Advertisement

Kundapura: ಬಸ್ರೂರು ಅಪ್ಪಣ್ಣ ಹೆಗ್ಡೆಯವರದು ಅಪರೂಪದ ವ್ಯಕ್ತಿತ್ವ: ಡಾ.ಜಿ. ಶಂಕರ್‌

12:58 AM Dec 01, 2024 | Team Udayavani |

ಬಸ್ರೂರು: ಧಾರ್ಮಿಕ ಮುಂದಾಳು, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಅವರ 90ನೇ ವರ್ಷಾಚರಣೆಯು ಡಿ.24ಕ್ಕೆ ಸಾರ್ವಜನಿಕರ ಭಾಗೀದಾರಿಕೆಯೊಂದಿಗೆ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಶನಿವಾರ ಸಂಜೆ ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಆವರಣದಲ್ಲಿ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗೊಂಡಿದ್ದು, ಸಾಂಸ್ಕೃತಿಕ ಲೋಕವೇ ಅನಾವರಣಗೊಂಡಿತು.

Advertisement

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿಯ ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಅವರು, ಸಾಮಾಜಿಕ, ಧಾರ್ಮಿಕ ಸಹಿತ ಎಲ್ಲ ರಂಗದಲ್ಲೂ ಅಪಾರ ಕೊಡುಗೆ ಸಲ್ಲಿಸಿರುವ ಅಪ್ಪಣ್ಣ ಹೆಗ್ಡೆಯವರದು ಅಪರೂಪದ ವ್ಯಕ್ತಿತ್ವ. ಜಾತಿ, ಧರ್ಮಗಳೆಲ್ಲವನ್ನು ಮೀರಿದ ವ್ಯಕ್ತಿ. ಅವರ ಸಮಕಾಲಿನರಾಗಿ ಇರುವುದೇ ನಮ್ಮ ಭಾಗ್ಯ. ನೂರ್ಕಾಲ ಬಾಳಿ, ಬದುಕಲಿ ಎಂದು ಹಾರೈಸಿದರು.

ಮುಂಬಯಿ ಉದ್ಯಮಿ ಎನ್‌.ಟಿ. ಪೂಜಾರಿ ಅವರು ಡಿ.24ರ ಜನ್ಮ ದಿನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿ, ಹಾರೈಸಿದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಕೋಟದ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್‌, ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಅಧ್ಯಕ್ಷ ಬಿ. ಉದಯ ಕುಮಾರ್‌ ಹೆಗ್ಡೆ, ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ಬಿ. ರಾಮಕಿಶನ್‌ ಹೆಗ್ಡೆ, ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ ಪ್ರಸ್ತಾವಿಸಿ, ಗುರುಕುಲ ಸಮೂಹ ಶಿಕ್ಷಣ ಸಂಸ್ಥೆ ಟ್ರಸ್ಟಿ ಕೆ.ಸಿ.ರಾಜೇಶ್‌ ನಿರೂಪಿಸಿದರು.

ಸಾಂಸ್ಕೃತಿಕ ಲೋಕವೇ ಸೃಷ್ಟಿ
ಆಳ್ವಾಸ್‌ನ 400 ಜನ ವಿದ್ಯಾರ್ಥಿಗಳು ದೇಶ-ವಿದೇಶದ ಅಪರೂಪದ ಸಾಂಸ್ಕೃತಿಕ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸುವ ಮೂಲಕ “ಕಲಾ ಗೌರವ’ವನ್ನು ಸಮರ್ಪಿಸಿದರು. ಶಾಸ್ತ್ರೀಯ ನೃತ್ಯ – ಭೋ ಶಂಭೊ, ಗುಜರಾತಿನ ಗಾರ್ಭ ಮತ್ತು ದಾಂಡಿಯ, ಸೃಜನಾತ್ಮಕ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್‌ ನೃತ್ಯ, ಮಣಿಪುರಿಯ ಸ್ಟಿಕ್‌ ಡ್ಯಾನ್ಸ್‌, ಬಡಗುತಿಟ್ಟಿನ – ಶ್ರೀ ರಾಮ ಪಟ್ಟಾಭಿಷೇಕ, ಕಥಕ್‌ ನೃತ್ಯ- ವರ್ಷಧಾರೆ, ಪಶ್ಚಿಮ ಬಂಗಾಳದ ಪುರುಲಿಯಾ ನೃತ್ಯ, ಡೊಳ್ಳು ಕುಣಿತ, ಮಲ್ಲಕಂಬ ಹಾಗೂ ವಿವಿಧ ಕಸರತ್ತು ಸಹಿತ ಸುಮಾರು ಎರಡೂವರೆ ಗಂಟೆಗಳ ಕಾಲ ನೆರೆದವರನ್ನು ರಂಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next