Advertisement

Bihar;ಹೊಲಕ್ಕೆ ನುಗ್ಗಿದ ರೈಲು ಎಂಜಿನ್‌: ನೆಟ್ಟಿಗರ ಕಟು ಟೀಕೆ

01:23 AM Sep 16, 2024 | Team Udayavani |

ಗಯಾ: ರೈಲು ಎಂಜಿನ್‌ ಹಳಿ ತಪ್ಪಿದ ಪರಿಣಾಮ ಹೊಲಕ್ಕೆ ನುಗ್ಗಿದ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ. ವಜೀರ್‌ಗಂಜ್‌ ಮತ್ತು ಕೊಲ್ಹಾನ ಹಾಲ್ಟ್ ರೈಲ್ವೇ ನಿಲ್ದಾಣಗಳ ನಡುವಿನ ಸ್ಥಳದಲ್ಲಿ ಈ ಘಟನೆ ನಡೆ ದಿದೆ. ಬೋಗಿಗಳು ಇಲ್ಲದೆ ತೆರಳುತ್ತಿದ್ದ ಎಂಜಿನ್‌ ಲೂಪ್‌ಲೈನ್‌ ಮೂಲಕ ಗಯಾ ಹೊರಟಿತ್ತು. ಘಟ ನೆ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ್ದ ಸ್ಥಳೀಯರು ರೈಲು ಎಂಜಿನ್‌ನ ಚಿತ್ರ ಮತ್ತು ವೀಡಿಯೋಗಳನ್ನು ಸಾಮಾ ಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕೆಲವು ನೆಟ್ಟಿಗರು ರೈಲುಗಳನ್ನು ಹೊಲ ಉಳುಮೆ ನಡೆಸಲು ಬಳಸಲಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next