Advertisement
ರಸ್ತೆ ಅಗಲೀಕರಣ ಹಾಗೂ ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಮೀನು ಮಾರುಕಟ್ಟೆ ಬಳಿ ಇರುವ ಬೀದಿ ಬದಿ ಹಣ್ಣುಗಳ ವ್ಯಾಪಾರಸ್ಥರ ಗೂಡಂಗಡಿಗಳನ್ನು ತೆರವು ಮಾಡಿ, ಮೀನು ಮಾರುಕಟ್ಟೆಯ ಕಟ್ಟಡದಲ್ಲೇ ಬದಲಿ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ.
ಮೀನು ಮಾರುಕಟ್ಟೆ ಬಳಿ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಇಲ್ಲಿ ದುರ್ನಾತ ಬೀರುತ್ತಿದೆ. ಮೀನು ಮಾರುಕಟ್ಟೆಯ ಕೊಳಚೆ ನೀರು ಹೋಗಲು ಪರ್ಯಾಯ ವ್ಯವಸ್ಥೆಯೇ ಇಲ್ಲ. ಈಗ ಗೂಡಂಗಡಿಗಳನ್ನು ತೆರವುಗೊಳಿಸಿದ್ದರಿಂದ ಚರಂಡಿ ಕಾರ್ಯವನ್ನು ಕೂಡ ಪೂರ್ಣಗೊಳಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
Related Articles
ಈ ಗೂಡಂಗಡಿಗಳನ್ನು ತೆರವು ಮಾಡಿದ್ದು, ಪಕ್ಕದಲ್ಲೇ ಇರುವ ಮೀನು ಮಾರುಕಟ್ಟೆಯ ಒಂದು ಬದಿಯಲ್ಲಿ ಹಣ್ಣಿನ ವ್ಯಾಪಾರಸ್ಥರಿಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಇದಕ್ಕೆ ಮೀನು ವ್ಯಾಪಾರಸ್ಥರು ತಕಾರರು ತೆಗೆದಿದ್ದು, ನಮಗೆ ಹೋಗಲು 3 ಕಡೆಗಳಲ್ಲಿ ದಾರಿ ಬೇಕು. ಅದಕ್ಕೆ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
Advertisement
ತೊಂದರೆ ಆಗದಂತೆ ವ್ಯವಸ್ಥೆ ಮಾಡಿಇನ್ನು ಪುರಸಭೆಯ ಬೀದಿ ಬದಿ ವ್ಯಾಪರಸ್ಥರ ಸಂಘದ ಮುಖ್ಯಸ್ಥೆ ಚಿಕ್ಕು ಅವರು “ಉದಯವಾಣಿ’ಯೊಂದಿಗೆ ಮಾತನಾಡಿ, ನಾವು ಹಲವು ವರ್ಷಗಳಿಂದ ಇಲ್ಲೇ ಇದ್ದೇವು. ಈಗ ರಸ್ತೆಗಾಗಿ ನಮ್ಮನ್ನು ಹಿಂದಿನ ಮಾರುಕಟ್ಟೆಯ ಕಟ್ಟಡಕ್ಕೆ ಕಳುಹಿಸಿದ್ದಾರೆ. ಅದಕ್ಕೆ ಮೀನು ಮಾರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡೂ ಕಡೆಯವರಿಗೂ ತೊಂದರೆಯಾಗದ ರೀತಿಯಲ್ಲಿ ಪುರಸಭೆ ಕ್ರಮಕೈಗೊಳ್ಳಲಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.