ಕುಣಿಗಲ್ : ಪಟ್ಟಣದ ಜ್ಞಾನ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮುನ್ನ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರು ನಾವೇ ಎಂದು ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಮಾಜಿ ಪುರಸಭಾ ಅಧ್ಯಕ್ಷ ಕೆ.ಎನ್.ನಂಜುಡಯ್ಯ ಉ|| ರಾಜಣ್ಣ ಇಬ್ಬರು ಪಟ್ಟು ಹಿಡಿದ ಕಾರಣ ನಾಯಕರನ್ನು ಹೊರತು ಪಡಿಸಿ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಕಾರ್ಯಕ್ರಮ ನಡೆಸಿದ ಪ್ರಸಂಗ ಬುಧವಾರ ನಡೆಯಿತು.
ಪೊಲೀಸರ ಮಧ್ಯ ಪ್ರವೇಶ, ತಪ್ಪಿದ ಘರ್ಷಣೆ : ಪಟ್ಟಣದ ಜ್ಞಾನ ಭಾರತಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲೂಕು ಒಕ್ಕಲಿಗ ಸಂಘ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ಕೆ.ಎ.ನಂಜುಡಯ್ಯ, ಬಿ.ಎಂ.ಹುಚ್ಚೇಗೌಡ, ಗಂಗಶಾನಯ್ಯ ಮೊದಲಾದವರು ಭಾಗವಹಿಸಿದರು, ಅಲ್ಲಿಗೆ ಬಂದ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಹಾಗೂ ಅವರ ಬೆಂಬಲಿಗರು, ಕಾರ್ಯಕ್ರಮ ಮಾಡುವಂತೆ ಯಾರು ನಿಮಗೆ ಹೇಳಿದರು, ಸಂಘದ ಅಧ್ಯಕ್ಷನಾನಾಗಿರುವೇ ನನ್ನನು ಕರೆಯದೇ ಕಾರ್ಯಕ್ರಮ ಮಾಡುತ್ತಿದ್ದೀರ ಎಂದು ಅಸಮಾಧಾನ ವ್ಯಕ್ತಪಡಿಸಿದರು, ಈ ಮಧ್ಯ ಬಿಬಿಆರ್ ಬೆಂಬಲಿಗರು ಕಳ್ಳರು ಎಂದು ಆಡಳಿತ ಮಂಡಲಿ ವಿರುದ್ದ ಜರಿದರು ಆಕ್ರೋಶ ಹೊರ ಹಾಕಿದರು, ಡಿವೈಎಸ್‌ಪಿ ಜಿ.ಆರ್.ರಮೇಶ್, ಸಿಪಿಐ ಗುರುಪ್ರಸಾದ್ ಅವರ ನೇತೃತ್ವದ ಪೊಲೀಸ್ ತಂಡವು ಘಟನೆ ಸ್ಥಳಕ್ಕೆ ಗುಂಪನ್ನು ಕಾಲೇಜು ಅವರಣದಿಂದ ಹೊರ ಕಳಿಸಿ ಆಗುತ್ತಿದ್ದ ಘರ್ಷಣೆಯನ್ನು ತಪ್ಪಿಸಿದರು.
ಡಿವೈಎಸ್‌ಪಿ ಸಂಧಾನ ಯಶಸ್ವಿ : ಡಿವೈಎಸ್‌ಪಿ ಜಿ.ಆರ್.ರಮೇಶ್ ಬಿ.ಬಿ.ರಾಮಸ್ವಾಮಿಗೌಡ, ಕೆ.ಎನ್.ನಂಜುಡಯ್ಯ ಒಳಗೊಂಡ ಸಂದಾನ ಸಭೆಯನ್ನು ನಡೆಸಿದರು, ಸಂಘದ ವಿವಾದ ಪ್ರಕರಣ ನ್ಯಾಯಾಲಯದಲ್ಲಿ ಇದೆ ಎಂದು ಹೇಳುತ್ತಿದ್ದೀರ ಹಾಗಾಗಿ ಶಿಕ್ಷಕರು, ಉಪನ್ಯಾಸಕರು, ಸ್ವಾಮೀಜಿ ಹಾಗೂ ಅತಿಥಿಗಳು ಹೊರತು ಪಡಿಸಿ ಬೇರೆ ಯಾರು ವೇದಿಕೆ ಮೇಲೆ ಬರಬಾರದು, ಕಾರ್ಯಕ್ರಮ ನಡೆಯಲಿ ಎಂದು ಹೇಳಿದರು, ಇದಕ್ಕೆ ಉಭಯೇತರರು ಒಪ್ಪಿ ಕಾರ್ಯಕ್ರಮದಿಂದ ಹೊರ ಉಳಿದರು.
ಬಿಗಿ ಪೊಲೀಸ್ ಬಂದೂಬಸ್ತ್ನಲ್ಲಿ ಕಾರ್ಯಕ್ರಮ : ಪೊಲೀಸರ ಬಿಗಿ ಬಂದೂಬಸ್ತ್ನಲ್ಲಿ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ನಿವೃತ್ತ ಉಪನಿರ್ದೇಶಕ ಕುಂದೂರು ನರಸಿಂಹಯ್ಯ, ಡಿವೈಎಸ್‌ಪಿ ಜಿ.ಆರ್.ರಮೇಶ್, ಪ್ರಾಂಶುಪಾಲರಾದ ಗೋವಿಂದೇಗೌಡ, ಡಾ.ಕಪನಿಪಾಳ್ಯರಮೇಶ್ ಮೊದಲಾದವರು ಭಾಗವಹಿಸಿದರು.
