Advertisement

ಅವ್ಯವಹಾರ : ಗ್ರಾ.ಪಂ ಪಿಡಿಓ ಪಲಾಯನ, ಪಿಎಸ್‌ಐ ಗೆ ಲೋಕಾಯುಕ್ತ ಇನ್ಸ್ ಪೆಕ್ಟರ್ ತರಾಟೆ

06:28 PM May 31, 2022 | Team Udayavani |

ಕುಣಿಗಲ್ : ನರೇಗಾ ಹಾಗೂ ಸರ್ಕಾರಿ ಗ್ರಾವೆಲ್ ಪಿಟ್ ಜಾಗ ಅವ್ಯವಹಾರ ಸಂಬಂಧಿಸಿದಂತೆ ಬೇಗೂರು ಗ್ರಾ.ಪಂ ಹಿಂದಿನ ಪಿಡಿಓ ಸುದರ್ಶನ್ ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಲೋಕಾಯುಕ್ತ ನಿರೀಕ್ಷಕರು ಸೂಚಿಸಿದರು, ಪಿಡಿಓ ಅವರನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ತೋರಿದ ಕುಣಿಗಲ್ ಪೊಲೀಸ್ ಠಾಣೆಯ ಪಿಎಸ್‌ಐ ಜಮಾಲ್‌ ಅಹಮದ್ ಅವನ್ನು ಲೋಕಾಯುಕ್ತ ಇನ್ಸ್ ಪೆಕ್ಟರ್ ಛೀಮಾರಿ ಹಾಕಿದ ಪ್ರಸಂಗ ಲೋಕಾಯುಕ್ತ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ನಡೆಯಿತು.

Advertisement

ಮಂಗಳವಾರ ಇಲ್ಲಿನ ತಾ.ಪಂ ಸಭಾಂಗಣದಲ್ಲಿ ಲೋಕಾಯುಕ್ತ ಎಸ್.ಪಿ. ವಾಲಿ ಪಾಷ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸಂಗ ಜರುಗಿತು,

