Advertisement

Kushtagi: ಸಾಲಬಾದೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ರೈತ

11:35 AM Jul 01, 2023 | Team Udayavani |

ಕುಷ್ಟಗಿ: ಮಳೆ ಕೈ ಕೊಟ್ಟಿರುವ ಪರಿಣಾಮ ಟ್ರಾಕ್ಟರ್ ಹಾಗೂ ಖಾಸಗಿ ಸಾಲ ತೀರಿಸುವ ಚಿಂತನೆಯಲ್ಲಿ ರೈತರೊಬ್ಬರು ನೇಣಿಗೆ ಶರಣಾದ ಘಟನೆ ಜು.1ರ ಶನಿವಾರ ತಾಲೂಕಿನ ಬೋದೂರು ತಾಂಡದಲ್ಲಿ ನಡೆದಿದೆ.

Advertisement

ವಿಠ್ಠಪ್ಪ ಗೋವಿಂದಪ್ಪ ಚೌವ್ಹಾಣ (62) ಮೃತ ರೈತ.

ಗೋವಿಂದಪ್ಪ ಅವರಿಗೆ ಬೋದೂರು ತಾಂಡದಲ್ಲಿ ಜಮೀನು 3 ಎಕರೆ 20 ಗುಂಟೆ ಜಮೀನಿದ್ದು, ಜಮೀನು ಅಡಿಯಲ್ಲಿ 5 ಲಕ್ಷ ರೂ. ಟ್ರಾಕ್ಟರ್ ಸಾಲ ಇನ್ನೂ 5 ಲಕ್ಷ ರೂ. ಖಾಸಗಿ ಸಾಲ‌ ಸೇರಿದಂತೆ ಒಟ್ಟು10 ಲಕ್ಷ ರೂ. ಮಾಡಿದ್ದರು.

ವಿಠ್ಠಪ್ಪನಿಗೆ ಮೂವರು ಪುತ್ರರರು ಹಾಗೂ ಐವರು ಪುತ್ರಿಯರಿದ್ದು, ಇವರೆಲ್ಲರೂ ಕಬ್ಬು ಕಟಾವಿಗೆ ಮಂಡ್ಯ ಜಿಲ್ಲೆಗೆ ಹೋಗಿದ್ದಾರೆ. ಗ್ರಾಮದಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ ವಿಠ್ಠಪ್ಪ ಮಳೆ ಸಕಾಲಿಕವಾಗಿ ಬಾರದ ಹಿನ್ನೆಲೆ ಮಾಡಿಕೊಂಡಿರುವ ಸಾಲ ತೀರಿಸುವ ಬಗ್ಗೆ ಚಿಂತೆಯಲ್ಲಿದ್ದರು. ಶನಿವಾರ ಬೆಳಗ್ಗೆ ಜಮೀನು ಕಡೆ ಹೋಗುವುದಾಗಿ ಹೇಳಿ ಮರಕ್ಕೆ ನೇಣಿಗೆ ಶರಣಾಗಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಪಿಎಸೈ ಮೌನೇಶ ರಾಠೋಡ್ ಅವರು ಪರಿಶೀಲಿಸಿ ಮೃತ ಪಾರ್ಥಿವ ಶರೀರವನ್ನು ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲಾಗಿದೆ.

Advertisement

ಶಾಸಕ ದೊಡ್ಡನಗೌಡ ಪಾಟೀಲ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

ತಾಲೂಕಿನಲ್ಲಿ ಮುಂಗಾರು ವಿಫಲವಾಗಿದ್ದು ಬರದ ಛಾಯೆ ಆವರಿಸಿದ್ದು, ಸರ್ಕಾರ ಬರ ಎಂದು ಘೋಷಿಸಿಲ್ಲ. ರೈತ ಆತ್ಮಹತ್ಯೆಯ ಈ ಸನ್ನಿವೇಶ ಇತರ ರೈತರನ್ನು ಆತಂಕಕ್ಕೀಡು ಮಾಡಿದೆ.

ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next