Advertisement

ಪುರಸಭೆ: 36.90 ಲಕ್ಷ ರೂ. ಉಳಿತಾಯ ಬಜೆಟ್‌

02:50 PM Apr 07, 2021 | Team Udayavani |

ಕುಣಿಗಲ್: ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ ಮಂಗಳವಾರ ಇಲ್ಲಿನ ಪುರಸಭೆಯಲ್ಲಿ ನಡೆದ2021-22ನೇ ಸಾಲಿನ ಅಯವ್ಯಯವು ಬಜೆಟ್‌ ಅನುಮೋದನೆಗೊಂಡಿತು.

Advertisement

ಪುರಸಭೆ ಅಧ್ಯಕ್ಷ ಎಸ್‌.ಕೆ.ನಾಗೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 36.90 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿತು. ಅಂತೇಯೇ ಸರ್ಕಾರ ಸೇರಿದಂತೆ ವಿವಿಧ ಬಾಬ್ತುಗಳಿಂದ 18.47 ಕೋಟಿಆದಾಯ ನಿರೀಕ್ಷಿಸಿದೆ. ಈ ಪೈಕಿ 31.39 ಕೋಟಿ ರೂ.ಗಳನ್ನು ಪಟ್ಟಣದ ಅಭಿವೃದ್ಧಿಗಾಗಿ ವಿನಿಯೋಗಿಸಲು ತಿರ್ಮಾನಿಸಲಾಗಿದೆ. ಆಯವ್ಯಯದ ಪಟ್ಟಿಯನ್ನು ಅಧ್ಯಕ್ಷ ಎಸ್‌.ಕೆ.ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಸೆಮಿಉಲ್ಲಾ, ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್‌ ಬಿಡುಗಡೆ ಮಾಡಿದರು.

ಅದಾಯ ಮೂಲಗಳು: ಸ್ವಯಂ ಘೋಷಿತ ಆಸ್ತಿತೆರಿಗೆಯಿಂದ 1.80 ಕೋಟಿ, ನೀರು ಸರಬರಾಜು ಸಂಪರ್ಕಗಳಿಂದ 66 ಲಕ್ಷ, ಪುರಸಭೆ ಬಸ್‌ ನಿಲ್ದಾಣಸುಂಕ, ದಿನವಹಿ ನೆಲವಳಿ ಶುಲ್ಕ, ಸಂತೆ ನೆಲವಳಿಸುಂಕ, ಬೀದಿ ವ್ಯಾಪಾರಿಗಳ ನೋಂದಣಿ ಸುಂಕ33.92 ಲಕ್ಷ, ಪುರಸಭೆ ಸೇರಿದ ಅಂಗಡಿ ಮಳಿಗೆ,ಮಾರುಕಟ್ಟೆ ಮಳಿಗೆಗಳಿಂದ 30 ಲಕ್ಷ, ಪುರಸಭೆ ಪರಿ ವೀಕ್ಷಣಾ ಶುಲ್ಕ, ಉದ್ದಿಮೆ ಪರವಾನಗೆ, ಖಾತಾ ನಕಲು, ಬದಲಾವಣೆ, ಇತರೆ ಫೀಗಳಿಂದ 85 ಲಕ್ಷ, ರಾಜ್ಯ ಹಕಾಸು ಆಯೋಗದ ವೇತನ ಅನುದಾನ,ವಿದ್ಯುತ್‌ ವೆಚ್ಚ, ಕುಡಿಯುವ ನೀರು, ಅನುದಾನಗಳಿಗೆ ಸಂಬಂಧಿಸಿದಂತೆ 6 ಕೋಟಿ, 15 ನೇ ಹಣ ಕೇಂದ್ರ ಹಣಕಾಸು ಯೋಜನೆಯಡಿಯಲ್ಲಿ 2 ಕೋಟಿ, ಎಸ್‌ಎಫ್‌ಸಿ ವೇತನ ಅನುದಾನ 3 ಕೋಟಿ, ಎಸ್‌.ಎಫ್‌.ಸಿ ವಿದ್ಯುತ್‌ ಅನುದಾನ 2 ಕೋಟಿ, ಬ್ಯಾಂಕ್‌ ಬಡ್ಡಿ 80 ಲಕ್ಷ ರೂ. ಸೇರಿದಂತೆ ಇತರೆ ವಿವಿಧ ಮೂಲಗಳಿಂದ18,47,97,000 ರೂ. ಅದಾಯ ನಿರೀಕ್ಷಿಸಲಾಗಿದೆ.

