Advertisement
ಇದೆ ವೇಳೆ ಸಂಘದ ಸದಸ್ಯರು ಮಾತನಾಡಿ, ರಾಜ್ಯದಲ್ಲಿ ಕೂಲಿಕಾರರ ತಲಾ ಆದಾಯವು ಸರ್ಕಾರಗಳ ನೀತಿಗಳಿಂದ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇದರಿಂದ ಕುಟುಂಬ ನಿರ್ವಹಣೆ ಮಾಡಲಾಗದೆ ಗ್ರಾಮವನ್ನು ತೊರೆದು ನಗರ ಪ್ರದೇಶಗಳಿಗೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಗಳ ಲೆಕ್ಕ ದಾಖಲೆಯ ಪ್ರಕಾರ ಕೂಲಿಕಾರರ ತಲಾ ಆದಾಯವು 20 ರೂಪಾಯಿ ಮಾತ್ರ ಆಗಿದೆ ಇಂತಹ ಸಂದರ್ಭದಲ್ಲಿ ಸರ್ಕಾರವು ಕೂಲಿಕಾರ ಕುಟುಂಬದ ಆದಾಯವನ್ನು ಹೆಚ್ಚಿಸಲು ಘನತೆಯ ಜೀವನ ನೆಡೆಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಎಂದು ಅಗ್ರಹಿಸಿದರು.
Related Articles
Advertisement
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ನೀಡುವ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಹಲವಾರು ತೊಡಕುಗಳನ್ನು ಸೃಷ್ಟಿ ಮಾಡಿದೆ, ಎನ್. ಎಂ. ಎಂ. ಎಸ್. ಹಾಜರಾತಿ ಹಾಕಬೇಕು. ಮಧ್ಯಾಹ್ನದವರೆಗೆ ಅಲ್ಲೇ ಇರಬೇಕು ಎಂದು ಹೇಳುವುದಾದರೆ ಕೆಲಸದ ಸ್ಥಳದಲ್ಲಿ ನೆರಳಿನ ವ್ಯವಸ್ಥೆ ಮಾಡದಿರುವುದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡದೇ ತಾವೇ ತಮ್ಮ ಮನೆಯಿಂದ ತಂದುಕೊಳ್ಳಿ ಎಂದು ಹೇಳುತ್ತಾರೆ. ಅಲ್ಲದೆ ಮಹಿಳೆಯರಿಗೆ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡದಿರುವುದು ಇಂತಹ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸದೇ ಕೂಲಿಕಾರರನ್ನ ಹಿಂಸಿಸಿ ಕೆಲಸಕ್ಕೆ ಬಾರದಂತೆ ನೋಡಿಕೊಂಡು ತಮ್ಮ ಮನಸೋ ಇಚ್ಛೆ ಅಧಿಕಾರ ಚಲಾಯಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಆಶಯಗಳನ್ನ ಗಾಳಿಗೆ ತೂರಿ ಜನಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.