Advertisement
ವೈರಲ್ ಜ್ವರ, ತಲೆ ಮತ್ತು ಕೀಲು ನೋವಿನ ಲಕ್ಷಣ ಕಳೆದೆರೆಡು ವಾರಗಳಿಂದ ಇತ್ತಾದರೂ, ಜನ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಸ್ಥಳೀಯವಾಗಿ ಹಾಗೂ ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಾಗ್ಯೂ ಬಾಧಿತ ಪ್ರಮಾಣ ಹೆಚ್ಚಿದ್ದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಸಾಮಾನ್ಯ ಜ್ವರವೋ? ವಿಷಮಶೀತ ಜ್ವರವೋ? ಚಿಕೂನ್ ಗುನ್ಯಾ, ಡೆಂಘೀ ಜ್ವರವೋ ಎಂಬುದು ತಿಳಿಯದೇ ಗೊಂದಲಕ್ಕೀಡಾಗಿದ್ದರು. ಪೀಡೀತರ ಸಂಖ್ಯೆ ಹೆಚ್ಚುತ್ತಿದ್ದಂತೆ ಆರೋಗ್ಯ ಇಲಾಖೆ ದೌಡಾಯಿಸಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ತಾತ್ಕಾಲಿಕ ಕ್ಲಿನಿಕ್ ಆರಂಭಿಸಲಾಗಿದೆ. ಗ್ರಾಮದಲ್ಲಿ ಆತಂಕದ ವಾತಾವರಣವಿದ್ದು, ವಿಪರೀತ ಜ್ವರ, ಮೈಕೈನೋವು ಹೊಂದಿರುವವರನ್ನು ಆ್ಯಂಬ್ಯುಲೆನ್ಸ್ ನಲ್ಲಿ ಕುಷ್ಟಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.
Related Articles
Advertisement
ನೂರಕ್ಕೂ ಹೆಚ್ಚು ಜನರಲ್ಲಿ ಈ ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿದ್ದಂತೆ ಸ್ವಚ್ಚತೆಗೆ ಇನ್ನಿಲ್ಲದ ಕಾಳಜಿವಹಿಸಿದ್ದು, ಚರಂಡಿಯ ಅಕ್ಕಪಕ್ಕ ಬ್ಲಿಚಿಂಗ್ ಪೌಡರ್ ಹಾಕಿದ್ದು, ಚರಂಡಿಯಲ್ಲಿ ನಿಂತಿರುವ ಕೊಳಚೆ ನೀರನ್ನು ಸಕ್ಕಿಂಗ್ ಮಿಷನ್ ಮೂಲಕ ಹೊರ ಹಾಕಲು ಮುಂದಾಗಿದ್ದಾರೆ.
ಡಿಎಚ್ ಓ ಡಾ. ಲಿಂಗರಾಜು, ತಹಶೀಲ್ದಾರ ರವಿ ಅಂಗಡಿ, ತಾ.ಪಂ. ಸಹಾಯಕ ನಿದರ್ೇಶಕ ನಿಂಗಪ್ಪ ಹಿರೇಹಾಳ ಪಿಎಸೈ ಮುದ್ದುರಂಗಸ್ವಾಮಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಕ್ರಮಕ್ಕೆ ಮುಂದಾದರು.