Advertisement
ಕಂದಕೂರು ಸೀಮಾದ ಸ.ನಂ. 130, ಬಿ ಹಿಸ್ಸಾ 20 ಗುಂಟೆ ಜಮೀನಿನಲ್ಲಿ ಈಗಾಗಲೇ 1984ರಲ್ಲಿ ಎನ್.ಎ. ಆಗಿದ್ದು, ಇದರಲ್ಲಿ 8 ಜನರ ಪೈಕಿ 5 ಜನ ಮನೆ ನಿರ್ಮಿಸಿಕೊಂಡಿದ್ದು ಮೂವರ ಹೆಸರಿನಲ್ಲಿ ನಿವೇಶನಗಳಿರುವುದು ವಾಸ್ತವ ಸ್ಥಿತಿ. ಈರಪ್ಪ ಕಡಿವಾಲ, ಶರಣಪ್ಪ ಕಾಮನೂರು, ರುದ್ರಪ್ಪ ಚಕ್ರಸಾಲಿ, ಕೃಷ್ಟಚಾರ ಯಂಕಪ್ಪಾಚಾರಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.
Related Articles
Advertisement
ಸ.ನಂ. 130 ಹಿಸ್ಸಾ ಬಿ 20 ಗುಂಟೆ ಕ್ಷೇತ್ರದ ಜಮೀನು 1984ರಲ್ಲಿ ಎನ್.ಎ. ಆಗಿರುವ ಪಹಣಿ ಕಲಂ 11 ರ ಋಣಗಳು ಕಾಲಂ ನಲ್ಲಿ ದಾಖಲಾಗಿದೆ. ಎನ್.ಎ. ಆಗಿರುವುದನ್ನು ಮರೆಮಾಚಿ ಸದರಿ ಜಮೀನಿನಲ್ಲಿ 5 ಮನೆಗಳು ಮೂರು ಖಾಲಿ ನಿವೇಶನಗಳು ಇದ್ದಾಗ್ಯೂ ಈ ಜಮೀನು ಖರೀಧಿಸಿ ವ್ಯವಸ್ಥಿತವಾಗಿ ಅಕ್ರಮವಾಗಿ ನೊಂದಣಿ ಮಾಡಿಸಿಕೊಂಡಿದ್ದಾರೆ.
ಮನೆಗಳಿರುವ ಜಮೀನು ಯಾವುದೇ ಕಾರಣಕ್ಕೂ ಪರಭಾರೆ ಮಾಡುವುದು ಅಸಿಂಧು ಆಗಿದ್ದಾಗ್ಯೂ ಉಪ ನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ರೆಜಿಸ್ಟೇಷನ್ ಸಂಧರ್ಭದಲ್ಲಿ ಕಂದಾಯ ಭೂಮಿ ಎಂದು ಅದೇ ಗ್ರಾಮದ ಇಬ್ಬರ ಹೆಸರಿಗೆ ನೊಂದಣಿಯನ್ನು ಟಿ. ಬಸವರಾಜ್, ಚನ್ನಮ್ಮ ಗುತ್ತೂರು, ಶಿವಪ್ಪ ಬಿಜಕಲ್, ಈರಪ್ಪ ಕಡಿವಾಲ, ಶರಣ್ಪಪ ಶಿವಸಿಂಪರ್, ಕಳಕಪ್ಪ ಕುಂಬಾರ ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ಉಪ ನೊಂದಣಾಧಿಕಾರಿ ದಾಖಲೆ ಪರಿಶೀಲಿಸದೇ ನೊಂದಣಿ ಮಾಡಿಸಿಕೊಂಡಿದ್ದು ಈ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಮ್ಮ ಎಸ್ ಡಿಎ ರೇವಮ್ಮ ಶಿವಣಗಿ ಅವರು ಪ್ರಭಾರಿ ಸೇವೆಯಲ್ಲಿದ್ದಾಗ ಸದರಿ ಕಂದಾಯ ಕುಷ್ಕಿ ಭೂಮಿ 20 ಗುಂಟೆ ಜಮೀನು ಸಂಗಮ್ಮ ಪ್ರಭುಲಿಂಗಯ್ಯ ಹಿರೇಮಠ ಎಂಬುವರಿಂದ ಶರಣಪ್ಪ ಕುಟುಗಮರಿ, ನಾಗರಾಜ ಹೊಟ್ಟೇರ್ ಖರೀಧಿಸಿದ್ದು, ಸದರಿಯವರ ಹೆಸರಿಗೆ ರೆಜಿಸ್ಟೇಷನ್ ಆಗಿದೆ. ಕೆಲಸದ ಒತ್ತಡದಲ್ಲಿ ಋಣಭಾರ ಗಮನಿಸದೇ ಕಣ್ತಪ್ಪಿನಿಂದ ಆಗಿದೆ. ಇದೀಗ ಕಣ್ತಪ್ಪಿನ ಅರಿವು ಗಮನಕ್ಕೆ ಬಂದಿದ್ದು 46 ಎ ಅನ್ವಯ ಜಿಲ್ಲಾ ನೊಂದಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಅವರಿಂದ ಮುದ್ರಾಂಕ ಶುಲ್ಕ ಪಾವತಿಸಿಕೊಳ್ಳುವೆ.
ಈ ಪ್ರಕರಣದಲ್ಲಿ ನೈಜ ಸ್ಥಿತಿ ಮರೆ ಮಾಚಲಾಗಿದೆ. ಖರೀದಿದಾರರು ಭೌತಿಕವಾಗಿ ಗೊತ್ತಾಗಿಯೇ ಸದರಿ ಜಮೀನು ಖರೀಧಿಸಿದ್ದು, ಖರೀಧಿದಾರರಿಗೆ ನೋಟೀಸ್ ಜಾರಿ ಮಾಡಿ, ಅವರಿಂದ ಸಂದಾವಾಗಬೇಕಾದ ಮುದ್ರಾಂಕ ಶುಲ್ಕ ಕಟ್ಟಿಸಿಕೊಳ್ಳುವೆ. –ನಾಗೆಂದ್ರಪ್ಪ ಮಣೂರು ಪ್ರಭಾರಿ ನೊಂದಣಾಧಿಕಾರಿ ಉಪ ನೊಂದಣಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