ಆದ ಕಾರಣ ನರೇಗಾ ಯೋಜನೆಯನ್ನು ಸರಳೀಕರಿಸಿ ಜನಗಳಿಗೆ ಅನುಕೂಲವಾಗುವಂತೆ ಕ್ರಮ ವಹಿಸಬೇಕು ಎಂದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಗೆ ನೀಡುತ್ತಿರುವ 100 ದಿನಗಳ ಖಾತರಿ ಕೆಲಸದಲ್ಲಿ 100 ದಿನಗಳ ಕೆಲಸ ನೀಡದಿರುವ ಕೂಲಿಕಾರ ಕುಟುಂಬಗಳಿಗೆ ಇನ್ನುಳಿದ ದಿನಗಳಿಗೆ ನಿರುದ್ಯೋಗ ಭತ್ಯೆ ನೀಡುವಂತೆ ಕ್ರಮ ವಹಿಸಬೇಕು. ಇನ್ನೂ ಬಹುತೇಕ ಪಂಚಾಯಿತಿಗಳು ಮೇಟಿಗಳ ಮೇಲೆ ಅವಲಂಬಿತವಾಗಿ ಕೆಲಸ ಹುಡುಕುವುದು, ಕ್ರಿಯ ಯೋಜನೆ ತಯಾರಿ ಮಾಡುವುದು (ಜಿಪಿಎಸ್ ) ಫೋಟೋ ತೆಗೆಯುವುದು ಕೂಲಿಕಾರರು ಮನೆಗಳಿಗೆ ಹೋಗಿ ಫಾರಂ 6 ತುಂಬಿಸಿ ಪಂಚಾಯಿತಿಗೆ ಸಲ್ಲಿಸುವುದು ಕೆಲಸ ಕೇಳಲು ಪಂಚಾಯಿತಿಗೆ ಅಲೆಯುವುದು ಕೆಲಸ ನೀಡಿದಾಗ ಕೂಲಿಕಾರರಿಗೆ ಕೆಲಸದ ಪ್ರಮಾಣ ನಿಗದಿ ಮಾಡಲು ಅಳತೆ ಮಾಡುವುದು ಎನ್.ಎಂ. ಎಂ.ಎಸ್.(ಆಫ್) ಹಾಜರಾತಿ ಹಾಕುವುದು ಎನ್. ಎಂ.ಆರ್. ಹಾಜರಾತಿ ಹಾಕುವುದು ಪ್ರತಿ ದಿನ ಪಂಚಾಯಿತಿಗೆ ಹೋಗಿ ಹಾಜರಾತಿ ಲೆಕ್ಕ ಒಪ್ಪಿಸುವುದು ಹೀಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಒಟ್ಟಾರೆ ಕೆಲಸವು ಮೇಟಿಗಳನ್ನ ಅವಲಂಬಿಸಿದೆ ಮೇಟಿಗಳನ್ನ ಜೀತದಾಳುಗಳಂತೆ ದುಡಿಸಿ ಕೊಳ್ಳದೇ ಅವರಿಗೆ ಈ ಕೂಲಿಯ ಜೊತೆಗೆ ಪ್ರತ್ಯೇಕ ಕೂಲಿ ನೀಡಬೇಕು. ಜೊತೆಗೆ ಅಳತೆ ಮಾಡಲು 1 ಟೇಪ್ ಮತ್ತು ಪುಸ್ತಕ, ಪೆನ್ನು ಎಲ್ಲಾ ಸಾಮಾನುಗಳನ್ನೊಳಗೊಂಡ ಸಲಕರಣಾ ಕಿಟ್ ನೀಡಿ ಮೇಟಿಗಳು ಉತ್ಸಾಹದಿಂದ ಕೆಲಸ ಮಾಡಲು ಪ್ರೋತ್ಸಾಹಿಸಬೇಕು ಹಾಗೂ ಈಗಾಲೇ ರಾಜ್ಯ ಸರ್ಕಾರ ಮೇಟಿಗಳಿಗೆ ಸಹಾಯಧನ ನೀಡಲು ಆದೇಶಿಸಿದೆ ಈ ಆದೇಶವು ರಾಜ್ಯದ ಬಹುತೇಕ ಪಂಚಾಯಿತಿಗಳಲ್ಲಿ ಜಾರಿ ಮಾಡಲಾಗಿಲ್ಲ ಕೂಡಲೇ ಜಾರಿಯಾದಾಗಿನಿಂದ ಮೇಟಿಗಳ ಖಾತೆಗಳಿಗೆ ಸಹಾಯಧನ ಜಮೆಯಾಗುವಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಒತ್ತಾಯಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ದಿನಗಳನ್ನು 200 ದಿನಗಳಿಗೆ ಕೂಲಿ 750 ಗೆ ಹೆಚ್ಚಿಸಬೇಕು. ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ಮತ್ತೆ ಮೊಳಗಿದ ‘ಸಿದ್ದು ಸಿಎಂ’ ಘೋಷಣೆ ಮೇಟಿ ಗಳಿಗೆ ಸರ್ಕಾರ ನಿಗದಿಪಡಿಸಿರುವ ಸಹಾಯಧನ ಕೂಡಲೇ ಅವರ ಖಾತೆಗಳಿಗೆ ಜಮಾ ಮಾಡಬೇಕು. ಮತ್ತು ಸಹಾಯಧನವನ್ನು 10 ರೂ ಗಳಿಗೆ ಹೆಚ್ಚಿಸಿ ಮತ್ತು ಪ್ರತ್ಯೇಕ ಕೂಲಿ ನೀಡಬೇಕು. ಎನ್. ಎಂ. ಎಂ.ಎಸ್ ಹಾಜರಾತಿ ಕೈ ಬಿಡಬೇಕು. ಇದರ ಹಾಜರಾತಿ ಗಾಗಿ ಕೂಲಿಕಾರರನ್ನು ಕೆಲಸದ ಸ್ಥಳದಲ್ಲಿ ತಡೆದಲ್ಲಿ ಶುದ್ಧ ಕುಡಿಯುವ ನೀರು ಮತ್ತು ನೆರಳು ಹಾಗೂ ಮಹಿಳೆಯರಿಗೆ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಬೇಕು. ವ್ಯವಸ್ಥೆ ಮಾಡದೆ ಅಧಿಕಾರಿಗಳು ಮೇಲೆ ಕಠಿಣ ಕಾನೂನೂ ಕ್ರಮ ಜರುಗಿಸಬೇಕು. ಕರ್ನಾಟಕ ರಾಜ್ಯದಲ್ಲಿ ಕೃಷಿ ಕೂಲಿಕಾರರ ಕನಿಷ್ಠ ಕೂಲಿಯು 423 ರೂಪಾಯಿ ಜಾರಿಯಾದಾಗಿನಿಂದ ಕೂಲಿಕಾರರಿಗೆ ಅನ್ವಯವಾಗುವಂತೆ ಕೂಲಿಕಾರರು ಖಾತೆಗಳಿಗೆ ಜಮಾ ಆಗುವಂತೆ ಕ್ರಮ ಕೈಗೊಳ್ಳಬೇಕು. 100 ದಿನಗಳ ಕೆಲಸ ಕಡ್ಡಾಯವಾಗಿ ನೀಡಬೇಕು. 100 ದಿನಗಳ ಕೆಲಸ ನೀಡದಿರುವ ಕೂಲಿಕಾರ ಕುಟುಂಬಗಳಿಗೆ ಇನ್ನುಳಿದ ದಿನಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು.
ರಾಜ್ಯದ ಎಲ್ಲಾ ಪಂಚಾಯಿತಿಗಳಲ್ಲಿ ಕೂಲಿಕಾರರು ಗುಳೇ ಹೋಗದಂತೆ ತಡೆಯಬೇಕು.ತಡೆಯಲು ವಿಫಲವಾದಲ್ಲಿ ಗುಳೇ ಹೋದಂತಹ ಕೂಲಿಕಾರ ಕುಟುಂಬಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು. ನೀರಾವರಿ ಪ್ರದೇಶಗಳಲ್ಲಿ ಕಾಲುವೆ ನಾಲೆ ಗಳೊಂದೇ ಅಲ್ಲದೇ ಆಯಾ ಪ್ರದೇಶದ ಮತ್ತು ಹತ್ತಿ ಮೆಣಸಿನಕಾಯಿ,ಜೋಳ,ಸಜ್ಜೆ ಇತರೆ ಎಲ್ಲಾ ಬೆಳೆಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಮೀನ್ ಸಾಬ್, ಕಾರ್ಯದರ್ಶಿ ಗಾಳಿ ಬಸವರಾಜ, ಉಪಾಧ್ಯಕ್ಷರು. ಸಹ ಕಾರ್ಯದರ್ಶಿಗಳು, ಖಜಾಂಚಿ ಸೇರಿದಂತೆ ಇತರರು ಇದ್ದರು.