Advertisement

ಕುಷ್ಟಗಿ: ಕಾಮಗಾರಿ ಹಂತದ ರಸ್ತೆಯಲ್ಲಿ ಟ್ರಕ್ ಸಿಲುಕಿ ಪರದಾಟ

09:48 PM Dec 19, 2022 | Team Udayavani |

ಕುಷ್ಟಗಿ:ಇಲ್ಲಿನ ವಾಲ್ಮೀಕಿ ವೃತ್ತದ ತಿಕೋಟಿಕರ್ ಪೆಟ್ರೋಲ್ ಬಂಕ್ ಬಳಿ ಕಾಮಗಾರಿ ಹಂತದ ರಸ್ತೆಯಲ್ಲಿ ಸಿಲುಕಿಕೊಂಡಿದ್ದ 14 ಚಕ್ರದ ಟ್ರಕ್ ಹೊರಗೆಳೆಯುವ ಕಾರ್ಯಾಚರಣೆ ವಿಫಲವಾಗಿದೆ.

Advertisement

ಪುರಸಭೆ ಎನ್ ಎಫ್ ಸಿ ಅನುದಾನದಲ್ಲಿ ಅಂದಾಜು ವೆಚ್ 4 ಕೋಟಿ ರೂ. ವೆಚ್ಚದಲ್ಲಿ ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯ ಅಭಿವೃದ್ದಿ ಕಾರ್ಯದಲ್ಲಿ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿ ಸಾಗುತ್ತಿದೆ. ಸದರಿ ಕಳೆದ ಕಾಮಗಾರಿಯ ರಸ್ತೆಯನ್ನು ಅಗೆಯುವ ವೇಳೆ ಕೃಷ್ಣ ನದಿ ,ನೀರಿನ ಪೂರೈಸುವ ಪೈಪ್ ಧ್ವಂಸವಾಗಿದ್ದು, ಅದರ ಮೇಲೆ ಜಲ್ಲಿ ಕಲ್ಲು ಹಾಕಲಾಗಿತ್ತು. ವಿಜಯಪುರ ಮೂಲದ ಲಾರಿ, ಸಾಬೂನು ಬಾಕ್ಸ್ ತಿಕೋಟಿಕರ್ ಬಂಕ್ ಹಿಂಬಾಗದ ಗೋದಾಮಿಗೆ ಇಳಿಸಲು ಬಂದಾಗ, ಲಾರಿ ಚಾಲಕನಿಗೆ ಗೊತ್ತಾಗದೇ ಸಂಚರಿಸಿದ್ದರಿಂದ ಅಲ್ಲಿಯೇ ಟ್ರಕ್ ನ 8 ಗಾಲಿಗಳು ಹುದುಗಿವೆ.

ಜೆಸಿಬಿ, ಕ್ರೇನ್ ಮೂಲಕ ಟ್ರಕ್ ಮೇಲಕ್ಕೆ ಎತ್ತಲು ಪ್ರಯತ್ನಿಸಿದರಾದರೂ, ಬಂಕ್ ಮಾಲೀಕರು ಸದರಿ ಕಾರ್ಯಾಚರಣೆ ಸ್ಥಳವಕಾಶ ಕಲ್ಪಿಸಲಿಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆಯಾದರೂ ಟ್ರಕ್ ಸಿಲುಕಿಕೊಂಡ ಸ್ಥಿತಿಯಲ್ಲಿದ್ದು, ಪುರಸಭೆ, ರಸ್ತೆ ಗುತ್ತಿಗೆದಾರರು, ಲಾರಿ ಮಾಲೀಕರಿಗೆ ಇಕ್ಕಟ್ಟಿಗೆ ಸಿಲುಕಿಸಿದೆ.

ದ್ವಿಪಥ ರಸ್ತೆಯಾಗಿದ್ದರಿಂದ ಈ ಸ್ಥಳದಲ್ಲಿ ವಾಹನಗಳು ಏಕಮುಖವಾಗಿ ಸಂಚರಿಸುತ್ತಿದ್ದು ಟ್ರಕ್ ರಸ್ತೆಗೆ ಅಡ್ಡವಾಗಿ ನಿಂತಿದ್ದು, ಟ್ರಕ್ ಮೇಲಕ್ಕೆಬ್ಬಿಸದ ಹೊರತು, ಪೈಪಲೈನ್ ದುರಸ್ಥಿ ಸಾದ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಪುರಸಭೆ ಜೆಇ ಜಹಾಂಗೀರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next