ಏಳು ಕೋಟಿ ರೂ ಹಣ ದುರುಪಯೋಗ ಆರೋಪ : ಪತ್ರಕರ್ತರೊಂದಿಗೆ ಮಾತನಾಡಿದ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ೧೯೭೩ ರಲ್ಲಿ ಮಾಜಿ ಸಚಿವರಾದ ಎನ್.ಹುಚ್ಚಮಾಸ್ತಿಗೌಡ, ಅಂದಾನಯ್ಯ ಅವರು ನೇತೃತ್ವದಲ್ಲಿ ತಾಲೂಕು ಒಕ್ಕಲಿಗ ಸಂಘವನ್ನು ಸ್ಥಾಪನೆ ಮಾಡಿ ಸಂಘದ ಅಭಿವೃದ್ದಿಗೆ ಶ್ರಮಿಸಿದರು ಅವರ ಬಳಿಕ ನಾನು ಕಳೆದ ೨೦ ವರ್ಷಗಳಿಂದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ, ನನ್ನ ಅವಧಿಯಲ್ಲಿ ಶಾಲಾ, ಕಾಲೇಜು ಕಟ್ಟಡ, ವಾಣಿಜ್ಯ ಮಳಿಗೆ ನಿರ್ಮಾಣ ಸೇರಿದಂತೆ ಹತ್ತು ಹಲವು ಅಭಿವೃದ್ದಿ ಕೆಲಸ ಮಾಡಿರುವೆ ಪ್ರಸಕ್ತ ಸಾಲಿನಲ್ಲೂ ಸಹಾ ನಾನೇ ಅಧ್ಯಕ್ಷನಾಗಿರುವೇ ಸಂಘದಲ್ಲಿ ಏಳು ಕೋಟಿ ಹಣವನ್ನು ಉಳಿತಾಯ ಮಾಡಿರುವೇ ಆದರೆ ಸಭಾ ನಡವಳಿಕೆ ಪುಸ್ತಕದಲ್ಲಿ ನನ್ನ ಹಾಗೂ ಕೆಲ ನಿರ್ದೇಶಕ ನಖಲಿ ಸಹಿ ಮಾಡಿ ನಾವೇ ಅಧ್ಯಕ್ಷನೆಂದು ಕೆ.ಎನ್.ನಂಜುಡಯ್ಯ ಹೇಳಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ನಾನು ಸಂಘದಲ್ಲಿ ಉಳಿತಾಯ ಮಾಡಿದ್ದ ಏಳು ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು ಈ ಸಂಬಂಧ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಪ್ರಕರಣ ಇದೆ ಆದರೂ ಇದನ್ನು ಉಲ್ಲಂಘನೆ ಮಾಡಿ ದರ್ಪದಿಂದ ಅಧಿಕಾರ ನಡೆಸುತ್ತಿದ್ದಾರೆ, ಶಿಕ್ಷಕರ ದಿನಾಚರಣೆ ನೆಪದಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನೇ ಅಧ್ಯಕ್ಷ ತಿರುಗೇಟು ನೀಡಿದ ನಂಜುಡಯ್ಯ : ಬಿ.ಬಿ.ರಾಮಸ್ವಾಮಿಗೌಡ ಆರೋಪವನ್ನು ತಳ್ಳಿಹಾಕಿದ ಕೆ.ಎನ್.ನಂಜುಡಯ್ಯ ಡಿ-೨-೨೦೨೦ ರಂದು ನಿಯಮಾನುಸಾರವಾಗಿ ಸಂಘದ ಅಧ್ಯಕ್ಷನಾಗಿರುವೇ ಬಿ.ಬಿ.ರಾಮಸ್ವಾಮಿಗೌಡ ಅಲ್ಲ ಕಳೆದ ಒಂದು ಮೂಕಾಲು ವರ್ಷಗಳಿಂದ ಸಂಘದ ಅಧ್ಯಕ್ಷನಾಗಿರುವೆ ಶಿಕ್ಷಕರ, ಸಿಬ್ಬಂದಿಗಳ ವೇತನ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಕ್ರಮಗಳಿಗೆ ನನ್ನ ಸಹಿ ಉಳ್ಳ ಚೆಕ್ ನೀಡಿರುವೆ ಆಗ ಇದನ್ನು ಬಿ.ಬಿ.ರಾಮಸ್ವಾಮಿಗೌಡ ಏಕೆ ಪ್ರಶ್ನಿಸಲಿಲ್ಲ ಎಂದ ಅವರು ಸಂಘದ ಅಭಿವೃದ್ದಿಯನ್ನು ಸಹಿಸಲಾರದೇ ಅತಾಶಗೊಂಡಿರುವ ರಾಮಸ್ವಾಮಿಗೌಡ ಅವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.