Advertisement

ನಿಗದಿತ ಬೆಲೆಗಾಗಿ ಭತ್ತ ಬೆಳೆಗಾರರ ಕನವರಿಕೆ

05:30 PM May 03, 2020 | Naveen |

ಕುರುಗೋಡು: ಪ್ರಸಕ್ತ ವರ್ಷ ಬೇಸಿಗೆಯ ಸಾಲಿನ ಭತ್ತದ ಬೆಳೆಯ ಇಳುವರಿ ಉತ್ತಮವಾಗಿದ್ದು, ನಿಗದಿತ ಬೆಲೆ ದಿನೇ-ದಿನೇ ಕುಸಿಯುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

Advertisement

ಈ ಭಾಗದ ರೈತರ ಪ್ರಮುಖ ಬೆಳೆಯಾಗಿರುವ ಭತ್ತ ಕಳೆದ ಮೂರು ವರ್ಷಗಳಿಂದ ಬೆಂಬಲಿತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಭತ್ತ ಉತ್ತಮ ಇಳುವರಿ ಇದ್ದರೂ ಬೆಲೆಯಲ್ಲಿ ಇಳಿಮುಖೀವಾಗಿ ರೈತರ ಮುಖದಲ್ಲಿ ಸಂತಸ ತೊರದಂತಾಗಿದೆ. ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಇಲ್ಲದ ಕಾರಣ ರೈತರು ಆರ್ಥಿಕ ಬಿಕ್ಕಟ್ಟಿನ ಒಳಗಾಗಿದ್ದಾರೆ.

ಭತ್ತ ನಾಟಿ ಮಾಡಿದಾಗಿನಿಂದ ಕಟಾವುಗೆ ಬರುವ ತನಕ ಅತಿ ಹೆಚ್ಚು ಖರ್ಚು ಭರಿಸಿದರೂ ಅದಕ್ಕೆ ಪ್ರತಿಯಾಗಿ ತಕ್ಕಂತೆ ಬೆಲೆ ದೊರೆಯದ ಪರಿಣಾಮ ರೈತರ ಸ್ಥಿತಿ ಚಿಂತಾಜನಕವಾಗಿದೆ.
ಕೇಂದ್ರ ಸರಕಾರ ಭತ್ತಕ್ಕೆ ಕ್ವಿಂಟಲ್‌ಗೆ 1,815 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ ಪ್ರಸಕ್ತ ಮಾರುಕಟ್ಟೆಯಲ್ಲಿ ದಲ್ಲಾಳಿಗಳು 215 ರೂ. ಕಡಿಮೆ ಮಾಡಿದ್ದು, 1,600 ರೂ. ವರೆಗೆ ಭತ್ತವನ್ನು ರೈತರಿಂದ ಖರೀದಿ ಮಾಡಲು ಮುಂದಾಗಿದ್ದಾರೆ.

ಕುರುಗೋಡು ವ್ಯಾಪ್ತಿಯಲ್ಲಿ ಗೆಣಿಕೆಹಾಳ್‌, ಗುತ್ತಿಗನೂರು, ಓರ್ವಾಯಿ, ಮುಷ್ಟಗಟ್ಟಿ, ಸಿಂದಿಗೇರಿ, ಕ್ಯಾದಿಗೆಹಾಳ್‌, ಎಚ್‌. ವೀರಾಪುರ, ಮಣ್ಣೂರು, ಸೂಗೂರು ಭಾಗದಲ್ಲಿ ಬೇಸಿಗೆಯಲ್ಲಿ ಅತಿ ಹೆಚ್ಚು ಭತ್ತ ನಾಟಿ ಮಾಡಿದ್ದಾರೆ. ಬೆಳೆ ಕಟಾವು ಕೊನೆ ಹಂತದಲ್ಲಿ ಸಾಗಿದ್ದು, ಹಲವಾರು ರೈತರು ಒಕ್ಕಲು ಮಾಡಿದ್ದಾರೆ. ಉತ್ತಮ ದರಕ್ಕಾಗಿ ಕನವರಿಸುತ್ತಿದ್ದಾರೆ.

ಒಂದು ಎಕರೆ ಭತ್ತ ನಾಟಿ ಮಾಡಿ ಬೆಳೆದು ಮಾರಾಟ ಮಾಡುವವರೆಗೆ ರೈತರಿಗೆ ಕನಿಷ್ಠ 30 ರಿಂದ 40 ಸಾವಿರ ವೆಚ್ಚವಾಗುತ್ತದೆ. ಖರೀದಿದಾರ ಹಾಗೂ ಮಧ್ಯವರ್ತಿಗಳಿಂದ ಬೆಲೆ ಕುಸಿತಗೊಂಡು ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ರಾಜ್ಯ ಸರಕಾರ ತಕ್ಷಣ ಭತ್ತಕ್ಕೆ ಸೂಕ್ತ ದರ ನಿಗದಿ ಮಾಡಬೇಕು.
ಮುಷ್ಟಗಟ್ಟಿ ಭೀಮನಗೌಡ,
ತುಂಗಭದ್ರಾ ರೈತ ಸಂಘದ ತಾಲೂಕು ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next