ಪಿಡಿಓ ಫಲಾಯನ, ಪಿಎಸ್‌ಐಗೆ ತರಾಟೆ : ತಾಲೂಕಿನ ಗೊಟ್ಟಿಕೆರೆ ಗ್ರಾಮದ ಎನ್.ಹೆಚ್. 75 ರ ರಸ್ತೆಯ ಪಕ್ಕದ ಸರ್ಕಾರಿ ಗ್ರಾವೆಲ್ ಪಿಟ್ ಪ್ರದೇಶದಲ್ಲಿನ ಸುಮಾರು 330 * 165 ಅಡಿಗಳ ಜಾಗವನ್ನು ಖಾಸಗಿ ವ್ಯಕ್ತಿ ಪ್ರಕಾಶ್ ಎಂಬುವರ ಹೆಸರಿಗೆ ಆಕ್ರಮ ಖಾತೆ ಹಾಗೂ ಎಂಜಿಎನ್‌ಆರ್‌ಐ ಕಾಮಗಾರಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕುಣಿಗಲ್ ಠಾಣೆಯಲ್ಲಿ ಪಿಡಿಓ ಸುದರ್ಶನ್ ವಿರದ್ದ ಪ್ರಕರಣ ದಾಖಲಾಗಿದೆ, ಈ ಸಂಬಂಧ ಕ್ರಮಕೈಗೊಳ್ಳುವಂತೆ ತಾಲೂಕಿನ ಹುತ್ರಿದುರ್ಗ ಹೋಬಳಿ ಗೊಟ್ಟಿಕೆರೆ ಗ್ರಾಮದ ಜಿ.ಡಿ.ಶಿವಣ್ಣ ಲೋಕಾಯುಕ್ತ ಇನ್ಸ್ ಸ್ಪೆಕ್ಟರ್ ವಿಜಯ್‌ಕುಮಾರ್ ಅವರಿಗೆ ದೂರು ಸಲ್ಲಿಸಿದರು, ಸಭೆಯಲ್ಲಿ ಹಾಜರಿದ್ದ ಪಿಡಿಓ ಸುದರ್ಶನ್ ಅವರನ್ನು ಲೋಕಾಯುಕ್ತರು ವಿಚಾರಣೆ ಮಾಡಿ ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಪಿಎಸ್‌ಐ ಜಮಾಲ್‌ಅಹಮದ್‌ಗೆ ಸೂಚಿಸಿದರು, ಆದರೆ ಪಿಡಿಓ ಅವರನ್ನು ಬಂಧಿಸದೇ ಪಿಎಸ್‌ಐ ತಮ್ಮ ಪಾಡಿಗೆ ಸುಮ್ಮನಿದ್ದರೂ ಇದರಿಂದ ಪಿಡಿಓ ಸುದರ್ಶನ್ ಅಲ್ಲಿಂದ ಫಲಾಯನಗೊಂಡರು ಇದರಿಂದ ಕೆಂಡಾಮಂಡಲರಾದ ಲೋಕಾಯುಕ್ತ ಇನ್ಸ್ ಪೆಕ್ಟರ್ ವಿಜಯ್‌ಕುಮಾರ್ ನಾವು ಇಲ್ಲಿ ಹರಿ ಕಥೆ ಮಾಡಲು ಬಂದಿದ್ದೀವ, ಇಬ್ಬರು ಪೇದೆಯನ್ನು ಕರೆಸಿ ಪಿಡಿಓ ಬಂದಿಸುವಂತೆ ಸೂಚಿಸಿದರು ನಿರ್ಲಕ್ಷ್ಯತೆ ವಹಿಸಿದ್ದೀರ ಎಂದು ಪಿಎಸ್‌ಐ ಅವರಿಗೆ ತರಾಟೆ ತೆಗೆದುಕೊಂಡರು,

ಇದನ್ನೂ ಓದಿ : ದ್ವಿತೀಯ ಪಿಯು ಮೌಲ್ಯಮಾಪಕರಿಗೆ ಶೇ.20ರಷ್ಟು ಸಂಭಾವನೆ ಹೆಚ್ಚಳ

ಅಮಾನತಿಗೆ ಸೂಚನೆ : ಸುರ್ದಶನ್ ಮೂಲ ಹುದ್ದೆ ಗ್ರಾ.ಪಂ ಕಾರ್ಯದರ್ಶಿಯಾಗಿದ್ದಾರೆ ಆದರೆ ತನ್ನ ಪ್ರಭಾವ ಭೀರಿ ಪ್ರಭಾರ ಪಿಡಿಓ ಆಗಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಭಕ್ತರಹಳ್ಳಿ ಹಾಗೂ ತೆರೆದಕುಪ್ಪೆ, ಗ್ರಾ.ಪಂನಲ್ಲಿ ಪ್ರಭಾರ ಪಿಡಿಓ ಆಗಿದ್ದಾಗ ಎಸ್ಸಿ, ಎಸ್ಟಿ ಅನುದಾನ, ಪ್ರವರ್ಗ -1, 15 ನೇ ಹಣಕಾಸು ಯೋಜನೆ ಹಾಗೂ ಎಂಜಿಎಸ್‌ಆರ್‌ಐಜಿ ಕಾಮಗಾರಿಗಳಲ್ಲಿ ಲಕ್ಷಾಂತರೂ ಅವ್ಯವಹಾರ ಎಸಗಿದ್ದಾರೆ, ಈ ಸಂಬಂಧ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ತಾ.ಪಂ ಇಓ ಅವರಿಗೆ ದೂರು ಸಲ್ಲಿಸಿದರು, ಅವರ ಮೇಲೆ ಕ್ರಮಕೈಗೊಳ್ಳುವ ಬದಲಾಗಿ ಅವರನ್ನು ಬೇಗೂರು ಗ್ರಾ.ಪಂಗೆ ವರ್ಗಾವಣೆ ಮಾಡಿದ್ದಾರೆ, ಅಲ್ಲೂ ಸಹಾ ಸಾಕಷ್ಟು ಅವ್ಯವಹಾರ ಮಾಡಿದ್ದಾರೆ, ಹಾಗಾಗಿ ಅವರ ವಿರುದ್ದ ಕ್ರಮಕೈಗೊಳ್ಳುವಂತೆ ಗ್ರಾ.ಪಂ ಮಾಜಿ ಅಧ್ಯಕ್ಷ, ದಲಿತ ಮುಖಂಡ ಬಿ.ಡಿ.ಕುಮಾರ್ ಲೋಕಾಯುಕ್ತ ಎಸ್ಪಿ ವಾಲಿಪಾಷ ಅವರಿಗೆ ಮನವಿ ಸಲ್ಲಿಸಿದರು, ಗ್ರಾ.ಪಂ ಪಿಡಿಓ ಸುದರ್ಶನ್ ವಿರುದ್ದ ಸಾಕಷ್ಟು ದೂರುಗಳು ಕೇಳಿ ಬಂದಿದೆ, ಹಾಗಾಗಿ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ತಾ.ಪಂ ಇಓ ಜೋಸೆಫ್ ಅವರಿಗೆ ಲೋಕಾಯುಕ್ತ ಎಸ್ಪಿ ಸೂಚಿಸಿದರು.

