Advertisement

ವಿವೇಕಾನಂದರ ತತ್ವ ಸಿದ್ಧಾಂತ ಅಧ್ಯಯನ ಅಗತ್ಯ’

09:40 AM Jan 15, 2019 | Team Udayavani |

ಮಡಿಕೇರಿ : ಸ್ವಾಮಿ ವಿವೇಕಾನಂದರ ತಣ್ತೀಸಿದ್ದಾಂತಗಳ ಅಧ್ಯಯನ ಮೂಲಕ ಜೀವನಕ್ಕೆ ಉತ್ತಮ ಸಂದೇಶಗಳು ದೊರಕಲಿವೆ ಎಂದು ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಶ್ರೀಸ್ವಾಮಿ ಬೋಧ ಸ್ವರೂಪಾನಂದ ಕರೆ ನೀಡಿದ್ದಾರೆ. ಕುಶಾಲನಗರದಲ್ಲಿ ಟುಲಿಪ್‌ ಟ್ರಸ್ಟ್‌, ವಿಕಾಸ ಜನಸೇವಾ ಟ್ರಸ್ಟ್‌ ಮತ್ತು ಜೀವನದಾರಿ ಟ್ರಸ್ಟ್‌ ಸಹಯೋಗದಲ್ಲಿ ನಡೆದ ವಿವೇಕಾನಂದರ 156ನೇ ಜನ್ಮದಿನಾಚರಣೆಯ‌ಲ್ಲಿ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಮಾತನಾಡಿದರು.

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ಬಿ.ಜಿ.ಅನಂತಶಯನ ಮಾತನಾಡಿ, ಪ್ರತಿಯೊಬ್ಬರೂ ಕ್ರಾಂತಿಕಾರಿ ಚಿಂತನೆ ಹೊಂದಬೇಕಾಗಿದೆ. ದೈವತ್ವ, ಆಧ್ಯಾತ್ಮಿಕ ಬಗ್ಗೆ ಅರಿವು ಪಡೆಯುವುದು, ಗುರುಹಿರಿಯರ ಆಶೀರ್ವಾದದ ಮೂಲಕ ಚೈತನ್ಯ ಹೊಂದಲು ಸಾಧ್ಯ ಎಂದ ಅವರು, ನಂಬಿಕೆ ಇದ್ದಲ್ಲಿ ಆತ್ಮಶಕ್ತಿ ಪಡೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕ್ಕಳಿಗೆ ಸಂಸ್ಕಾರಯುತ ಬದುಕು ಸಾಗಿಸಲು ಪೋಷಕರು ಸೂಕ್ತ ಮಾರ್ಗದರ್ಶನ ನೀಡಬೇಕಿದೆ. ಸಾಧುಸಂತರನ್ನು ಗೌರವಿಸುವ ಮೂಲಕ ದೈವಶಕ್ತಿ ಪಡೆಯಲು ಸಾಧ್ಯ ಎಂದರು.

ಚರ್ಚಾಸ್ಪರ್ಧೆ
ಅತಿಥಿಗಳಾಗಿ ಪಾಲ್ಗೊಂಡ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಸಾಮಾಜಿಕ ಕಾರ್ಯಕರ್ತ ಎಸ್‌.ಮುರುಗೇಶ್‌ ಮಾತನಾಡಿದರು. ಈ ಸಂದರ್ಭ ಅತಿಥಿಗಳಿಗೆ ಟ್ರಸ್ಟ್‌ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ನಡೆದ ಚರ್ಚಾಸ್ಪರ್ಧೆ, ನಾಟಕ ಮತ್ತು ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಟ್ರಸ್ಟ್‌ ಅಧ್ಯಕ್ಷ ಚಂದನ್‌, ಕಾರ್ಯದರ್ಶಿ ಸಹನ, ಖಜಾಂಚಿ ಜಗ್ಗೇಶ್‌, ಟ್ರಸ್ಟಿ ನಿರಂಜನ್‌, ವಿಕಾಸ ಜನಸೇವಾ ಟ್ರಸ್ಟ್‌ ಅಧ್ಯಕ್ಷ ರಮೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.