Advertisement

ಕುರುಬ ಸಮುದಾಯ ಕಡೆಗಣನೆ ಬೇಡ

09:26 PM Apr 15, 2019 | Lakshmi GovindaRaju |

ತಿ.ನರಸೀಪುರ: ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕುರುಬ ಸಮುದಾಯವನ್ನು ಕಡೆಗಣಿಸಿದರೆ ಸಮುದಾಯದವರು ತಟಸ್ಥರಾಗಬೇಕಾಗುತ್ತದೆ ಎಂದು ತಾಲೂಕು ಕುರುಬರ ಸಂಘದ ಗೌರವಾಧ್ಯಕ್ಷ ಹಾಗೂ ತಾಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ ಕಾಂಗ್ರೆಸ್‌ ನಾಯಕರಿಗೆ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಕಾಲೇಜು ರಸ್ತೆಯ ಎಂ.ಮರೀಗೌಡ ಸ್ಮಾರಕ ಸಮುದಾಯ ಭವನದಲ್ಲಿ ನಡೆದ ತಾಲೂಕಿನ ಕುರುಬ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಲೋಕಸಭಾ ಚುನಾವಣೆ ಚುನಾವಣೆ ಆರಂಭಗೊಂಡು ಅಂತ್ಯವಾಗುವ ಸಮಯವಾಗುತ್ತಿದ್ದರೂ ತಾಲೂಕಿನಲ್ಲಿ ಕುರುಬ ಸಮುದಾಯ ಮುಖಂಡರನ್ನು ಸೌಜನ್ಯಕ್ಕೂ ಕರೆಯುತ್ತಿಲ್ಲ. ಯಾವುದೇ ಜವಾಬ್ದಾರಿ ನೀಡದೆ, ಅನ್ಯ ಮುಖಂಡರು ನಮ್ಮ ಸಮುದಾಯಗಳ ಕೇರಿಯೊಳಗೆ ಪ್ರವೇಶಿಸಿ ಮತಯಾಚಿಸುವ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದರು.

ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕತ್ವ ವಹಿಸಿಕೊಂಡಿದ್ದ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರಾಗಲಿ ಅಥವಾ ಅವರ ಪುತ್ರ ಸುನೀಲ್‌ ಬೋಸ್‌ ಅವರಾಗಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಮೈತ್ರಿ ಎಂದುಕೊಂಡು ಅಭ್ಯರ್ಥಿ ಆರ್‌.ಧ್ರುವನಾರಾಯಣ ಜೆಡಿಎಸ್‌ ಶಾಸಕರ ಜೊತೆ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ನ ಸಮ್ಮಿಶ್ರ ಸರ್ಕಾರವಿದ್ದರೂ ಇಲ್ಲಿನ ಯಾವೊಬ್ಬ ಮುಖಂಡರಿಗೂ ಯಾವುದೇ ಸ್ಥಾನಮಾನ ನೀಡಿಲ್ಲ. ಚುನಾವಣೆಗೆ ನಮ್ಮನ್ನು ಕರೆಯೋರು ಇಲ್ಲ ಎಂದು ಎಂ.ಮಲ್ಲಿಕಾರ್ಜುನಸ್ವಾಮಿ ದೂರಿದರು.

Advertisement

ಗ್ರಾಪಂ ಮಾಜಿ ಅಧ್ಯಕ್ಷ ವಾಟಾಳು ನಾಗೇಶ, ಸಮುದಾಯಕ್ಕೆ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನರಸೀಪುರ ಕ್ಷೇತ್ರದಲ್ಲಿನ ವಿಚಾರ ಗಮನಿಸಿ ಸ್ಪಷ್ಟ ಸೂಚನೆ ನೀಡಬೇಕು ಎಂದರು.

ಪುರಸಭಾ ಸದಸ್ಯ ಬಾದಾಮಿ ಮಂಜು, ಪಪಂ ಮಾಜಿ ಅಧ್ಯಕ್ಷ ಎನ್‌.ಮಹದೇವಸ್ವಾಮಿ, ತಲಕಾಡು ಗ್ರಾಪಂ ಉಪಾಧ್ಯಕ್ಷ ದೊಡ್ಡಮಲ್ಲೇಗೌಡ, ಸದಸ್ಯ ಶಿವಮೂರ್ತಿ, ಮಾಜಿ ಅಧ್ಯಕ್ಷರಾದ ಅಕ್ಕೂರು ಗುರುಮೂರ್ತಿ, ಮಾದಾಪುರ ನಂಜುಂಡಸ್ವಾಮಿ, ಅಶೋಕ, ಮುಖಂಡರಾದ ಷಡಕ್ಷರಿ, ಪುಳ್ಳಾರಿ ಮಾದೇಶ, ಗುರುಮಲ್ಲಪ್ಪ, ಜೆ.ಅನೂಪ್‌ಗೌಡ, ಸೋಮು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next