Advertisement

ಕುಷ್ಟಗಿ:ಮಳೆಯಿಂದ ಕಬ್ಬರಗಿ- ಕಾಟಾಪೂರ ರಸ್ತೆ ಜಲಾವೃತ; ಸಂಚಾರ ಅಸ್ತವ್ಯಸ್ತ

10:09 PM Oct 10, 2022 | Team Udayavani |

ಕುಷ್ಟಗಿ:ಸೋಮವಾರ ಮಧ್ಯಾಹ್ನ ಸುರಿದ ಮಳೆಯಿಂದ ಹಳ್ಳದ ಪ್ರವಾಹಕ್ಕೆ ತಾಲೂಕಿನ ಕಬ್ಬರಗಿ- ಕಾಟಾಪೂರ ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿದುಕೊಂಡು ಕೆಲವು ತಾಸು ಸಂಚಾರ ಅಸ್ತವ್ಯಸ್ತಕ್ಕೆ ಕಾರಣವಾದ ಪ್ರಸಂಗ ನಡೆದಿದೆ.

Advertisement

ಸೋಮವಾರ ಮದ್ಯಾಹ್ನ ಕಬ್ಬರಗಿ, ಕಾಟಾಪೂರ ಮೊದಲಾದ ಗ್ರಾಮಗಳಲ್ಲಿ ವ್ಯಾಪಕ ಮಳೆಯಾಗಿದೆ. ಈ ಮಳೆಯಿಂದ ಕಾಟಾಪೂರ-ಕಬ್ವರಗಿ ರಸ್ತೆಯ ಮದ್ಯೆ ಹರಿಯುವ ಮದ್ಯೆ ಜಾತಿಗ್ಯಾನ್ ಹಳ್ಳ ಪ್ರವಾಹ ಹಿನ್ನೆಲೆಯಲ್ಲಿ ಕೆಲವು ತಾಸು ರಸ್ತೆ ಸಂಪರ್ಕ ಕಡಿದುಕೊಂಡಿದ್ದರಿಂದ ಹಳ್ಳದ ಪ್ರವಾಹ ಇಳಿಯುವರೆಗೂ ಕಾಯಬೇಕಾಯಿತು.

ಈ ರಸ್ತೆಯಲ್ಲಿ ಸದರಿ ಹಳ್ಳಕ್ಕೆ ಸೇತುವೆ ನಿರ್ಮಿಸುವುದು ಬಹು ದಿನದ ಬೇಡಿಕೆಯಾಗಿದ್ದರೂ ಜನಪ್ರತಿನಿಧಿಗಳು ಸ್ಪಂಧಿಸಿಲ್ಲ. ಜಾತಿಗ್ಯಾನ್ ಹಳ್ಳಕ್ಕೆ ಪೂಲು (ಪೈಪ್ ಕಲ್ವರ್ಟ ) ನಿರ್ಮಿಸಲು ಮುಂದಾಗಿದ್ದು ಇದಕ್ಕಾಗಿ ತಗ್ಗು ಅಗೆದು ಕೆಲ ದಿನಗಳ ಮಟ್ಟಿಗೆ ಒಂದೆರೆಡು ಪೈಪ್ ಗಳನ್ನು ಹಾಕಲಾಗಿತ್ತು. ನಂತರ ಹಾಕಿದ ಪೈಪ್ ಗಳನ್ನು ಕಿತ್ತಿಕೊಂಡು ಹೋಗಿದ್ದರಿಂದ ಹಳ್ಳ ತುಂಬಿ ಬಂದಾಗ ದಾಟಲಾರದಷ್ಟು ಸಮಸ್ಯೆಯಾಗಿದೆ ಎನ್ನುತ್ತಾರೆ ಗ್ರಾಮದ ಮಂಜುನಾಥ ತಳವಾರ.

ಈ ಹಳ್ಳ ಕಬ್ಬರಗಿ ಹೈಸ್ಕೂಲ್ ಪಕ್ಕದಲ್ಲಿ ಹರಿದು ಹೋಗುತ್ತದೆ. ಸದರಿ ಹಳ್ಳಕ್ಕೆ ಮೂರು ಮೊಳದ ಹಿಟ್ಟಿನ ಬಂಡಿ (ಕಲ್ಲು ಪರ್ಸಿ) ಹೊಂದಿಸಿದ್ದಾಗ ಯಾವ ಸಮಸ್ಯೆ ಆಗಿರಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಪೂಲು ನಿರ್ಮಿಸಲು ಮುಂದಾಗಿ ಹಳ್ಳದ ದಾರಿ ಹದಗೆಡಿಸಿದ್ದಾರೆ. ಆಗ ಹಳ್ಳ ಕಟ್ಟಿದರು ಪ್ರವಾಹ ಇಳಿದ ನಂತರ ರಸ್ತೆ ಸಂಪರ್ಕ ಸಲೀಸಾಗುತ್ತಿತ್ತು. ಈಗ ಮಳೆ ಬಂದರೆ ಸಾಕು ಹಳ್ಳ ಕಟ್ಟುತ್ತಿದ್ದು ಸಂಪರ್ಕ ಕಡಿದುಕೊಳ್ಳುತ್ತಿದ್ದು ಸಮಸ್ಯೆಗೆ ಕಾರಣವಾಗಿದೆ ಎಂದು ತಾ.ಪಂ. ಮಾಜಿ ಅಧ್ಯಕ್ಷ ಸಿದ್ದಪ್ಪ ಆವಿನ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next