Advertisement

ಕುಪ್ಪಳಿ ಮನೆ ನಿರ್ಮಾಣಕ್ಕೆ ಗುಣಗಾನ

11:21 AM Aug 13, 2017 | |

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಅನಾವರಣಗೊಂಡಿರುವ ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿ ನಿವಾಸದ ಹೂವಿನ ಪ್ರತಿಕೃತಿಯನ್ನು ಕಂಡ ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರು ಕುವೆಂಪು ಪ್ರತಿಷ್ಠಾನ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಕುವೆಂಪು ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ಹೊರತಂದಿರುವ ಕುವೆಂಪು ಅಂಚೆ ಚೀಟಿಯ ಬೃಹತ್‌ ಪ್ರತಿಯನ್ನು ಗಾಜಿನಮನೆ ಆವರಣದಲ್ಲಿ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದ ಸುಧಾ ಮೂರ್ತಿ ಅವರು, “ಕುಪ್ಪಳ್ಳಿಯ ಕುವೆಂಪು ಅವರ ನಿವಾಸದ ಪ್ರತಿಕೃತಿಯನ್ನು ಹೂವಿನಲ್ಲಿ ಮೂಡಿಸಿರುವುದು ಸೊಗಸಾಗಿದೆ. ಇಲಾಖೆ ಹಾಗೂ ಪ್ರತಿಷ್ಠಾನದ ಪರಿಶ್ರಮದಿಂದಾಗಿ ಸ್ವಾತಂತ್ರೊéàತ್ಸವ ಫ‌ಲಪುಷ್ಪ ಪ್ರದರ್ಶನಕ್ಕೆ ವಿಶೇಷ ಕಳೆ ಬಂದಿದೆ,’ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌, “ಅಂಚೆ ಇಲಾಖೆಯು ಮೂರು ತಿಂಗಳ ಹಿಂದೆ ಕುವೆಂಪು ಅವರ ಭಾವಚಿತ್ರವುಳ್ಳ ವಿಶೇಷ ಅಂಚೆಚೀಟಿ ಹೊರತಂದಿದ್ದು, ಅದರ ಮೆಗಾ ಪ್ರತಿಯನ್ನು ಲಾಲ್‌ಬಾಗ್‌ನ “ಕುವೆಂಪು ಫೋಟೊ ಗ್ಯಾಲರಿ’ಯಲ್ಲಿ ಪ್ರದರ್ಶಿಸಲಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌, “ಮಹಾಕವಿ, ಯುಗದ ಕವಿ, ಜಗದ ಕವಿ ಕುವೆಂಪು ಅವರ ಸಾಹಿತ್ಯ ವಿಚಾರಧಾರೆಗಳು ಫ‌ಲಪುಷ್ಪ, ಭಿತ್ತಿಚಿತ್ರ, ಉಬ್ಬುಚಿತ್ರ, ಜಲವರ್ಣ, ಕಲಾಕೃತಿಗಳ ಮೂಲಕ ಅಭಿವ್ಯಕ್ತಗೊಂಡಿರುವುದು ನೋಡುಗರ ಕಣ್ಮನ ಸೆಳೆಯುವಂತಿವೆ,’ ಎಂದು ತಿಳಿಸಿದರು. ಸಾಹಿತಿ ಪ್ರೊ.ಹಂಪಾ ನಾಗರಾಜಯ್ಯ ಇತರರು ಉಪಸ್ಥಿತರಿದ್ದರು.

42 ಸಾವಿರ ಮಂದಿ ವೀಕ್ಷಣೆ
ಎರಡನೇ ಶನಿವಾರದ ಹಿನ್ನೆಲೆಯಲ್ಲಿ ಸರ್ಕಾರಿ ರಜೆಯಿದ್ದ ಕಾರಣ ಶನಿವಾರ ಲಾಲ್‌ಬಾಗ್‌ನ ಫ‌ಲಪುಷ್ಪ ಪ್ರದರ್ಶನ ವೀಕ್ಷಣೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಭೇಟಿ ನೀಡಿದ್ದರು. ಒಟ್ಟು 42 ಸಾವಿರ ಮಂದಿ ಭೇಟಿ ನೀಡಿದ್ದು, ಇದರಲ್ಲಿ 37 ಸಾವಿರ ಮಂದಿ ವಯಸ್ಕರು, ಹಿರಿಯರು ಹಾಗೂ 5 ಸಾವಿರ ಮಕ್ಕಳು ಟಿಕೆಟ್‌ ಪಡೆದು ವೀಕ್ಷಿಸಿದ್ದಾರೆ. ಒಟ್ಟು 21.8 ಲಕ್ಷ ರೂ. ಸಂಗ್ರಹವಾಗಿದೆ. ಭಾನುವಾರದ ಪ್ರವೇಶ ಶುಲ್ಕ- ವಯಸ್ಕರಿಗೆ 60 ರೂ. ಮಕ್ಕಳಿಗೆ 20 ರೂ.

Advertisement

ಕವಿಗೋಷ್ಠಿ
ಭಾನುವಾರ ಸಂಜೆ 4ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಕವಿ ಡಾ.ಸಿದ್ದಲಿಂಗಯ್ಯ ಸೇರಿದಂತೆ 15 ಮಂದಿ ಹಿರಿಯ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಗಾಯಕ ಡಾ.ಶಿವಮೊಗ್ಗ ಸುಬ್ಬಣ್ಣ ಅವರು ಕುವೆಂಪು ವಿರಚಿತ “ಬಾರಿಸು ಕನ್ನಡ ಡಿಂಡಿಮವ’ ಗೀತೆಯನ್ನು ಪ್ರಸ್ತುತಪಡಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next