Advertisement

ಕುಣಿಗಲ್ ಪುರಸಭೆ : 35.51 ಲಕ್ಷ ರೂ ಉಳಿತಾಯ ಬಜೆಟ್

06:12 PM Apr 08, 2022 | Team Udayavani |

ಕುಣಿಗಲ್ : ಪಟ್ಟಣದ ಸರ್ವಾಂಗೀಣ ಪ್ರಗತಿ ದೃಷ್ಟಿಯಲ್ಲಿ ಇಟ್ಟುಕೊಂಡು ಪುರಸಭೆ ಅಧ್ಯಕ್ಷ ರಂಗಸ್ವಾಮಿ ಅವರು 2022-23 ನೇ ಸಾಲಿನ ಆಯ-ವ್ಯಯ 35.51 ಲಕ್ಷ ರೂ ಉಳಿತಾಯ ಬಜೆಟ್ ಮಂಡಿಸಿ ಅನುಮೋದನೆ ಪಡೆದುಕೊಂಡರು.

Advertisement

ಶುಕ್ರವಾರ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ರಂಗಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ೩೫೫೧೧೫೯ ರೂ ಉಳಿತಾಯ ಬಜೆಟ್ ಮಂಡಿಸಲಾಯಿತು, ಹಾಗೂ ಸರ್ಕಾರ ಸೇರಿದಂತೆ ವಿವಿಧ ಬಾಬ್ತುಗಳಿಂದ 33.18 ಕೋಟಿ ಆದಾಯ ನಿರೀಕ್ಷಿಸಿದೆ, ಈ ಪೈಕಿ 42.37 ಕೋಟಿ ರೂ ಗಳನ್ನು ಪಟ್ಟಣದ ಅಭಿವೃದ್ದಿಗಾಗಿ ವಿನಿಯೋಗಿಸಲು ತಿರ್ಮಾನಿಸಲಾಗಿದೆ, ಆಯವ್ಯಯ ಪಟ್ಟಿಯನ್ನು ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷೆ ತಬಸಮ್ ಉನ್ನೀಸ, ಮುಖ್ಯಾಧಿಕಾರಿ ಶಿವಪ್ರಸಾದ್ ಬಿಡುಗಡೆ ಮಾಡಿದರು.

ಆದಾಯ ಮೂಲ
ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ 2.30 ಕೋಟಿ ರೂ, ಖಾಸಗಿ ಹಣ ಕಾಸು ಸಂಸ್ಥೆ, ಟವರ್‌ಗಳಿಂದ 20 ಲಕ್ಷ ರೂ, ಅಂಗಡಿ ಹಾಗೂ ಮಾರುಕಟ್ಟೆ ಮಳೆಗೆಯಿಂದ 35 ಲಕ್ಷ ರೂ, ಉದ್ದಿಮೆ ಪರವಾನಗೆ, ಖಾತಾ ನಕಲು, ಖಾತೆ ಬದಲಾವಣೆಯಿಂದ 89 ಲಕ್ಷ ರೂ, ಹಣಕಾಸು ಆಯೋಗ ವೇತನ, ವಿದ್ಯುತ್ ವೆಚ್ಚ, ಕುಡಿಯುವ ನೀರಿನ ಅನುದಾನಕ್ಕೆ ಸಂಬಂಧಿಸಿದಂತೆ 6 ಕೋಟಿ ರೂ, ಮುಖ್ಯಮಂತ್ರಿಗಳ ನಗರೋತ್ಥಾನ ಹಂತ ೪( ಸಿ.ಎಂ.ಎಸ್.ಟಿ.ಡಿ.ಪಿ) ಅನುದಾನ ೧೦ ಕೋಟಿ ರೂ, ಬರಪರಿಹಾರ ಎಸ್‌ಎಫ್‌ಸಿ ಕುಡಿಯುವ ನೀರು ಕಾಮಗಾರಿಗಳಿಂದ ೧೦ ಲಕ್ಷ ರೂ, ೧೫ ನೇ ಕೇಂದ್ರ ಹಣಕಾಸು ಯೋಜನೆಯಡಿಯಲ್ಲಿ ೨ ಕೋಟಿ ರೂ, ಆಶ್ರಯ ಯೋಜನೆ ಜಮೀನು ಅಭಿವೃದ್ದಿಪಡಿಸಲು ಅನುದಾನ ೨೦ ಲಕ್ಷ ರೂ ಸೇರಿದಂತೆ ಇತರೆ ವಿವಿಧ ಮೂಲಗಳಿಂದ ೩೩೦೧೮೨೫೦೦ ರೂ ಆದಾಯ ನಿರೀಕ್ಷಿಸಲಾಗಿದೆ,

