Advertisement

ಕುಷ್ಟಗಿ: ಸ್ಪರ್ಧಾತ್ಮಕ ಪರೀಕ್ಷೆ; ಪರೀಕ್ಷಾರ್ಥಿಗಳಿಗೆ ಪ್ರತ್ಯೇಕ ಬಸ್ ಸೌಲಭ್ಯ

11:34 AM Feb 25, 2023 | Team Udayavani |

ಕುಷ್ಟಗಿ: ಕಲಬುರಗಿ, ಬೀದರ್ ನಲ್ಲಿ‌ ಫೆ. 25 ರಂದು ಆಯೋಜನೆಯಾಗಿದ್ದ ಕೆಪಿಎಸ್ ಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಬಸ್ ಸೌಲಭ್ಯ ಇಲ್ಲದೇ ಕಂಗಾಲಾದ ಪರೀಕ್ಷಾರ್ಥಿಗಳಿಗೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಿದ್ದಾರೆ.

Advertisement

50 ವಿದ್ಯಾರ್ಥಿಗಳು ಕೆಪಿಎಸ್ಸಿ ಪರೀಕ್ಷೆಗೆ ಕಲಬುರಗಿ, ಬೀದರ್‌ಗೆ ಪ್ರತ್ಯೇಕವಾಗಿ ಹೋಗಬೇಕಿತ್ತು. ಆ ವೇಳೆ ಬಸ್ ಇಲ್ಲದಿರುವ ಹಿನ್ನೆಲೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಲು ಪರೀಕ್ಷಾರ್ಥಿಗಳು ಡಿಪೋ ಮ್ಯಾನೇಜರ್ ಜಡೇಶ ಅವರಲ್ಲಿ ಮನವಿ ಮಾಡಿದ್ದು, ಇದಕ್ಕೆ ಘಟಕದ ವ್ಯವಸ್ಥಾಪಕ ಅಸಹಾಯಕತೆ ವ್ಯಕ್ತಪಡಿಸಿದ್ದರು.

ಶಾಸಕರಿಗೆ ವಾಸ್ತವ ಸ್ಥಿತಿ ಗಮನಕ್ಕೆ ತಂದಿದ್ದು, ಕೂಡಲೇ ಘಟಕದ ವ್ಯವಸ್ಥಾಪಕ ಜಡೇಶ ಅವರನ್ನು ಸಂಪರ್ಕಿಸಿ ಬೀದರ್, ಕಲಬುರಗಿಗೆ ಪ್ರತ್ಯೇಕವಾಗಿ ಎರಡು ಬಸ್ ಗಳನ್ನು ಬಿಡಲು ಸೂಚಿಸಿದ್ದರಿಂದ ಆತಂಕಗೊಂಡಿದ್ದ ಪರೀಕ್ಷಾರ್ಥಿಗಳು ನಿರಾಳರಾಗಿ ಕಲಬುರಗಿಗೆ 30 ಪರೀಕ್ಷಾರ್ಥಿಗಳು, ಬೀದರಗೆ 20 ಪರೀಕ್ಷಾರ್ಥಿಗಳು ಹೆಚ್ಚುವರಿ ಬಸ್ ನಲ್ಲಿ ಪ್ರಯಾಣ ಬೆಳೆಸಿದರು.

ಈ ಕುರಿತು ಘಟಕ ವ್ಯವಸ್ಥಾಪಕ ಜಡೇಶ ಪ್ರತಿಕ್ರಿಯಿಸಿ, ಚಿಕ್ಕೋಡಿ ಹಾಗೂ ರಾಯಚೂರ ಮಾರ್ಗದ ಬಸ್ ಗಳನ್ನು ವಿಚಲನಗೊಳಿಸಿ ಬೀದರ್ ಹಾಗೂ ಕಲಬುರಗಿಗೆ ಬಸ್ ಬಿಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next