Advertisement

ಕುಂದಾಪುರ ಮಳೆಯಬ್ಬರ: ಹಲವು ಮನೆಗಳಿಗೆ ಹಾನಿ, ಅಪಾರ ನಷ್ಟ

06:00 AM Jul 08, 2018 | |

ಕುಂದಾಪುರ: ತಾಲೂಕಿನೆಲ್ಲೆಡೆ ಶನಿವಾರವೂ ವರುಣನ ಆರ್ಭಟ ಮುಂದುವರಿದಿದ್ದು, ಹಲವೆಡೆ ಮನೆಗಳು, ತೋಟಗಳಿಗೂ ಹಾನಿಯಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. 

Advertisement

ಖಾರ್ವಿಕೇರಿ: 3 ಮನೆ ಕುಸಿತ
ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕುಂದಾಪುರ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿ ವಾರ್ಡಿನ ಪುರುಷೋತ್ತಮ್‌ ನಾಯ್ಕ ಅವರ ಮನೆ ಗೋಡೆ ಕುಸಿದು, ಭಾಗಶಃ ಹಾನಿಯಾಗಿದೆ. 

ಅಂದಾಜು ಸುಮಾರು 30 ಸಾವಿರ ರೂ. ನಷ್ಟ, ಹರೀಶ್‌ ಖಾರ್ವಿ ಅವರ ಮನೆ ಗೋಡೆ ಕುಸಿದು, ಸುಮಾರು 40 ಸಾವಿರ ರೂ. ನಷ್ಟ, ಪಾಂಡುರಂಗ ಖಾರ್ವಿ ಅವರ ಮನೆ ಕುಸಿದು, ಸುಮಾರು 40 ಸಾವಿರ ರೂ. ನಷ್ಟ ಉಂಟಾಗಿದೆ. 

ವಡೇರಹೋಬಳಿ ಗ್ರಾಮದ ಕೈಪಾಡಿಯಲ್ಲಿ ಬಚ್ಚಿ ಪೂಜಾರಿ¤ ಅವರ ಮನೆಗೆ ಹಾನಿಯಾಗಿದ್ದು, 50 ಸಾವಿರ ರೂ. ನಷ್ಟ, ಕಟ್‌ಬೆಲೂ¤ರು ಗ್ರಾಮದ ಇಂದಿರಾ ನಗರ ನಿವಾಸಿ ಗಿರಿಜಾ ಪೂಜಾರಿ¤ ಅವರ ಮನೆಯ ಶೆಡ್‌ ಕುಸಿದು, ಸುಮಾರು 25 ಸಾವಿರ ರೂ. ನಷ್ಟ ಸಂಭವಿಸಿದೆ.
 
ಮನೆಗೆ ಮರ ಬಿದ್ದು ಹಾನಿ
ಹಾರ್ದಳ್ಳಿ- ಮಂಡಳ್ಳಿ ಗ್ರಾಮದ ಸೀತಾ ಅವರ ಮನೆಗೆ ಮರ ಬಿದ್ದು, ಭಾಗಶಃ ಹಾನಿಯಾಗಿದೆ. ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿದೆ. 

ಆನಗಳ್ಳಿ : ತೋಟಗಳಿಗೆ ಹಾನಿ
ಆನಗಳ್ಳಿ ಗ್ರಾಮದ ಮುತ್ತ ಪೂಜಾರಿ ಅವರ ತೋಟಕ್ಕೆ ಹಾನಿಯಾಗಿದ್ದು, ಸುಮಾರು 20 ಸಾವಿರ ರೂ. ನಷ್ಟ ಸಂಭವಿಸಿದೆ. ಅದೇ ಗ್ರಾಮದ ಸೀತಾರಾಮ್‌ ನಾಯ್ಕ ಅವರ ತೋಟಕ್ಕೂ ಮಳೆಯಿಂದಾಗಿ ಹಾನಿಯಾಗಿದ್ದು, ಸುಮಾರು 15 ಸಾವಿರ ರೂ. ನಷ್ಟ ಉಂಟಾಗಿದೆ. ನೋಯಲ್‌ ಅವರ ತೋಟಕ್ಕೆ ಹಾನಿ ಉಂಟಾಗಿದ್ದು, ಸುಮಾರು 20 ಸಾವಿರ ರೂ. ನಷ್ಟ ಸಂಭವಿಸಿದೆ. 