ಖರ್ಚಿನ ವಿವರ: ಪುರಸಭೆ ಸಿಬ್ಬಂದಿ ವೇತನಕ್ಕೆ 3 ಕೋಟಿ, ಪುರಸಭೆ ವ್ಯಾಪ್ತಿಯ ಬೀದಿ ದೀಪಗಳ ಮತ್ತು ನೀರಿನ ಸರಬರಾಜು ವ್ಯವಸ್ಥೆ, ವಿದ್ಯುತ್‌ ವೆಚ್ಚಕ್ಕೆ 2 ಕೋಟಿ, ಪುರಸಭಾ ಆಡಳಿತ ವೆಚ್ಚಕ್ಕೆ 1.80 ಕೋಟಿ,ಘನತಾಜ್ಯ ವಸ್ತು ವಿಲೇವಾರಿ ನಿರ್ವಹಣೆಗೆ 1.5 ಕೋಟಿ, ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿಗೆ 2 ಕೋಟಿ, ಪುರಸಭೆ ನೀರು ಸರಬರಾಜುನಿರ್ವಹಣೆಗೆ 50 ಲಕ್ಷ, ಆಟೋ, ಟ್ಯಾಕ್ಸಿ ನಿಲ್ದಾಣಅಭಿವೃದ್ಧಿಗೆ 15 ಲಕ್ಷ, ಪಟ್ಟಣದಲ್ಲಿ ಹೊಸದಾಗಿ ಬಸ್‌ ನಿಲ್ದಾಣ ಕಾಮಗಾರಿಗೆ 3 ಕೋಟಿ, ಪುರಸಭೆ ಕಟ್ಟಡಗಳ ಅಭಿವೃದ್ಧಿ ಕಾಮಗಾರಿಗೆ 2.5 ಕೋಟಿ, ಉದ್ಯಾನವನಗಳ ಅಭಿವೃದ್ಧಿಗೆ 65 ಲಕ್ಷ, ಪ.ಜಾತಿ, ಪಂಗಡ, ಇತರೆಬಡ ಜನರ ಕಲ್ಯಾಣ, ವಿಚೇತನರ ಶ್ರೇಯೋಭಿವೃದ್ಧಿ, ಶುದ್ಧ ಕುಡಿಯುವ ನೀರು ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿ ಹಾಗೂ ಮೂಲ ಸೌಲಭ್ಯಕ್ಕೆ 43.20 ಲಕ್ಷರೂ. ಸೇರಿದಂತೆ ಇತರೆ ಅಭಿವೃದ್ಧಿಗಾಗಿ 31,03,95,000 ಹಣ ಕಾಯ್ದಿರಿಸಲಾಗಿದೆ.

ಪುರಸಭೆ ಸದಸ್ಯ ರಂಗಸ್ವಾಮಿ ಮಾತನಾಡಿ, 2019-20ನೇ ಸಾಲಿನಲ್ಲಿ ಪಟ್ಟಣದ ಸೌಂದರೀಕಣಕ್ಕೆ ಲಕ್ಷ, ಶವ ಸಂಸ್ಕಾರದ ವಾಹನ ಖರೀದಿಗೆ 25 ಲಕ್ಷ,ದಲಿತರ ಶವ ಸಂಸ್ಕಾರ ಸಹಾಯ ಧನಕ್ಕೆ 5 ಲಕ್ಷ,ಆಟೋ ಚಾಲಕರ ಕುಡಿಯುವ ನೀರಿಗೆ 1.5 ಲಕ್ಷ, ಕೊಳಚೆ ಪ್ರದೇಶದ ಅಭಿವೃದ್ಧಿಗೆ 25 ಲಕ್ಷ, ಬಯಲು ರಂಗ ಮಂದಿರ ಅಭಿವೃದ್ಧಿಗೆ 5 ಲಕ್ಷ ಸೇರಿದಂತೆ ವಿವಿಧ

