Advertisement
ಕುಂದಾಪುರದ ಅಗ್ನಿ ಶಾಮಕ ದಳದ ಸಿಬಂದಿ ಬೋಟಿನಲ್ಲಿ, ಸ್ಥಳೀಯ ಶೌರ್ಯ ತಂಡದ ಸದಸ್ಯರು, ಮುಳುಗು ತಜ್ಞ ಈಶ್ವರ್ ಮಲ್ಪೆ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕಂಡ್ಲೂರಿನಿಂದ ಗುಲ್ವಾಡಿ, ಬಸ್ರೂರು, ಆನಗಳ್ಳಿ, ಸಂಗಮ್ ಸೇತುವೆಯವರೆಗೂ ಹುಡುಕಲಾಯಿತು.
ಹುಡುಕಾಟ ಕಾರ್ಯಾಚರಣೆ ನಡೆಯುತ್ತಿದ್ದ ಹೇರಿಕುದ್ರು ಪ್ರದೇಶಕ್ಕೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ, ಪತ್ತೆಗಾಗಿ ಎಲ್ಲ ಪ್ರಯತ್ನ ನಡೆಸುವಂತೆ ಪೊಲೀಸರಿಗೆ ಸೂಚಿಸಿದರಲ್ಲದೇ ಘಟನೆ ಕುರಿತು ಎಲ್ಲ ಆಯಾಮದಲ್ಲೂ ತನಿಖೆ ನಡೆಸುವಂತೆಯೂ ಅವರು ಒತ್ತಾಯಿಸಿದರು.