೇಹ ಬಲಿಷ್ಠವಾಗುತ್ತಿದೆ, ಮನಸ್ಸು ದುರ್ಬಲವಾಗುತ್ತಿದೆ. ಅದೇ ರೀತಿ ಕದ ಹಾಕಿಕೊಳ್ಳದೇ ಕರೆದುಕೊಂಡು, ಹಂಚಿಕೊಂಡು, ಮಾತನಾಡಿಕೊಂಡು ಉಣ್ಣುವುದು ಮನಸ್ಸಿನ ತೃಪ್ತಿಗಾಗಿ ಎಂದರು.
ದೇಶಕ್ಕೆ ಬರಗಾಲ ಅನ್ನ ಕೊರತೆಯಿಂದ ಅಲ್ಲ ಚೆಲ್ಲುವುದರಿಂದ ಎಂದು ದಿಂಗಾಲೇಶ್ವರ ಶ್ರೀಗಳ ಕಳವಳ ವ್ಯಕ್ತಪಡಿಸಿದರು. ಮೂವತ್ತನೇ ವರ್ಷಕ್ಕೆ 3 ಹೊತ್ತು, 60ನೇ ವರ್ಷಕ್ಕೆ 2 ಹೊತ್ತು, 60ರ ನಂತರ ಒಂದು ಹೊತ್ತು, 90ರ ನಂತರ ಹಣ್ಣಿನ ರಸ ಸೇವಿಸಬೇಕೆಂದು ಆರೋಗ್ಯ ಸೂತ್ರ ಹೇಳುತ್ತದೆ ಎಂದರು.
Related Articles
Advertisement
ಬೆಳದಿಂಗಳ ಬೆಳಕಲ್ಲಿ ಭೋಜನಈ ಬುತ್ತಿ ಜಾತ್ರೆಯಲ್ಲಿ ತಳವಗೇರಾ, ತೋಪಲಕಟ್ಟಿಯ ಭಕ್ತರು ಬುತ್ತಿಗಂಟಿನೊಂದಿಗೆ ಮೆರವಣಿಗೆಯಲ್ಲಿ ಶರಣಬಸವೇಶ್ವರ ಸನ್ನಿಧಿ ಗೆ ಆಗಮಿಸಿದರು. ಅಲ್ಲಿಂದ ಬುತ್ತಿ ಜಾತ್ರೆ ನಡೆಯುವ ಬಯಲು ಸ್ಥಳದಲ್ಲಿ ಬೆಳದಿಂಗಳ ಬೆಳಕಿನಲ್ಲಿ ಎಲ್ಲರೂ ಸೇರಿ ಶರಣಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಜಂಗಮ ಗಣಾರಾಧನೆ ನಂತರ ತಾವು ತಂದಿರುವ ಬುತ್ತಿಯನ್ನು ಸವಿದರು. ಊಟ ಮಾಡುವಾಗಿನ ಮನಸ್ಸಿನ ಪರಿಣಾಮದಂತೆ ರಕ್ತ ಉತ್ಪತ್ತಿಯಾಗುತ್ತಿದೆ. ಪ್ರತಿಯೊಬ್ಬರೂ ಊಟವನ್ನು ಸಮಾಧಾನದಿಂದ ಮಾಡುವುದನ್ನು ರೂಢಿಸಿಕೊಳ್ಳಬೇಕು.
ಶ್ರೀ ದಿಂಗಾಲೇಶ್ವರ ಸ್ವಾಮೀಜಿ,
ದಿಂಗಾಲೇಶ್ವರಮಠ ಬಾಲೆಹೊಸೂರು ಊಟ ಮಾಡುವಾಗಿನ ಮನಸ್ಸಿನ ಪರಿಣಾಮದಂತೆ ರಕ್ತ ಉತ್ಪತ್ತಿಯಾಗುತ್ತಿದೆ. ಪ್ರತಿಯೊಬ್ಬರೂ ಊಟವನ್ನು ಸಮಾಧಾನದಿಂದ ಮಾಡುವುದನ್ನು ರೂಢಿಸಿಕೊಳ್ಳಬೇಕು.
ಶ್ರೀ ದಿಂಗಾಲೇಶ್ವರ ಸ್ವಾಮೀಜಿ,
ದಿಂಗಾಲೇಶ್ವರಮಠ ಬಾಲೆಹೊಸೂರು