ಕುಣಿಗಲ್: ಕುಡಿದ ಮತ್ತಿನಲ್ಲಿ ಮೂರು ಮಂದಿ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಓರ್ವನ ಕತ್ತು ಕೊಯ್ದು ಕೊಲೆ ಮಾಡಿ, ಕೆರೆಗೆ ಎಸೆದು ಹೊದ ಇಬ್ಬರು ಆರೋಪಿಗಳನ್ನು ಹುಲಿಯೂರುದುರ್ಗ ಪೊಲೀಸರು ಬಂಧಿಸಿದ್ದಾರೆ.
ಹುಲಿಯೂರುದುರ್ಗ ಹೋಬಳಿ ಡಿ.ಹೊಸಹಳ್ಳಿ ಗ್ರಾಮದ ಎಳನೀರು ವ್ಯಾಪಾರಿ ಅಂಜನಪ್ಪ (58) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇ ಗ್ರಾಮದ ವಿಜಯ ಕುಮಾರ್ (25), ಗಂಗರಾಜು (26) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ವಿವರ
ಜ.19ರ ರಾತ್ರಿ 8.30ರ ವೇಳೆಯಲ್ಲಿ ಗಂಗರಾಜು ಹಾಗೂ ಅಂಜನಪ್ಪ ಇಬ್ಬರು ಮದ್ಯ ಸೇವನೆ ಮಾಡಿ, ಆಂಬ್ಲೇಟ್ ತಿನ್ನವ ವೇಳೆ ಕೊಲೆಯಾದ ಆಂಜನಪ್ಪ, ಗಂಗರಾಜುನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದ್ದು, ಯಾಕೆ ಬಯುತ್ತೀಯ ಎಂದು ಗಂಗರಾಜನ್ನು ಅಂಜನಪ್ಪನನ್ನು ಕೇಳಿದ್ದಾನೆ. ಇದರಿಂದ ಕೋಪಗೊಂಡ ಅಂಜನಪ್ಪನು ಮಚ್ಚಿನಿಂದ ಗಂಗರಾಜು ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಯಿಂದ ಕೆನ್ನೆ ಸೇರಿದಂತೆ ಇತರೆ ಭಾಗ ಗಾಯವಾಗಿದೆ. ಗಂಗರಾಜು ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಗೆ ಹೋಗಿ ಬಿದ್ದು ಗಾಯವಾಗಿದೆ ಎಂದು ಚಿಕಿತ್ಸೆ ಪಡೆದು, ಆಸ್ಪತ್ರೆ ಮುಂಭಾಗದಲ್ಲಿ ಹೊಗಬೇಕಾದರೆ, ವಿಜಯ್‌ಕುಮಾರ್‌ನನ್ನು ಗಂಗರಾಜು ಕರೆಸಿಕೊಂಡು, ಆಂಜನಪ್ಪನನ್ನು ಬಿಡಬಾರದು. ನನಗೇ ಮಚ್ಚನಿಂದ ಹಲ್ಲೆ ಮಾಡಿದ್ದಾನೆ ಎಂದು ಹೇಳುತ್ತಿದಂತೆ ಅದೇ ಸಮಯಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆಂಜನಪ್ಪ ತನ್ನ ಗ್ರಾಮಕ್ಕೆ ಹುಲಿಯೂರುದುರ್ಗ ಪ್ರವಾಸಿ ಮಂದಿರ ಸರ್ಕಲ್ ಬಳಿ ಸೈಕಲ್‌ನಲ್ಲಿ ಹೋಗುವಾಗ, ಗಂಗರಾಜು ಏಕಾಏಕಿ ಸೈಕಲ್‌ನನ್ನು ಕಾಲಿನಿಂದ ಒದ್ದು, ಆಂಜನಪ್ಪನನ್ನು ಕೆಳಕ್ಕೆ ಬೀಳಿಸಿದ್ದಾನೆ. ವಿಜಯಕುಮಾರ್ ಕೈ ಮತ್ತು ಕುತ್ತಿಗೆ ಹಿಡಿದುಕೊಂಡಿದ್ದಾನೆ. ಗಂಗರಾಜು ಗುಪ್ತ ಮಾರ್ಗ ಜಾಗಕ್ಕೆ ಕಾಲಿನಿಂದ ತುಳಿದು ಬಳಿಕ ಚಾಕುವಿನಿಂದ ಕುತ್ತಿಗೆ ಕೊಯ್ದು, ಅವರ ಗಾಡಿಯಲ್ಲಿ ಶವವನ್ನು ಹಾಕಿಕೊಂಡು ದೀಪಾಬುಂದಿ ಕೆರೆಗೆ ಎಸೆದು, ಬಳಿಕ ಕೊಲೆಯಾದ ಆಜಂನಪ್ಪನ ಸೈಕಲ್‌ನನ್ನು ಹಳೇವೂರು ಕೆರೆಗೆ ಎಸೆದು ಪರಾರಿಯಾಗಿದ್ದಾರೆ.
ಈ ಸಂಬಂಧ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಎಸ್‌ಪಿ ರಾಹುಲ್‌ಕುಮಾರ್, ಉದೇಶ್, ಡಿವೈಎಸ್‌ಪಿ ರಮೇಶ್ ಮಾರ್ಗದರ್ಶನಲ್ಲಿ ಅಮೃತೂರು ವೃತ್ತ ಸಿಪಿಐ ಗುರುಪ್ರಸಾದ್, ಪಿಎಸ್‌ಐ ಚೇತನ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಆರೋಪಿಗಳನ್ನು ಅವರ ಸ್ವಗ್ರಾಮ ಡಿ.ಹೊಸಹಳ್ಳಿ ಗ್ರಾಮದಲ್ಲಿ ಬಂಧಿಸಿದ್ದಾರೆ.