Advertisement
ಹೌದು ತಾಲೂಕಿನ ವಣಗೇರಾ ಗ್ರಾಮದ ರೈತ ಹನುಮಂತಪ್ಪ ಉಚ್ಚೆಳ್ಳಿ ಹಲವು ವರ್ಷಗಳಿಂದ ಸುಗಂ , ಚಂಡು ಹೂವು, ಗಲಾಟಿ ಹೂವುಗಳನ್ನು ನಿರಂತರ ಬೆಳೆಯುವ ಮೂಲಕ ಆದಾಯ ಗಳಿಸುತ್ತಿದ್ದಾರೆ. ರೈತ ಹಾಗೂ ಮಾರಾಟಗಾರ ಮಧ್ಯೆ ಒಪ್ಪಂದದ ದರದಲ್ಲಿ ಹೂವುಗಳನ್ನು ಬೆಳೆಯುವ ರೈತ ಹನುಮಂತಪ್ಪ ಉಚ್ಚೆಳ್ಳಿ ಅವರು, ಚೆಂಡು ಹೂವು ಒಪ್ಪಂದದನ್ವಯ ಬೇಸಿಗೆಯಲ್ಲಿಯೂ ಬೆಳೆದಿದ್ದಾರೆ. ಇವರ ತೋಟದ ಚೆಂಡು ಹೂವು ಇನ್ನೂ 15 ದಿನಗಳಲ್ಲಿ ಕಟಾವು ಕೊನೆಗೊಳ್ಳುತ್ತಿದ್ದು, ಮುಂದಿನ ದಸರಾ, ದೀಪಾವಳಿ ಹಬ್ಬಕ್ಕಾಗಿ ಸುಗಂಧಿ , ಗಲಾಟಿ, ಚೆಂಡು ಹೂವಿನ ಬೆಳೆಯೊಂದಿಗೆ ಕುಂಬಳಕಾಯಿ ಬಳ್ಳಿ ನಾಟಿ ಮಾಡಿದ್ದಾರೆ.
ಮಾರುಕಟ್ಟೆಯಲ್ಲಿ ಎರಡ್ಮೂರು ಪಟ್ಟು ದರ ಇರುತ್ತಿದೆ. ಮಾರಿಗೋಲ್ಡ್ ಹೈಬ್ರಿàಡ್ ತಳಿಯ ಈ ಚೆಂಡು 1 ತೊಲೆ ಬೀಜ 1 ಸಾವಿರಕ್ಕೆ 2,250 ರೂ. ಇದನ್ನು ನರ್ಸರಿಯಲ್ಲಿ ಬೆಳೆಸಿಕೊಡಲು 1 ಟ್ರೇಗೆ (98 ಸಸಿ) 400 ರೂ. ವೆಚ್ಚವಾಗಿದೆ. ನಾಟಿ ಮಾಡಿದ ಒಂದು ತಿಂಗಳಿಗೆ ಇಳುವರಿ ಆರಂಭವಾಗುತ್ತಿದ್ದು, ದಿನವೂ ಕಟಾವು ಆಗುವ ಬೆಳೆ ಇದಾಗಿದೆ. ಎರಡೂವರೆ ತಿಂಗಳಿನವರೆಗೂ ಇಳುವರಿ ಸಿಗುತ್ತಿದೆ. ಆರಂಭದಲ್ಲಿ ಪ್ರತಿ ದಿನ 1 ಟನ್ ಸರಾಸರಿ ಇಳುವರಿ ಕೊನೆಯ ಹಂತದಲ್ಲಿ 30 ಕೆ.ಜಿ. ಸಿಗುತ್ತಿದೆ. ಇದರಿಂದ 1 ಲಕ್ಷ ರೂ. ಆದಾಯ ಬರುತ್ತಿದೆ. ಬೀಜ, ಗೊಬ್ಬರ ನಿರ್ವಹಣೆ ಖರ್ಚು 25 ಸಾವಿರ ರೂ. ಆದರೆ ನಿವ್ವಳ ಲಾಭ 75 ಸಾವಿರ ರೂ. ಸಿಗಲಿದ್ದು ಇದೇ ಬೆಳೆ ಆಗಸ್ಟ್, ಸೆಪ್ಟೆಂಬರ್, ನವೆಂಬರ ತಿಂಗಳಲ್ಲಿ ಆಗಿದ್ದಲ್ಲಿ 1 ಕರೆಗೆ 3 ಟನ್ ನಷ್ಟು ಇಳುವರಿ ಸಿಗಲಿದೆ. ನಮಗೆ ಮಾರುಕಟ್ಟೆ ದರದ ಏರಿಳಿತ ಅನ್ವಯಿಸುವುದಿಲ್ಲ. ನಾವು ಹೂವು ಮಾರಾಟಗಾರರೊಂದಿಗೆ ನಿಗದಿತ ಒಂದು ದರ ಒಪ್ಪಂದ ಮಾಡಿಕೊಂಡಿರುತ್ತೇವೆ, ನಾವು ಈ ಬೆಳೆದ ಬೆಳೆಗೆ ನಷ್ಟವಿಲ್ಲ ನಿರಂತರ ಆದಾಯವಿದೆ ಎನ್ನುತ್ತಾರೆ ರೈತ ಹನುಮಂತಪ್ಪ ಉಚ್ಚೆಳ್ಳಿ.
Related Articles
ಹನುಮಂತಪ್ಪ ಉಚ್ಚೆಳ್ಳಿ, ಹೂವು ಬೆಳೆಗಾರ, ವಣಗೇರಾ
Advertisement
ಹನುಮಂತಪ್ಪ ಉಚ್ಚೆಳ್ಳಿ ಪ್ರತಿ ವರ್ಷವೂ ಪರಿಶ್ರಮದಿಂದ ಹೂವು ಬೆಳೆಯುತ್ತಿದ್ದಾರೆ. ಅವರ ಜಮೀನಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಂತರ್ಜಲ ಕೊರತೆಯ ನಡುವೆಯೂ ಲಭಿಸಿದ ನೀರಲ್ಲಿ ಕಷ್ಟ ಪಟ್ಟು ಬೆಳೆ ತೆಗೆಯುತ್ತಿದ್ದಾರೆ. ಇಂತಹ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯ ಪ್ರೋತ್ಸಾಹ ಅಗತ್ಯವಾಗಿದೆ.ಮುತ್ತಪ್ಪ ಬಾವಿಕಟ್ಟಿ, ವಣಗೇರಾ ಗ್ರಾಮಸ ಮಂಜುನಾಥ ಮಹಾಲಿಂಗಪುರ