Advertisement

ಕುಂದಾಪುರ: ಬಿಜೆಪಿ ಗೊಂದಲ ಮುಗಿದ ಅಧ್ಯಾಯ

06:00 AM Apr 10, 2018 | |

ಕುಂದಾಪುರ: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಕಟಿಸಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿಯೇ ಮಾಜಿ ಶಾಸಕ, ಈಚೆಗೆ ಬಿಜೆಪಿಗೆ ಮರುಸೇರ್ಪಡೆಗೊಂಡ ಹಾಲಾಡಿ ಶ್ರೀನಿವಾಸ ಶೆಟ್ಟರ ಹೆಸರು ಘೋಷಣೆಯಾಗಿರುವ ಕಾರಣ ಕುಂದಾಪುರ ಬಿಜೆಪಿಯಲ್ಲಿ ಗೊಂದಲ ಮುಗಿದ ಅಧ್ಯಾಯವಾಗಿದೆ. ಎರಡನೇ ಪಟ್ಟಿ ಬಿಡುಗಡೆ ಯಾಗುವವರೆಗೂ ಬೈಂದೂರಿನ ಅನಿಶ್ಚಿತತೆ ಮುಂದುವರಿಯಲಿದೆ.

Advertisement

2008ರಲ್ಲಿ ಕುಂದಾಪುರದಲ್ಲಿ ಮೂರನೇ ಅವಧಿಗೆ ಆಯ್ಕೆಯಾಗಿದ್ದ ಹಾಲಾಡಿ ಅವರಿಗೆ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ನೀಡುವ ಆಶ್ವಾಸನೆ ನೀಡಲಾಗಿತ್ತು. ಪ್ರಮಾಣ ವಚನ ಸ್ವೀಕಾರಕ್ಕಾಗಿ ಅವರು ಬೆಂಗ ಳೂರಿಗೆ ತೆರಳಿದ್ದರು. ಆದರೆ ಕೊನೆ ಕ್ಷಣದಲ್ಲಿ ಸಚಿವ ಪಟ್ಟಿಯಿಂದ ಕೈಬಿಡಲಾ ಗಿತ್ತು. ಇದರಿಂದ ನೊಂದ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. 2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ 40,000 ಮತಗಳ ಅಂತರದಿಂದ ಗೆದ್ದಿ ದ್ದರು. ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಆದರೆ ಅನಂತರದ ದಿನಗಳಲ್ಲಿ ಬಿಜೆಪಿ ಕುರಿತು ಮೃದು ಧೋರಣೆ ತಳೆದು ಸಂಸತ್‌, ಜಿ.ಪಂ., ತಾ.ಪಂ., ಗ್ರಾ.ಪಂ. ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಕಾರ್ಯಕರ್ತರಲ್ಲಿ ಸೂಚಿ ಸಿದ್ದರು. ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿಯೂ ಭಾಗವಹಿಸಿದ್ದರು. ಬಿಜೆಪಿಗೆ ಸೇರ್ಪಡೆ ಯಾಗಲು ಶಾಸಕತ್ವಕ್ಕೆ ಅವಧಿಗೆ ಮುನ್ನವೇ ರಾಜೀನಾಮೆ ನೀಡಿ ಪಕ್ಷ ಸೇರಿದ್ದರು. 

ತಣಿದ ವಿರೋಧ
ಹಾಲಾಡಿ ಅಭ್ಯರ್ಥಿಯಾಗುವುದಕ್ಕೆ ಬಿಜೆಪಿ ಒಳಗೆ ಒಂದಷ್ಟು ವಿರೋಧ ಇತ್ತು. ಕಳೆದ ಬಾರಿ ಬಿಜೆಪಿಯ ಸಂಕಷ್ಟ ಕಾಲದಲ್ಲಿ ಆಸರೆಯಾಗಿ ಸ್ಪರ್ಧಿಸಿದ್ದ ಕಿಶೋರ್‌ ಕುಮಾರ್‌ ಅವರು ಈ ಬಾರಿ ಅಭ್ಯರ್ಥಿಯಾಗಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಬಳಿಕ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆಯವರಿಗೆ ಅವಕಾಶ ನೀಡಬೇಕೆಂಬ ಒತ್ತಾಯ ಇತ್ತು. ಇದಕ್ಕೆ ಪೂರಕ ವಾಗಿ ಜಯ ಪ್ರಕಾಶ್‌ ಹೆಗ್ಡೆ ಅವರು ಕುಂದಾಪುರ ಕ್ಷೇತ್ರದ ಮತದಾರರ ಮನೆಗಳಿಗೆ ತೆರಳಿ ಪಕ್ಷದ ಪರ ಮತ ಯಾಚಿಸುತ್ತಿದ್ದರು. ಆದರೆ ಬಿಜೆಪಿ ನಡೆಸಿದ ಸರ್ವೆಗಳು ಹಾಲಾಡಿ ಯವರನ್ನು “ಗೆಲ್ಲುವ ಅಭ್ಯರ್ಥಿ’ ಎಂದು ಮನಗಂಡ ಕಾರಣ ವಿರೋಧಕ್ಕೆ ಸೊಪ್ಪು ಹಾಕಲಿಲ್ಲ. ಬಿಜೆಪಿ ತೊರೆದು ಸ್ಪರ್ಧಿಸಿ, ಬಿಜೆಪಿಗೆ ಮರಳಿದವರು ಎಂಬ ಆರೋಪವನ್ನು ಹಾಲಾಡಿಯವರ ಮೇಲೆ ವಿರೋಧಿ ಗಳು ಮಾಡಿದ್ದರು. ವಿರೋಧಿಗಳು ಅಭ್ಯರ್ಥಿಯಾಗಿ ಸೂಚಿಸಿದ ಜಯಪ್ರಕಾಶ್‌ ಹೆಗ್ಡೆ ಕಾಂಗ್ರೆಸ್‌ನಿಂದ ಬಂದವರು ಎಂದು ಪ್ರತಿವಾದ ಕೇಳಿಬಂದಿತ್ತು. 

