Advertisement

ಕುಷ್ಟಗಿ: ಜಿ.ಪಂ. ಮಾಜಿ ಸದಸ್ಯ ಪ್ರಕಾಶ ರಾಠೋಡ್ ಮರಳಿ‌ ಗೂಡಿಗೆ

10:41 AM Feb 16, 2023 | Team Udayavani |

ಕುಷ್ಟಗಿ: ಬಿಜೆಪಿ ಪಕ್ಷದಲ್ಲಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ ರಾಠೋಡ್ ಹೂಲಗೇರಿ ಮರಳಿ ಕಾಂಗ್ರೆಸ್ ಗೂಡಿಗೆ ಸೇರಿದ್ದಾರೆ.

Advertisement

ಕಳೆದ ಜಿ.ಪಂ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಚಳಗೇರಾ ಜಿ.ಪಂ. ಸದಸ್ಯರಾಗಿದ್ದ ಪ್ರಕಾಶ ರಾಠೋಡ್, ಚಳಗೇರಾ ಕ್ಷೇತ್ರದಿಂದ ಪುನಾರಾಯ್ಕೆ ಬಯಸಿದ್ದರು. ಆಗ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡು ಬಿಜೆಪಿ ಸೇರಿದ್ದರು.

ಫೆ.15 ರಂದು ಬಿಜೆಪಿ ತೊರೆದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಪುನಃ ಕಾಂಗ್ರೆಸ್  ಪಕ್ಷವನ್ನು ಅಧಿಕೃತವಾಗಿ ಹಳೆಯ ಗಂಡನ ಪಾದವೇ ಗತಿ ಎಂಬಂತೆ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next