Advertisement

Exclusive; ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನ, ನಿಖಿಲ್ ಅಭಿಮನ್ಯು

01:06 PM Jul 20, 2017 | Team Udayavani |

“ಜಾಗ್ವಾರ್‌’ ಚಿತ್ರದ ನಂತರ ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ಚಿತ್ರ ಯಾವುದಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಅವರದೇ ನಿರ್ಮಾಣ ಸಂಸ್ಥೆಯಲ್ಲಿ ಒಂದು ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆಯಿತಾದರೂ, ಅದು ಕಾರಣಾಂತರಗಳಿಂದ ನಿಂತು ಹೋಯಿತು. ಈ ಮಧ್ಯೆ, ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರಕ್ಕೆ ನಿಖೀಲ್‌ ಆಯ್ಕೆಯಾಗಿದ್ದಾರೆ.

Advertisement

ಹೌದು, ಮುನಿರತ್ನ ನಿರ್ಮಾಣದ ಮತ್ತು ನಾಗಣ್ಣ ನಿರ್ದೇಶನದ “ಕುರುಕ್ಷೇತ್ರ’ ಚಿತ್ರವು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಈಗ ಈ ಚಿತ್ರಕ್ಕೆ ನಿಖಿಲ್ ಸೇರ್ಪಡೆಯಾಗಿದ್ದಾರೆ. ನಿಖೀಲ್‌ ಅವರ ಪಾತ್ರವೇನು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಈ ಚಿತ್ರದಲ್ಲಿ ನಿಖೀಲ್‌, ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೋಮವಾರ ಟೆಸ್ಟ್‌ ಶೂಟ್‌ ನಡೆಯಲಿದ್ದು, ಅಭಿಮನ್ಯು ಪಾತ್ರದಲ್ಲಿ ನಿಖೀಲ್‌ ಹೇಗೆ ಕಾಣಿಸುತ್ತಾರೆ ಎಂಬುದು ಗೊತ್ತಾಗಲಿದೆ.

ಈ ಚಿತ್ರದಲ್ಲಿ ದರ್ಶನ್‌ ಅವರು ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡರೆ, ಶ್ರೀಕೃಷ್ಣನಾಗಿ ರವಿಚಂದ್ರನ್‌ ಇದ್ದಾರೆ. ಇನ್ನು ಹರಿಪ್ರಿಯಾ, ರೆಜಿನಾ ಕಸಾಂಡ್ರಾ, ಸ್ನೇಹ, ಶ್ರೀನಾಥ್‌, ಜಿ.ಕೆ. ಶ್ರೀನಿವಾಸಮೂರ್ತಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಈ ತಿಂಗಳ ಕೊನೆಗೆ ನಿಗದಿಯಾಗಿದ್ದು, ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next