ಕುಣಿಗಲ್ : ಸರ್ಕಾರಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಬೇಜಾವಬ್ದಾರಿಯಿಂದ ಕೋಟ್ಯಾಂತರ ರೂ ಬೆಲೆ ಬಾಳವ ಸರ್ಕಾರಿ ಆಸ್ತಿ ಕಳ್ಳ ಖದೀಮರ ಪಾಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ವೇದಿಕೆ ಕಾರ್ಯಕರ್ತರು ಸೋಮವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಬಲಾಡ್ಯರು, ಖದೀಮರು ನಕಲಿ ದಾಖಲೆಗಳನ್ನು ಸೃಷ್ಠಿಸಿ ಹಾಗೂ ಸ್ಮಶಾಣಕ್ಕೆ ಮೀಸಲಿಟ್ಟ ಜಾಗ ಒತ್ತುವರಿ ಮಾಡಿಕೊಂಡು ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಬ್ಯಾಂಕ್‌ಗಳಿಗೆ ಹಾಗೂ ಸರ್ಕಾರಕ್ಕೆ ವಂಚಿಸಿ, ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಅಧಿಕಾರಿಗಳು ಬೆಂಬಲ ನೀಡಿ ಭ್ರಷ್ಟಾಚಾರಕ್ಕೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಜಿ.ರಮೇಶ್ ನೇತೃತ್ವದಲ್ಲಿ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿದರು.
ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಜಿ.ರಮೇಶ್ ಮಾತನಾಡಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿ ನಡೆಯಿಂದ್ದಾಗಿ ತಾಲೂಕಿನಲ್ಲಿ ಕೋಟ್ಯಾಂತರೂ ಬೆಲೆ ಬಾಳುವಂತಹ ಸರ್ಕಾರಿ ಆಸ್ತಿಗಳು ಬಲಾಡ್ಯರ ಪಾಲಾಗಿದೆ ಕುಣಿಗಲ್ ಪಟ್ಟಣದ ಪುರಸಭಾ ವ್ಯಾಪ್ತಿಯ ಕಸಬಾ ಗ್ರಾಮದ ಸರ್ವೆ ನಂ 89 ರಲ್ಲಿ ಕಂದಾಯ ಇಲಾಖೆಯ ಪಹಣಿಯಂತೆ 20 ಎಕರೆ 04 ಗುಂಟೆ ಕುಂಬಾರ ಗುಂಡಿ ಸ್ಮಶಾಣಕ್ಕೆ ಮೀಸಲಿರಿಸಲಾಗಿದೆ, ಆದರೇ ಈ ಸ್ಮಶಾಣದ ಪಶ್ಚಿಮ ಭಾಗದಲ್ಲಿನ ಹಗರಣ ಗಡಿ ಗ್ರಾಮದ ಜೋಡಿ ಕೆಆರ್‌ಎಸ್ ಅಗ್ರಹಾರ ಸರ್ವೆ ನಂ 3 ರ ಮಾಲೀಕರು ಸುಮಾರು ಎರಡು ಎಕರೆಯಷ್ಟು ಸ್ಮಶಾಣ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಂಪೋಡ್ ಮಾಡಿ, ಬಡಾವಣೆ ನಿರ್ಮಿಸುತ್ತಿದ್ದಾರೆ ಹಾಗೂ ತಾಲೂಕಿನ ನಡೆಮಾವೀನಪುರ ಗ್ರಾಮ ಸರ್ವೆ ನಂ 129 ರಲ್ಲಿ ನಕಲಿ ದಾಖಲೆ ಸೃಷ್ಠಿ ಮಾಡಿಕೊಂಡು 4 ಎಕರೆ 0.6 ಗುಂಟೆ ಕ್ರಯಕ್ಕೆ ಪಡೆದಿರುವಂತೆ ಕ್ರಯ ಪತ್ರ ಮಾಡಿಕೊಂಡು 8 ಎಕರೆ 12 ಗುಂಟೆಗೆ ಪಹಣಿ ನೊಂದಾಯಿಸಿಕೊಂಡು ಒಟ್ಟು ಎಲ್ಲಾ ವಿಸ್ತೀರ್ಣಕ್ಕೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಬ್ಯಾಂಕ್ ಹಾಗೂ ಸರ್ಕಾರಕ್ಕೆ ವಂಚಿಸಿದ್ದಾರೆ, ಹೀಗಾಗಿ ತಾಲೂಕಿನ ಬಹುತೇಕ ಕಡೆ ಇದೇ ರೀತಿ ಅಕ್ರಮ ಅನ್ಯಾಯ ಎಲ್ಲೆ ಮೀರಿದೆ, ಸಂವಿಧಾನದ ವಿರೋಧಿ ಚಟುವಟಿಕೆಗಳಿಗೆ ಅಧಿಕಾರಿಗಳು ಬೆಂಬಲ ನೀಡಿ ಭ್ರಷ್ಟಾಚಾರಕ್ಕೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಮಣ್ಣು ಪರೀಕ್ಷಿಸಿ ಪೋಷಕಾಂಶಗಳ ನಿರ್ವಹಣೆ ಮಾಡಿ: ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್.
