Advertisement

ಕುಷ್ಟಗಿ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಪೊಲೀಸ್ ವಶಕ್ಕೆ

04:01 PM Jun 03, 2022 | Team Udayavani |

ಕುಷ್ಟಗಿ: ಅಕ್ರಮವಾಗಿ ಸಾಗಿಸುತ್ತಿದ್ದ 8.0 ಕ್ಯೂಬಿಕ್ ಮರಳನ್ನು ಟಿಪ್ಪರ್ ಸಮೇತವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಘಟನೆ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮುದೇನೂರು- ದೋಟಿಹಾಳ ಮಾರ್ಗದಲ್ಲಿ ಕೇಸೂರು ಕಡೆಯಿಂದ ಮುದೇನೂರು ಕಡೆ ಹೊರಟಿದ್ದ ಟಿಪ್ಪರ್ ಗೆ ಗಸ್ತು ನಿರತ ಪೊಲೀಸರು ನಿಲ್ಲಿಸಲು ಸೂಚಿಸಿದ್ದಾರೆ. ಟಿಪ್ಪರ್ ಚಾಲಕ‌ ನಿಲ್ಲಿಸುವುದಾಗಿ ನಾಟಕೀಯವಾಗಿ ವರ್ತಿಸಿ, ಮುಂದೆ ಬಂದು, ಟಿಪ್ಪರ್ ನಿಲ್ಲಿಸಿ ಪೊಲೀಸರು ವಿಚಾರಿಸುವ‌ ಮೊದಲೇ ಚಾಲಕ ಸಮೇತ ಇಬ್ಬರು ಆರೋಪಿಗಳು ಅಲ್ಲಿಂದ ಓಟಕಿತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಟಿಪ್ಪರ್ ನಲ್ಲಿದ್ದ 9,600ರೂ. ಮೌಲ್ಯದ 8.0 ಕ್ಯೂಬಿಕ್ ಮರಳು ಹಾಗೂ 10 ಲಕ್ಷರೂ‌. ಮೌಲ್ಯದ ಟಿಪ್ಪರ್ ವಶಕ್ಕೆ ತೆಗೆದುಕೊಂಡಿದ್ದಾಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next