Advertisement
ಬೆಸ್ಕಾಂ ವಿತರಣಾ ಕೇಂದ್ರದಿಂದ ಎಫ್ -2 ತಾಲೂಕಿನ ಬಿಳಿದೇವಾಲಯ, ಬೋರಲಿಂಗನಪಾಳ್ಯ, ಕೆಂಕೆರೆ, ದೊಂಬರಹಟ್ಟಿ, ಲಕ್ಷ್ಮಿದೇವಿ ಹಂತ, ಚೊಟ್ಟನಹಳ್ಳಿ ಸೇರಿದಂತೆ ಮೊದಲಾದ ಗ್ರಾಮಗಳಿಗೆ 11 ಕೆ.ವಿ ವಿದ್ಯುತ್ ತಂತಿ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ, ಆದರೆ ಬುಧವಾರ ಮಧ್ಯಾಹ್ನ ಲೈನ್‌ನಲ್ಲಿ ಸಮರ್ಥ್ಯಕ್ಕಿಂತ ಹೆಚ್ಚು ಓವರ್ ಲೋಡ್ ಆಗಿ, ಉಷ್ಣಾಂಶ ಹೆಚ್ಚಾಗಿ ವಿದ್ಯುತ್ ತಂತಿ ತುಂಡಾಗಿ ಪೊಲೀಸ್ ಠಾಣೆ ಮತ್ತು ಬೆಸ್ಕಾಂ ಕಚೇರಿಯ ಹೆದ್ದಾರಿಗೆ ಬಿದ್ದಿದೆ,
ವಿದ್ಯುತ್ ತಂತಿ ತುಂಡಾಗಿ ಬೀಳುತ್ತಿದಂತೆ ಭಾರಿ ಶಬ್ದ ಕೇಳಿಸಿದೆ, ಪೊಲೀಸ್ ಠಾಣೆಯಲ್ಲಿ ಇದ್ದ ಪೊಲೀಸರು, ತಾಲೂಕು ಕಚೇರಿಯ ಸಿಬಂದಿಗಳು ಬೆಸ್ಕಾಂ ಕಚೇರಿಯ ನೌಕರರು ಅಕ್ಕ ಪಕ್ಕದ ಅಂಗಡಿ ಮುಂಗಟ್ಟಿನ ವರ್ತಕರು ಭಯಗೊಂಡು ಅಂಗಡಿ ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದರು, ಬಳಿಕ ರಸ್ತೆಯಲ್ಲಿ ನೋಡಲಾಗಿ 11 ಕೆ.ವಿ ವಿದ್ಯುತ್ ತಂತಿ ಕಟ್ಟಾಗಿ ಬಿದ್ದತು ಆದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರಲಿಲ್ಲ, ವಿಚಾರ ತಿಳಿದ ಬೆಸ್ಕಾಂ ಅಧಿಕಾರಿಗಳು ತತ್ ಕ್ಷಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು. ತಪ್ಪಿದ ಅನಾಹುತ
ಸದಾ ವಾಹನ ಹಾಗೂ ಜನ ನಿಬಿಡ ಪ್ರದೇಶವಾದ ಪಟ್ಟಣದ ಹಳೇಯ ರಾಷ್ಟ್ರೀಯ ಹೆದ್ದಾರಿ ೪೮ ರ ಬೆಸ್ಕಾಂ ಮತ್ತು ಪೊಲೀಸ್ ಠಾಣಾ ಸಮೀಪ ನಿತ್ಯ ನೂರಾರು ವಾಹನಗಳು ಹಾಗೂ ನಾಗರಿಕರು ಸಂಚರಿಸುತ್ತಿರುವುದು ಸಾಮಾನ್ಯ ಆದರೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ವೇಳೆ ಈ ಮಾರ್ಗದಲ್ಲಿ ಬಸ್ ಆಗಲಿ ಕಾರಾಗಲಿ ಮತ್ತೆ ಯಾವುದೇ ವಾಹನಗಳು ಬರಲಿಲ್ಲ, ಈ ವೇಳೆ ಏನಾದರೂ ಬಸ್ ಬಂದಿದ್ದರೇ ವಿದ್ಯುತ್ ತಂತಿ ತಗುಲಿ ಭಾರಿ ಅನಾಹುತ ಸಂಭವಿಸುತ್ತಿತ್ತು.
Related Articles
Advertisement