Advertisement

ಬರಲಿದ್ದಾರೆ ‘ಕುಂಟಿಬೈಲ್‌ ಕುಂಟಮ್ಮ’ ! 

12:12 PM Nov 22, 2018 | |

ವಿಭಿನ್ನ ಟೈಟಲ್‌ನೊಂದಿಗೆ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಹೊಸ ಸಿನೆಮಾ ಹುಟ್ಟಿಕೊಳ್ಳುತ್ತಿದ್ದು, ಟೈಟಲ್‌ ಮೂಲಕವೇ ಸಾಕಷ್ಟು ಸೌಂಡ್‌ ಮಾಡುತ್ತಿದೆ. ಪ್ರಸ್ತುತ ಓಂ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ‘ಕುಂಟಿಬೈಲ್‌ ಕುಂಟಮ್ಮ’ ಎಂಬ ಸಿನೆಮಾ ಸೆಟ್ಟೇರಲು ರೆಡಿಯಾಗಿದೆ. ಈಗಾಗಲೇ ತುಳು ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದಲ್ಲಿ ಹೆಸರು ಮಾಡಿದ ಬಿ.ಕೆ.ಗಂಗಾಧರ್‌ ಕಿರೋಡಿಯನ್‌ ಅವರು ಈ ಸಿನೆಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. 

Advertisement

ಕಥೆ-ಚಿತ್ರಕಥೆ ಎಲ್ಲವೂ ಅವರೇ ಮಾಡಲಿದ್ದಾರೆ. ಉಮಾಪತಿ ಛಾಯಾಗ್ರಹಣ, ಜೆ.ಜೆ.ಶರ್ಮಾ ಸಂಕಲನದಲ್ಲಿ ಕೈಜೋಡಿಸಲಿದ್ದಾರೆ. ವಿಶೇಷವೆಂದರೆ, ಇದೇ ಕಥೆ ಕನ್ನಡ ಸಿನೆಮಾವಾಗಿ ಕೂಡ ಮೂಡಿಬರಲಿದೆ. ಸಿನೆಮಾದಲ್ಲಿ ಯಾರೆಲ್ಲ ಇರಲಿದ್ದಾರೆ? ಯಾವಾಗ ಶೂಟಿಂಗ್‌? ಎಂಬ ಲೆಕ್ಕಾಚಾರವೆಲ್ಲ ಇನ್ನಷ್ಟೇ ಹೊರಬರಬೇಕಿದೆ. ಸದ್ಯ ಸಿನೆಮಾದ ಟೈಟಲ್‌ ಮಾತ್ರ ರಿಲೀಸ್‌ ಆಗಿದ್ದು, ಮುಂದೆ ಏನು ಎಂಬ ಬಗ್ಗೆ ಇನ್ನಷ್ಟೇ ವಿವರ ದೊರೆಯಬೇಕಿದೆ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next