Advertisement

Kushalnagar: 1,008 ಭಕ್ತರಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ

10:00 AM Dec 29, 2023 | Team Udayavani |

ಉಡುಪಿ: ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಸಂಕರ್ಷಣ ಪ್ರಖಂಡ ಕೋಟಿ ಗೀತಾ ಲೇಖನ ಯಜ್ಞ ಪರಿವಾರದ ವತಿಯಿಂದ ಬೃಹತ್‌ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ ಸಮಾರಂಭ ಡಿ. 27ರಂದು ನೆರವೇರಿತು.

Advertisement

ದಾಖಲೆಯ 1,008 ಮಂದಿ ಭಕ್ತರು ದೀಕ್ಷೆ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾವೀ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಹೋನ್ನತ ಧಾರ್ಮಿಕ ಜಾಗತಿಕ ಸಂಕಲ್ಪ ಕೋಟಿ ಗೀತಾ ಲೇಖನ ಯಜ್ಞಕ್ಕೆ 10800 ಯಜ್ಞಕರ್ತರನ್ನು ನೋಂದಣಿ ಮಾಡಿಸಲು ಸ್ವತಃ ಶ್ರೀಪಾದರು ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಪುತ್ತಿಗೆ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯದ ಪ್ರಧಾನ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಮಾತನಾಡಿ, ಗೀತೆಯು ಜೀವನ ಪಯಣದಲ್ಲಿ ದಾರಿದೀಪವಿದ್ದಂತೆ. ಅದು ನಮ್ಮನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತದೆ. ಗೀತೆಯನ್ನು ಓದುವುದರಿಂದ ಮನಸ್ಸು ದೃಢವಾಗಿ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ.

ಚಿಕ್ಕ ವಯಸ್ಸಿನಲ್ಲಿಯೇ ಗೀತೆಯನ್ನು ಓದಿದರೆ ಜೀವನವನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ಪೂರಕವಾಗಲಿದೆ ಹಾಗೂ ಭಗವದ್ಗೀತೆ ಬರೆಯುವ ಮೂಲಕ ತಮ್ಮ ಬೌದ್ಧಿಕ ಸ್ತರವನ್ನು ವಿಸ್ತಾರ ಮಾಡಿಕೊಳ್ಳಲು ಉತ್ತಮ ಅವಕಾಶ. 1,008 ಭಕ್ತರು ದೀಕ್ಷೆ ಸ್ವೀಕರಿಸಿದ್ದೀರಿ, ಇದರ ಹತ್ತು ಪಟ್ಟು ಭಕ್ತರಿಗೆ ಪ್ರತಿಜ್ಞೆ ವಿಧಿ ಬೋಧಿಸುವ ಸಂಕಲ್ಪವಾಗಬೇಕು ಎಂದು ಆಶೀರ್ವಚನ ನೀಡಿದರು.

ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next