ಸೆರ್ವ ಅಧಿಕಾರಿ ವರ್ಗಾವಣೆಗೆ ಆಗ್ರಹ : ಕುಣಿಗಲ್ ತಾಲೂಕಿನವರೇ ಆಗಿರುವ ತಾಲೂಕು ಸೆರ್ವಯರ್ ನರಸೇಗೌಡ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ರಾಜಕಾರಣ ಮಾಡುತ್ತಿದ್ದಾರೆ, ಸರಿಯಾಗಿ ಸರ್ವೆ ಮಾಡಿ ದಾಖಲೆಗಳನ್ನು ನೀಡದ ಕಾರಣ ಗ್ರಾಮೀಣ ಭಾಗದಲ್ಲಿನ ರೈತರು ಆಸ್ತಿಗಾಗಿ ಹೊಡೆದಾಡಿಕೊಂಡು ನ್ಯಾಯಾಲಯದ ಮೆಟ್ಟಿಲೇರಿವಂತ್ತಾಗಿದೆ, ಕರ್ತವ್ಯ ಲೋಪ ಎಸಗಿರುವ ನರಸೇಗೌಡ ಅವರ ವಿರುದ್ದ ಕಠಿಣ ಕ್ರಮಕೈಗೊಂಡು ಅವರನ್ನು ಬೇರೆಡೆಗೆ ವರ್ಗಾಯಿಸುವಂತೆ ಒತ್ತಾಯಿಸಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ವೈದ್ಯಾಧಿಕಾರಿಗಳು ರೋಗಿ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಸ್ಪಂಧಿಸದೇ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದ ಹೆಚ್.ಜಿ,ರಮೇಶ್ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಅದಗೆಟ್ಟಿದೆ, ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಮುಕ್ತಿ ಹಾಡುವಂತ ಕಟ್ಟು ನಿಟ್ಟಿನ ಕಾನೂನು ಕ್ರಮಕೈಗೊಳ್ಳುವಂತೆ ಅವರು ಆಗ್ರಪಡಿಸಿದರು, ಒಂದು ತಿಂಗಳ ಒಳಗೆ ಈ ಸಂಬಂಧ ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕು ಕಚೇರಿ ಮುಂದೆ ಅರ್ನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ರಮೇಶ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಗುಜರಾತ್: ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ಮೂವರು ಸಾವು, ಅಪಾರ ಹಾನಿ
ಮನವಿ ಪತ್ರ ಸ್ವೀಕರಿಸಿ ಮಾತನಾಡಿ ತಹಶೀಲ್ದಾರ್ ಮಹಬಲೇಶ್ವರ ಕುಂಬಾರಗುಡಿ ಸ್ಮಶಾಣದ ಜಾಗಕ್ಕೆ ಸಂಬಂಧಿಸಿದಂತೆ ತನಿಖೆ ಹಂತದಲ್ಲಿ ಇದೇ ಯಾವುದೇ ಕಾರಣಕ್ಕೂ ಸರ್ಕಾರಿ ಹಾಗೂ ಸಾರ್ವಜನಿಕರಿಗೆ ಸೇರಿರುವ ಆಸ್ತಿಯನ್ನು ಲಪಟಾಯಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿಸಿದರು. ತಹಶೀಲ್ದಾರ್ ಭರವಸೆ ಹಿನ್ನಲೆಯಲ್ಲಿ ಪ್ರತಿಭಟನಾಕಾರು ಪ್ರತಿಭಟನೆಯನ್ನು ಕೈ ಬಿಟ್ಟರು.
ಪ್ರತಿಭಟನೆಯಲ್ಲಿ ವೇದಿಕೆಯ ಜಂಟಿ ಕಾರ್ಯದರ್ಶಿ ಕೆ.ಎಸ್.ರಂಗನಾಥ್, ತಾಲೂಕು ಅಧ್ಯಕ್ಷರಾದ ದೀಪಕ್, ರುದ್ರೇಶ್, ಪ್ರಧಾನ ಕಾರ್ಯದರ್ಶಿ ವಿಷ್ಣು ವಿಜಯ್ ಪದಾಧಿಕಾರಿಗಳಾದ ಜಗದೀಶ್, ನರಸೇಗೌಡ, ನವೀನ್‌ಕುಮಾರ್, ನಾಗರಾಜು ಇದ್ದರು,