ಬೇಡಿಕೆಗಳ ಪಟ್ಟಿ ಇಲ್ಲಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿ-ತುಳುನಾಡಿನ ನಡುವೆ ಕೊಂಡಿಯಂತಿರುವ ಇಲ್ಲಿ ಪ್ರವಾಸೋದ್ಯಮ, ವಾರಾಹಿ, ಅರಣ್ಯ ಹೀಗೆ ಈಡೇರಬೇಕಾದ ಬೇಡಿಕೆಗಳಿರುವ ಹಲವು ರಂಗಗಳಿವೆ.
Advertisement
ಫ್ಲೆ ಓವರ್ಕಾಮಗಾರಿ ಆರಂಭವಾಗಿ 5 ವರ್ಷ ಕಳೆದರೂ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಫ್ಲೆ$çಓವರ್ ಕಾಮಗಾರಿ ಚುರುಕುಗೊಂಡಿಲ್ಲ. ಈ ಕಾರ್ಯ ಪೂರ್ಣಗೊಳ್ಳದೆ ಕುಂದಾಪುರ ಪೇಟೆ ಭಾಗದ ಅಭಿವೃದ್ಧಿಯೂ ಕುಂಠಿತಗೊಂಡಿದೆ.
ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಕಾರಣ ಸಂಚಾರ ಸಮಸ್ಯೆ ಗಂಭೀರವಾಗಿದೆ. ಕೆಲವು ಕಡೆ ಅಪಘಾತ ಗಳೂ ಸಂಭವಿಸುತ್ತಿವೆ. ಕೆಲಸ ಚುರುಕಾಗಬೇಕಿದೆ. ಗಂಗೊಳ್ಳಿ- ಕೋಡಿ ಸೇತುವೆ
ಕುಂದಾಪುರದಿಂದ ಗಂಗೊಳ್ಳಿಗೆ ರಸ್ತೆಯಲ್ಲಿ 15 ಕಿ.ಮೀ. ಕ್ರಮಿಸಬೇಕು. ಕೋಡಿ- ಗಂಗೊಳ್ಳಿ ಸೇತುವೆ ನಿರ್ಮಾಣವಾದರೆ ಕುಂದಾಪುರ – ಗಂಗೊಳ್ಳಿ ಸಂಪರ್ಕ ಇನ್ನಷ್ಟು ಹತ್ತಿರವಾಗಲಿದೆ. ಮೀನುಗಾರಿಕೆಗೂ ಪ್ರಯೋಜನವಾಗಲಿದೆ.
Related Articles
ಜನರು ವಾಹನ ನೋಂದಣಿಗೆ ಕುಂದಾಪುರ ದಿಂದ 45 ಕಿ.ಮೀ., ಬೈಂದೂರಿನಿಂದ 75 ಕಿ.ಮೀ. ದೂರದ ಮಣಿಪಾಲಕ್ಕೆ ಹೋಗಬೇಕು. ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಕಚೇರಿ ಅತ್ಯಂತ ಜರೂರಾಗಿ ಆಗಬೇಕು.
Advertisement
ಮಹಿಳಾ ಠಾಣೆಹಿಂದೆ ಇದ್ದ ಮಹಿಳಾ ಪೊಲೀಸ್ ಠಾಣೆ ಯನ್ನು ಉಡುಪಿಗೆ ವರ್ಗಾಯಿಸಿದ್ದು, ಈಗ ಮತ್ತೆ ಇಲ್ಲಿ ಮಹಿಳಾ ಸಂಬಂಧಿ ದೂರು, ಪ್ರಕರಣ ಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮತ್ತೆ ಮಹಿಳಾ ಠಾಣೆಗೆ ಬೇಡಿಕೆ ಕೇಳಿಬಂದಿದೆ. ವಾರಾಹಿ “ಮುಕ್ತಿ ‘ ಸಿಗಬಹುದೇ?