Advertisement

ಶಾಲಾ ಅವ್ಯವಸ್ಥೆ ಸರಿಪಿಡಿಸಿ : ತಾಲೂಕಿನ ವಿವಿಧ ಸರ್ಕಾರಿ ಹಾಗೂ ಅನುದಾನ ಶಾಲೆಗಳಲ್ಲಿ ಸಮರ್ಪಕವಾಗಿ ಶೌಚಾಲಯ, ಕೊಠಡಿಗಳು ಇಲ್ಲ ಎಂದು ದೂರು ಕೇಳಿ ಬರುತ್ತಿದೆ ಈ ಸಂಬಂಧ ಕ್ರಮಕೈಗೊಂಡು ಶಾಲಾ ಅವ್ಯವಸ್ಥೆ ಸರಿಪಡಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವಂತೆ ಲೋಕಾಯುಕ್ತ ಎಸ್ಪಿ ಶಿಕ್ಷಣ ಇಲಾಖೆಯ ಇಸಿಓ ಮಂಜುಳ ಅವರಿಗೆ ಸೂಚಿಸಿದ ಅವರು ಸರ್ಕಾರಿ ಶಾಲೆಗಳಿಗೆ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಬಡ ಮಕ್ಕಳು ಬರುತ್ತಿದ್ದಾರೆ, ಶಿಕ್ಷಕರು ಇದು ನಮ್ಮ ಶಾಲೆ ನಮ್ಮ ಮಕ್ಕಳು ಎಂದು ತಿಳಿದುಕೊಂಡು ಅವರಿಂದ ನಾವು ಅನ್ನ ತಿನ್ನುತ್ತಿದ್ದೇವೆ ಎಂಬ ಭಾವನೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ತಿಳಿಸಿದರು.

ತೋಟಗಾರಿಕೆ ಸಹಾಯಕ ನಿರ್ದೇಶಕ ನಾಗರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸೌಮ್ಯಶ್ರೀ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪ್ರಗತಿ ಬಗ್ಗೆ ಮಾಹಿತಿ ಪಡೆದ ಲೋಕಾಯುಕ್ತ ಎಸ್ಪಿ ವಾಲಿಪಾಷ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಮೂಲಭೂತ ಸೌಲಭ್ಯಗಳು ದೊರಕಿಸಿಕೊಡುವಂತೆ ತಿಳಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಮಹಬಲೇಶ್ವರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next