Advertisement

ಕುಷ್ಟಗಿ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

09:32 AM Oct 10, 2022 | Team Udayavani |

ಕುಷ್ಟಗಿ: ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಹಾಗೂ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗಡಚಿಂತಿ ಮೊದಲಾದ ಗ್ರಾಮಗಳ‌ ಗ್ರಾಮಸ್ಥರನ್ನು ನಿದ್ದೆಗೆಡಿಸಿದ್ದ ಗಂಡು ಚಿರತೆ ಮಾಲಗಿತ್ತಿ ಅರಣ್ಯ ಪ್ರದೇಶದ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.

Advertisement

ಈ ಚಿರತೆ ಊರಿನ ನಾಯಿ, ಹಸು ತಿಂದು ಹಾಕಿ ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿತ್ತು. ಇದರ ಹಾವಳಿಗೆ ಮಾಲಗಿತ್ತಿ, ಗಡಚಿಂತಿ, ನಾಗೇಂದ್ರಗಡ ಸುತ್ತಮುತ್ತಲಿನ ಗ್ರಾಮಸ್ಥರು ಕಂಗೆಟ್ಟಿದ್ದರು. ಈ ಹಿನ್ನೆಲೆಯಲ್ಲಿ ದನಗಾಯಿ, ಕುರಿಗಾಯಿಗಳು ಅರಣ್ಯ ಪ್ರದೇಶದಲ್ಲಿ ಕುರಿ, ದನ ಮೇಯಿಸುವುದಕ್ಕೆ, ರೈತರು ಒಬ್ಬಂಟಿಯಾಗಿ ಜಮೀನುಗಳಿಗೆ ಹೋಗುವುದಕ್ಕೂ ಜೀವ ಭಯ ಸೃಷ್ಟಿಸಿತ್ತು.

ಈ ಹಿನ್ನೆಲೆಯಲ್ಲಿ ಕಳೆದ ಶನಿವಾರ ನಾಗೇಂದ್ರಗಡ, ಗಡಚಿಂತಿ, ಮಾಲಗಿತ್ತಿ ಗುಡ್ಡದಲ್ಲಿ ಚಿರತೆ ಬೋನಿನ ವ್ಯವಸ್ಥೆ ಮಾಡಿದ್ದರು. ಬೋನು ಇಟ್ಟು ಮೂರು ದಿನಗಳಲ್ಲಿ ಚಿರತೆ ಸೆರೆಯಾಗಿದ್ದು, ಬಹು ದಿನಗಳ ಆತಂಕ ನಿವಾರಣೆಯಾಗಿದೆ.

ಈ ಚಿರತೆ ಸೆರೆಯಾಗಿಸಲು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಮೆಣಸಿನಕಾಯಿ, ಉಪ ವಲಯ ಅರಣ್ಯಾಧಿಕಾರಿ ಲಾಲ್ ಸಾಬ್ ಸೂಳಿಬಾವಿ, ಅರಣ್ಯ ರಕ್ಷಕ ಕಳಕಪ್ಪ ಬ್ಯಾಳಿ ಶಂಕರಗೌಡ ಅಕ್ಕೇರೆ ಹಾಗೂ ವಾಸ ಸ್ಥಳದ ಮಾಯಪ್ಪ ಶೇಖಪ್ಪ ದೇವಪ್ಪ ಇವರ ಕಾರ್ಯಕ್ಕೆ‌ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಮೆಣಸಿನಕಾಯಿ ಉದಯವಾಣಿ ಪ್ರತಿನಿಧಿಯೊಂದಿಗೆ ಪ್ರತಿಕ್ರಿಯಿಸಿ, ಮಾಲಗಿತ್ತಿ ಗುಡ್ಡದಲ್ಲಿ ಸೆರೆ ಸಿಕ್ಕ ಚಿರತೆ ವಯಸ್ಕ ಚಿರತೆಯಾಗಿದ್ದು, ಅಂದಾಜು ಐದಾರು ವರ್ಷಗಳ‌ ಚಿರತೆಯಾಗಿದೆ. ಈ ಚಿರತೆಯನ್ನು ಮೇಲಾಧಿಕಾರಿಗಳ‌ ನಿರ್ದೇಶನದ ಮೇರೆಗೆ ಸುರಕ್ಷಿತ ಪ್ರದೇಶಕ್ಕೆ ಸಾಗಿಸಲಾಗುವುದು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next