ಕುಷ್ಟಗಿ: ತಾಲೂಕಿನ ತಾವರಗೇರಾದ ಶ್ಯಾಮೀದಾಲಿ ದರ್ಗಾದ ಆವರಣದಲ್ಲಿ ಏಕಾಏಕಿ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತವಾಗಿದ್ದು, ಕಾಮಗಾರಿ ತಡೆ ಹಿಡಿಯಲಾಗಿದೆ.
ಶ್ಯಾಮೀದಾಲಿ ದರ್ಗಾದ ಪ್ರವೇಶ ದ್ವಾರಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲಿ ಪಾಯ ಅಗೆದಿದ್ದು ಅದರಲ್ಲಿ, ಪಿಲ್ಲರ್ ಅಳವಡಿಕೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಪಿಲ್ಲರ್ ಗೆ ಕಬ್ಬಿಣದ ರಾಡ್ ಗಳನ್ನು ಸಂಗ್ರಹಿಸಿರುವುದು ಕಂಡು ಬಂದಿದೆ.
ಈ ವಿಷಯ ಸೋಮವಾರ ಬೆಳಗ್ಗೆ ಬೆಳಕಿಗೆ ಬರುತ್ತದ್ದಂತೆ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ವಕ್ಫ್ ಬೋರ್ಡ್ ಆಡಳಿತದ ಅಧೀನದಲ್ಲಿರುವ ದರ್ಗಾ ಸಮಿತಿಗೆ ತಹಶೀಲ್ದಾರ್ ಅಧ್ಯಕ್ಷರಾಗಿದ್ದಾರೆ. ಅವರು ಕೊಪ್ಪಳದ ಜಿಲ್ಲಾಡಳಿತ ಸಭೆಯಲ್ಲಿದ್ದ ತಹಶೀಲ್ದಾರ ಗುರುರಾಜ್ ಛಲವಾದಿ ಅವರಿಗೆ ಸೂರ್ಯಕಾಂತ್ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಸ್ಥಾನಿಕ ಪರಿಶೀಲನೆ ನಡೆಸುವವರೆಗೂ ಕಾಮಗಾರಿ ತಡೆ ಹಿಡಿದು ಯಥಾಸ್ಥಿತಿ ಕಾಪಾಡಲು ಸೂಚಿಸಿದ್ದಾರೆ.
ಶ್ಯಾಮೀದಾಲಿ ದರ್ಗಾಕ್ಕೆ ಸರ್ವ ಧರ್ಮಿಯರು ಆರಾಧಕರಾಗಿದ್ದು ಈ ಸ್ಥಳದಲ್ಲಿ ಪ್ರತ್ಯೇಕವಾಗಿ ಮುಸ್ಲಿಂ ಧರ್ಮಿಯರ ಮಸೀದಿ ನಿರ್ಮಿಸುತ್ತಿರುವುದನ್ನು ಸ್ಥಳೀಯರು ಪ್ರಶ್ನಿಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ್ದ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಪ್ರತಿಕ್ರಿಯಿಸಿ, ಶ್ಯಾಮೀದಾಲಿ ದರ್ಗಾ ಆವರಣದಲ್ಲಿ ಏಕಾಏಕಿ ಮಸೀದಿ ನಿರ್ಮಿಸುತ್ತಿರುವುದಕ್ಕೆ ವಿರೋಧ ವ್ಯಕ್ತವಪರಿಶೀಲಿಸಿ, ವಾಸ್ತವ ಸ್ಥಿತಿಯ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಈ ದರ್ಗಾಕ್ಕೆ ತಹಶೀಲ್ದಾರ್ ಅಧ್ಯಕ್ಷರಾಗಿದ್ದು ಈ ಕಾಮಗಾರಿ ಅವರ ಗಮನಕ್ಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ಅವರ ಸಂಪರ್ಕದಲ್ಲಿದ್ದು ಅವರು ಫೋನ್ ಕರೆ ಸ್ವೀಕರಿಸಿಲ್ಲ. ತಹಶೀಲ್ದಾರರು ಖುದ್ದು ಆಗಮಿಸಿ ಪರಿಶೀಲಿ ಕಾಮಗಾರಿ ನಡೆಸದಂತೆ ಸೂಚಿಸಲಾಗಿದೆ. ಅಹಿತಕರ ಘಟನೆ ಆಗದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.