ಕಾಪು: ಕುಂಜೂರು ಶ್ರೀ ದುರ್ಗಾ ಮಿತ್ರವೃಂದ ಮತ್ತು ಶ್ರೀ ದುರ್ಗಾ ಸೇವಾ ಸಮಿತಿಯ ಆಶ್ರಯದಲ್ಲಿ ಶ್ರೀ ದುರ್ಗಾ ದೇವಸ್ಥಾದಲ್ಲಿ ಚಿಣ್ಣರಿಗಾಗಿ ಸಂಯೋಜಿಸಲ್ಪಟ್ಟ ‘ಚಿಣ್ಣರ ಕಲರವ’ ಕಾರ್ಯಕ್ರಮವನ್ನು ಚಿಣ್ಣರೇ ಉದ್ಘಾಟಿಸಿದರು.
ಐದು ಮಂದಿ ಚಿಣ್ಣರು ದೇವಳದಲ್ಲಿ ಬೆಳಗಿದ ದೀಪಗಳನ್ನು ವೇದಿಕೆಗೆ ತಂದು ಉದ್ಘಾಟನಾ ದೀಪವನ್ನು ಬೆಳಗಿದರು.
ಚಿಣ್ಣರ ಕಲರವ ಕಾರ್ಯಕ್ರಮದಲ್ಲಿ ನಾಲ್ಕು ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದ್ದು, ಅಂಗನವಾಡಿ, ಎಲ್ ಕೆ ಜಿ ಯಿಂದ ಒಂಬತ್ತು – ಹತ್ತನೇ ತರಗತಿಯವರೆಗಿನ ಸುಮಾರು 300 ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಅರ್ಚಕ ವೇ.ಮೂ. ಚಕ್ರಪಾಣಿ ಉಡುಪ ಆಶೀರ್ವದಿಸಿದರು. ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಅರ್ಚಕ ಮನೆತನದ ಹಿರಿಯರಾದ ಗೋವಿಂದ ಉಡುಪ, ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷ ಕೆ.ಎಲ್. ಕುಂಡಂತಾಯ, ಕೋಶಾಧಿಕಾರಿ ಶ್ರೀವತ್ಸ ರಾವ್, ಎಲ್ಲೂರು ಗ್ರಾ. ಪಂ. ಸದಸ್ಯ ಯಶವಂತ ಶೆಟ್ಟಿ, ಮಾಜಿ ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಲೋಕೇಶ್ ಶೆಟ್ಟಿ ಬೆಳಪುಗುತ್ತು, ದೇಗುಲದ ಮೆನೇಜರ್ ರಾಘವೇಂದ್ರ ಶೆಟ್ಟಿ ಅತಿಥಿಗಳಾಗಿದ್ದರು.
ಉಚ್ಚಿಲ ಸರಸ್ವತಿ ಮಂದಿರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ, ಸುರೇಶ್ ಕುಲಾಲ್, ಜ್ಯೋತಿ, ಸಾರಿಕಾ ಶೆಟ್ಟಿ, ಸುಕೇತಾ, ಪ್ರವೀಣ್ ಕುಮಾರ್, ಆನಂದ ಕುಂದರ್, ಗಣೇಶ್ ಸಾಲ್ಯಾನ್, ಮಂಜುನಾಥ್ ಆಚಾರ್ಯ, ರಾಜಲಕ್ಷ್ಮಿ, ಸೋನಿಯಾ ತೀರ್ಪುಗಾರರಾಗಿ ಸಹಕರಿಸಿದರು. ಶ್ರೀ ದುರ್ಗಾ ಮಿತ್ರವೃಂದದ ಕಾರ್ಯದರ್ಶಿ ಸ್ರುಜನ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.
ಶ್ರೀ ದುರ್ಗಾ ಮಿತ್ರವೃಂದದ ಕೋಶಾಧಿಕಾರಿ ರಾಕೇಶ್ ಕುಂಜೂರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ,ವಂದಿಸಿದರು.