ಖರ್ಚಿನ ವಿವರ

ಬೀದಿ ದೀಪ, ನೀರು ಸರಬರಾಜು, ವಿದ್ಯುತ್ ವೆಚ್ಚ 4.50 ಕೋಟಿ ರೂ, ಘನತಾಜ್ಯ ವಸ್ತು ವಿಲೇವಾರಿ ನಿವಾರಣೆಗೆ 1.5 ಕೋಟಿ ರೂ, ಘನ ತಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ದಿಗೆ 2  ಕೋಟಿ ರೂ, ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ೪ ಕೋಟಿ, ಪುರಸಭೆ ಕಟ್ಟಡ ಅಭಿವೃದ್ದಿ ಕಾಮಗಾರಿಗೆ ೨.೫೮ ಕೋಟಿ ರೂ, ಪಟ್ಟಣದಲ್ಲಿನ ಉದ್ಯಾನ ವನಗಳ ಅಭಿವೃದ್ದಿಗೆ ೬೫ ಲಕ್ಷ ರೂ, ಸ್ಮಶಾಣಗಳ ಅಭಿವೃದ್ದಿಗೆ ೨೦ ಲಕ್ಷ ರೂ, ಪ.ಜಾತಿ, ಪ.ಪಂಗಡ ಕಲ್ಯಾಣಕ್ಕಾಗಿ ಹಾಗೂ ಬಡ ಜನರ ಕಲ್ಯಾಣ ಅಭಿವೃದ್ದಿಗಾಗಿ ೧.೪೩ ಕೋಟಿ ರೂ, ಎಸ್ಸಿಎಸ್ಟಿ ಸ್ಮಶಾನ ಅಭಿವೃದ್ದಿಗೆ ೧೦ ಲಕ್ಷ ರೂ, ಹುಚ್ಚಮಾಸ್ತಿಗೌಡ ಸರ್ಕಲ್‌ನಲ್ಲಿ ಕುಣಿಗಲ್ ಕುದುರೆ ಪ್ರತಿಮೆ ಅನಾವರಣಕ್ಕೆ 15  ಲಕ್ಷ ರೂ,  ವನ ಸಂವರ್ಧನೆಗಾಗಿ 15  ಲಕ್ಷ ರೂ, ಪುರಸಭೆಯ ಎಲ್ಲಾ ವಾರ್ಡ್ ಗಳ ಪ್ರಮುಖ ರಸ್ತೆಗಳಿಗೆ ನಾಮಫಲಕ ಅಳವಡಿಕೆಗೆ 20 ಲಕ್ಷ ರೂ, ರಂಗಮಂದಿರ ಅಭಿವೃದ್ದಿಗೆ 5 ಲಕ್ಷ ರೂ, ಸೇರಿದಂತೆ ನಿರೀಕ್ಷತ 42,53,72,500 ರೂ ಖರ್ಚು ಮಾಡಲು ತಿರ್ಮಾನಿಸಲಾಯಿತ್ತು.

Advertisement

ಆಯ ವ್ಯಯ ಬಿಡುಗಡೆ ಮಾಡಿ ಮಾತನಾಡಿದ ಅಧ್ಯಕ್ಷ ರಂಗಸ್ವಾಮಿ ಇದೇ ಪ್ರಥಮ ಭಾರಿ ಪಟ್ಟಣದ ವನ ಸಂವರ್ಧನ, ಪತ್ರಕರ್ತರ ಆರೋಗ್ಯ ವಿಮೆ ೨ ಲಕ್ಷ ರೂ, ಪಟ್ಟಣದಲ್ಲಿನ ಹೈನುಗಾರಿಕೆ ರೈತರ ಜಾನುವಾರಗಳು ಆಕಸ್ಮಕವಾಗಿ ಮೃತಪಟ್ಟ ಪರಿಹಾರಕ್ಕೆ ಒಂದು ಲಕ್ಷ ರೂಗಳನ್ನು ಮೀಸಲಿಡಲಾಗಿದೆ ಎಂದ ಅವರು ಆಯ ವ್ಯಯ ಸಂಪೂರ್ಣ ಅನುಷ್ಠಾನಕ್ಕಾಗಿ ಎಲ್ಲಾ ಸದಸ್ಯರ ಸಹಕಾರದಿಂದ ಶ್ರಮಿಸಲಾಗುವುದು, ದೂರ ದೃಷ್ಠಿ ಇಟ್ಟುಕೊಂಡು ಈ ಭಾರಿ ಆಯ ವ್ಯವಯ ಮಂಡಿಸಲಾಗಿದೆ, ಪಟ್ಟಣದ ನಾಗರೀಕರಿಗೆ ಮೂಲಭೂತ ಸೌಲಭ್ಯಗಳು ದೊರಕಿಸಿ ಕೊಡಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು,

ಸಭೆಯಲ್ಲಿ ಪುರಸಭಾ ಸದಸ್ಯರಾದ ಬಿ.ಎನ್.ಅರುಣ್‌ಕುಮಾರ್, ಜಯಲಕ್ಷ್ಮೀ, ಮಂಜುಳ, ಕೋಟೆ ನಾಗಣ್ಣ, ಕೃಷ್ಣ, ರೂಪಿಣಿ, ಮಲ್ಲಿಪಾಳ್ಯ ಶ್ರೀನಿವಾಸ್, ಉದಯ್, ನಾಗರಾಜು, ಪುರಸಭೆಯ ಲೆಕ್ಕ ಪರಿಶೋಧಕಿ ರೂಪ, ಎಂಜಿನಿಯರ್ ಸುಮಾ, ಚಂದ್ರಶೇಖರ್ ಇದ್ದರು,

Advertisement

Udayavani is now on Telegram. Click here to join our channel and stay updated with the latest news.

Next