Advertisement

ಅಭಿವೃದ್ಧಿಗೆ ಕಳೆದ ಬಾರಿ ಬಜೆಟ್‌ನಲ್ಲಿ ಹಣ ಕಾಯ್ದಿರಿಸಲಾಗಿತ್ತು. ಆದರೆ, ಆ ಹಣ ಒಂದು ನಯಾಪೈಸೆ ಖರ್ಚು ಮಾಡಿಲ್ಲ. ಈ ಬಾರಿ ಬಜೆಟ್‌ನಲ್ಲಿ ಆವಿಚಾರವನ್ನೇ ಪ್ರಸ್ತಾಪ ಮಾಡಿಲ್ಲ ಎಂದು ಅಸಮಾಧಾನವ್ಯಕ್ತ ಪಡಿಸಿದ ಅವರು, ಕೈ ಬಿಟ್ಟಿರುವ ಅಭಿವೃದ್ಧಿ ಕಾಮಗಾರಿಗಳನ್ನು ಬಜೆಟ್‌ಗೆ ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಭಾ ತ್ಯಾಗ: ಬಜೆಟ್‌ ಮಂಡನೆ ಮುನ್ನ ಪೂರ್ವಭಾವಿ ಸಭೆ ನಡೆಸದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೃಷ್ಣ, ಇದು ನಮಗೆ ಒಪ್ಪಿಗೆ ಇಲ್ಲ ಎಂದು ಸಭೆಯಿಂದ ಹೊರ ನಡೆದರು.ಬಿಜೆಪಿಯ ಇತರೆ ಸದಸ್ಯರು ಅವರನ್ನುಹಿಂಬಾಲಿಸಿದರು. ಆದರೆ ಕಾಂಗ್ರೆಸ್‌ ಅತ್ಯಧಿಕಬಹುಮತ ಇದ್ದ ಕಾರಣ ಬಜೆಟ್‌ ಮಂಡನೆಯಾಯಿತು.

ಸ್ಟಡ್ ಫಾರಂಗೆ ಬೀಗ ಹಾಕಿ: ಸದಸ್ಯರ ತಾಕೀತು :

ಸದಸ್ಯರಾದ ಬಿ.ಎನ್‌. ಅರುಣ್‌ಕುಮಾರ್‌, ಕೋಟೆ ನಾಗಣ್ಣ, ಕೆ.ಎಸ್‌.ಕೃಷ್ಣ ಮಾತನಾಡಿ, 2019-20ನೇ ಸಾಲಿಗೆ ಕುಣಿಗಲ್‌ ಸ್ಟಡ್‌ ಫಾರಂನಿಂದ 1.59 ಕೋಟಿ ಕಂದಾಯ ಬಾಕಿ ಇದೆ. ಏಕೆ ಕಂದಾಯ ವಸೂಲಿ ಮಾಡಿಲ್ಲ ಎಂದು ಕಂದಾಯ ಅಧಿಕಾರಿ ಜಗರೆಡ್ಡಿ ಅವರನ್ನು ತರಾಟೆ ತೆಗೆದುಕೊಂಡರು. ಬಡವರು ಕಂದಾಯ ಕಟ್ಟಲಿಲ್ಲ ಎಂದರೇ ಟಾಮ್‌, ಟಾಮ್‌ ಹೊಡೆದು ಹಣ ವಸೂಲಿ ಮಾಡುತ್ತೀರಾ, ಬಡವರಿಗೆ ಒಂದು ನ್ಯಾಯ, ಶ್ರೀ ಮಂತರಿಗೆ ಒಂದು ನ್ಯಾಯನಾ? ಎಂದು ಪ್ರಶ್ನಿಸಿದ ಅವರು, 2021-22ನೇ ಸಾಲಿಗೆ ಸ್ಟಡ್‌ ಫಾರಂ ಗುತ್ತಿಗೆಅವಧಿ ಮುಗಿಯಲಿದೆ. ಯಾರಿಂದ ಬಾಕಿ ವಸೂಲಿ ಮಾಡುತ್ತೀರಾ ಎಂದರು. ನಾಳೆಯೇ ಸ್ಟಡ್‌ ಫಾರಂಗೆ ಬೀಗ ಹಾಕಿ ಬಾಕಿ ಕಂದಾಯದ ಹಣ ವಸೂಲಿ ಮಾಡಬೇಕೆಂದು ತಾಕೀತು ಪಡಿಸಿದರು.

ಪ್ರಸಕ್ತ ಸಾಲಿನ ಬಜೆಟ್‌ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಇದೊಂದುಜನಪರ ಬಜೆಟ್‌ ಆಗಿದೆ. ಆದರೆ,ಯಾವುದೋ ಒಂದು ಕಾರಣ ಇಟ್ಟುಕೊಂಡುಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದು ವಿಷಾದನೀಯ.  ಎಸ್.ಕೆ.ನಾಗೇಂದ್ರ, ಪುರಸಭಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next