ಕುಷ್ಟಗಿ: ಇಲ್ಲಿನ ಪೊಲೀಸರು ಕೇವಲ ಒಂದೂವರೆ ಗಂಟೆಯೊಳಗಡೆ ನಂಬರ್ ಪ್ಲೆಟ್ ಇಲ್ಲದ ಬೈಕ್ ಗಳನ್ನು ಗುರುತಿಸಿ ಟೋಯಿಂಗ್ ವಾಹನದಲ್ಲಿ ಹೊತ್ತೋಯ್ದು ನಂಬರ್ ಪ್ಕೇಟ್ ಹಾಕಿಸದ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದರು.
ಸೋಮವಾರ(ನ.28) ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸೈ ಮೌನೇಶ ರಾಠೋಡ್, ಕ್ರೈಂ ವಿಭಾಗದ ಪಿಎಸೈ ಮಾನಪ್ಪ ಹಾಗೂ ಪೊಲೀಸರು ಬೆಳ್ಳಂ-ಬೆಳಗ್ಗೆ ಕಾರ್ಯಾಚರಣೆ ನಡೆಸಿದರು. ಕುಷ್ಟಗಿಯ ಮುಖ್ಯ ರಸ್ತೆಯ ಅಕ್ಕ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕುಗಳಲ್ಲಿ ನಂಬರ್ ಪ್ಲೇಟ್ ಇಲ್ಲದ 100 ಕ್ಕೂ ಅಧಿಕ ವಾಹನಗಳನ್ನು ಗುರುತಿಸಿ, ಟೋಯಿಂಗ್ ವಾಹನದಲ್ಲಿ ಹೊತ್ತೋಯ್ದರು.
ಬೈಕ್ ಸವಾರರು ತಮ್ಮ ವಾಹನಗಳಿಗೆ ನಂಬರ್ ಪ್ಲೇಟ್ ಹಾಕಿಸದೇ ಇರುವುದು ಅಪರಾಧವಾಗಿದ್ದು, ನಂಬರ್ ಪ್ಲೇಟ್ ಬರೆಸಲು ಸೂಚಿಸಿ, ಇನ್ನು ಮುಂದೆ ಇಂತಹ ವಾಹನಗಳು ಕಂಡು ಬಂದರೆ ದಂಡ ಹಾಕಲಾಗುವುದು ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಎಚ್ಚರಿಸಿದರು.