ಮೂರು ದಶಕಗಳಿಂದ ನನೆಗುದಿಗೆ ಬಿದ್ದಿ ರುವ ಬಹುಕೋಟಿ ರೂ. ವೆಚ್ಚದ ವಾರಾಹಿ ನದಿ ನೀರಿನ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಂಡರೆ ಸಿದ್ದಾಪುರ, ಶಂಕರನಾರಾಯಣ ಭಾಗದ ಕೃಷಿ ಭೂಮಿಗೆ ಅನುಕೂಲವಾಗಲಿದೆ. ಮೀನುಗಾರಿಕೆಗೆ ಒತ್ತು
ಕುಂದಾಪುರದ 15,000ಕ್ಕೂ ಅಧಿಕ ಮಂದಿ ಮೀನುಗಾರಿಕೆ ವೃತ್ತಿ ಅವಲಂಬಿಸಿದ್ದಾರೆ. ಜೆಟ್ಟಿ ವಿಸ್ತರಣೆ, ಜೆಟ್ಟಿ , ಕೆರೆಯಂತಹ ಒಳನಾಡು ಮೀನುಗಾರಿಕೆಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಐಸ್ ಪ್ಲಾಂಟ್, ಸಂಸ್ಕರಣ ಘಟಕಗಳು ಹೆಚ್ಚಾಗಬೇಕು. ಸಿಆರ್‌ಝಡ್ ಸಮಸ್ಯೆ
ಕುಂದಾಪುರದ ಹೆಚ್ಚಿನ ಭಾಗ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯಲ್ಲಿರುವುದರಿಂದ ನಿರ್ಮಾಣ ಕಾರ್ಯಗಳಿಗೆ ತೊಡಕಾಗಿದೆ. ಸಿಆರ್‌ಝಡ್ ಪ್ರದೇಶವನ್ನು ಸರಿಯಾದ ರೀತಿಯಲ್ಲಿ ಶೀಘ್ರ ಗುರುತಿಸಬೇಕಿದೆ. ಸರಕಾರಿ ಎಂಜಿನಿಯರಿಂಗ್ ಕಾಲೇಜು
ತಾಲೂಕಿನಲ್ಲಿ ಕೇವಲ ಒಂದು ಖಾಸಗಿ ಎಂಜಿನಿಯರಿಂಗ್ ಕಾಲೇಜು ಇದೆ. ಸರಕಾರಿ ಕಾಲೇಜಿನ ಕೊರತೆಯಿಂದಾಗಿ ಗ್ರಾಮೀಣ ವಿದ್ಯಾರ್ಥಿ ಗಳು ಎಂಜಿನಿಯರಿಂಗ್‌ನಲ್ಲಿ ಆಸಕ್ತಿ ಇದ್ದರೂ ಶಿಕ್ಷಣ ಪಡೆಯಲು ಅಸಾಧ್ಯವಾಗಿದೆ. ಪುರಭವನ ಬೇಕು
ಸಾಕಷ್ಟು ನಾಟಕ, ಸಭೆ, ಸಮಾರಂಭಗಳು ನಡೆಯುತ್ತಿದ್ದರೂ ತಾಲೂಕು ಕೇಂದ್ರವಾಗಿ ರುವ ಕುಂದಾಪುರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ಪುರಭವನದಂತಹ ಸರಿಯಾದ ವೇದಿಕೆಗಳಿಲ್ಲ. ರಸಗೊಬ್ಬರ ದಾಸ್ತಾನು ಕೇಂದ್ರ
ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ರಸಗೊಬ್ಬರ ದಾಸ್ತಾನು ಕೇಂದ್ರ ನಿರ್ಮಾಣವಾಗಬೇಕಿದೆ. ಸಕಾಲದಲ್ಲಿ ಸೂಕ್ತ ರಸಗೊಬ್ಬರಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗದೆ ಕೃಷಿಕರಿಗೆ ಸಮಸ್ಯೆಯಾಗಿದೆ. ಡೀಮ್ಡ್ ಫಾರೆಸ್ಟ್
ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ಈ ಭಾಗದ ಜನತೆ ಗೃಹ ನಿರ್ಮಾಣಕ್ಕೆ ಪಡಿಪಾಟಲು ಅನುಭವಿಸುತ್ತಿದ್ದಾರೆ. ಕೂಡಲೇ ಈ ಬಗ್ಗೆ ಸ್ಪಂದಿಸಿ ಸಮಸ್ಯೆ ನಿವಾರಿಸಿ ಜನರ ಸ್ವಂತ ಮನೆ ಕನಸನ್ನು ನನಸಾಗಿಸಬೇಕು.