ಕೊನೆಗೂ ಹಾಲಾಡಿ ಅವರೇ ಅಭ್ಯರ್ಥಿ ಎಂದು ಮೊದಲ ಪಟ್ಟಿಯಲ್ಲಿಯೇ ಪ್ರಕಟ ವಾದ ಕಾರಣ ಕುಂದಾಪುರ ಕ್ಷೇತ್ರದ ಬಿಜೆಪಿ ಗೊಂದಲ ಮುಗಿದಂತಾಗಿದೆ. ವಿರೋಧಿಸುತ್ತಿದ್ದವ ಧ್ವನಿ ಅಡಗಿದೆ. ಪಕ್ಷ ಹೇಳಿದಂತೆ ಕೇಳುತ್ತೇವೆ ಎನ್ನುತ್ತಿದ್ದಾರೆ. ಹಾಲಾಡಿ ಬೆಂಬಲಿಗರು ಸಡಗರದಲ್ಲಿದ್ದು, ಸಕಲ ಸಿದ್ಧತೆ ಮಾಡುತ್ತಿದ್ದಾರೆ. ನಾಮ ಪತ್ರ ಸಲ್ಲಿಕೆಗೆ ಇನ್ನೂ ದಿನ ನಿಗದಿಯಾಗಿಲ್ಲ, ಪ್ರಚಾರ ಸಿದ್ಧತೆಗೆ ಅಂತಿಮ ರೂಪುರೇಷೆ ನೀಡಲಾಗುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಬೈಂದೂರು ಗೊಂದಲ ಯಥಾಸ್ಥಿತಿ
ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಗೊಂದಲ ಸದ್ಯದ ಮಟ್ಟಿಗೆ ಮುಂದು ವರಿದಿದೆ. ಕಳೆದ ಬಾರಿ ಸ್ಪರ್ಧಿಸಿ ಪರಾಜಿತ ರಾದ ಕೊಲ್ಲೂರು ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟರು ಪ್ರಬಲ ಆಕಾಂಕ್ಷಿ. ಇಲ್ಲಿಯೂ ಅವರಿಗೆ ಜಯಪ್ರಕಾಶ ಹೆಗ್ಡೆ ಯವರದ್ದೇ ತೊಡರುಗಾಲು ಇದೆ. ಇಲ್ಲಿನ ಅಭ್ಯರ್ಥಿ ಘೋಷಣೆಯಾಗುವ ವರೆಗೆ ಇಬ್ಬರ ಬೆಂಬಲಿಗರೂ ಅಧಿಕೃತ ವಾಗಿ ಪ್ರಚಾರಕ್ಕೆ ಇಳಿಯುತ್ತಿಲ್ಲ. ಸುಕುಮಾರ ಶೆಟ್ಟರು ಎ. 7ರಂದು ಬೈಂದೂರು ಕ್ಷೇತ್ರದ ಮತ ದಾರ ರನ್ನು ಬೆಂಗಳೂರಿನಲ್ಲಿ ಸಭೆ ಸೇರಿಸಿ ಬೆಂಬಲ ಕೋರಿದ ಬೆನ್ನಿಗೆ ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಪೂಜಾರಿ ಅವರು ಕೂಡ ಎ. 8ರಂದು ಬೆಂಗಳೂರಿನಲ್ಲಿ ಬೆಂಬಲಿಗರ ಸಭೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next