Advertisement

ಕಡಲಬ್ಬರ ಜೋರು
ಕೋಟೇಶ್ವರದ ಕಿನಾರಾ, ಕೋಡಿ, ಗಂಗೊಳ್ಳಿ, ಮರವಂತೆ, ಸೋಮೇಶ್ವರ ಭಾಗದಲ್ಲಿ ಕಡಲಬ್ಬರ ಜೋರಾಗಿದ್ದು, ಭಾರೀ ಗಾತ್ರದ ಅಲೆಗಳು ಬಂದು ದಡಕ್ಕೆ ಅಪ್ಪಳಿಸುತ್ತಿದೆ. 

ಇನ್ನು ಕುಂದಾಪುರ, ಬೈಂದೂರು ಭಾಗದ ಸೌಪರ್ಣಿಕಾ, ಕುಬಾj, ವಾರಾಹಿ, ಚಕ್ರ, ಕಾಶಿ ನದಿಗಳು ತುಂಬಿ ಹರಿಯುತ್ತಿದ್ದು, ಕೆಲವು ಕಡೆಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಭಾರೀ ಮಳೆಗೆ ಮಾರಣಕಟ್ಟೆ  
ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಜಲಾವೃತ
ಕೊಲ್ಲೂರು
: ಕಳೆದ 3 ದಿನ ಗಳಿಂದ ಅವ್ಯಾಹತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕುಂದಾಪುರ ಹಾಗೂ ಉಡುಪಿ ತಾಲೂಕಿನ ಮಾರಣ ಕಟ್ಟೆಯ  ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನವು ಸಂಪೂರ್ಣ ಜಲಾವೃತಗೊಂಡಿದೆ.

ಮಾರಣಕಟ್ಟೆಯ ಬ್ರಹ್ಮಕುಂಡ ನದಿ ಉಕ್ಕಿ ಹರಿಯುತ್ತಿದ್ದು, ಅದರ ಉಪನದಿಯಾದ ಚಕ್ರಾ ನದಿಯು ಅಪಾಯ ಮಟ್ಟದಿಂದ ಮೇಲೆ ಹರಿದು ಬಂದಿರುವುದರಿಂದ  ಮಾರಣಕಟ್ಟೆಯ  ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ,  ದೇಗುಲದ ಭೋಜನ ಶಾಲೆ ಸಹಿತ  ಬಲಪಾರ್ಶ್ವ ಸಂಪೂರ್ಣ ಜಲಾಮಯವಾಗಿದೆ. ಇಲ್ಲಿಗೆ ಆಗಮಿಸಿದ ಭಕ್ತರು  ತೊಯ್ದ ಬಟ್ಟೆಯಲ್ಲಿ ದೇವರ ದರ್ಶನ ಮಾಡಬೇಕಾಯಿತು. ಚಿತ್ತೂರು, ಹೊಸೂರು, ವಂಡ್ಸೆ, ಇಡೂರು, ನೂಜಾಡಿ, ಕುಂದಬಾರಂದಾಡಿ, ಜಾಡಿ ಪರಿಸರದಲ್ಲಿನ ಅನೇಕ ಕೃಷಿಭೂಮಿ ಸಂಪೂರ್ಣ ಜಲಾವೃತಗೊಂಡಿದ್ದು  ಕೃಷಿ ಬೆಳೆ ನಾಶವಾಗಿದೆ. ವಂಡ್ಸೆ ಪರಿಸರದಲ್ಲಿ ಈ ಭಾಗದ ಚರಿತ್ರೆಯಲ್ಲೇ ಮೊದಲು ಎಂಬಂತೆ ಕಳೆದ 3 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. 

ಕೊಲ್ಲೂರಿನಲ್ಲಿ ಭಾರೀ ಮಳೆ : ಕೊಲ್ಲೂರು ಪರಿಸರದಲ್ಲಿ ಎಡಬಿಡದೆ  ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಹಾಲ್ಕಲ್‌, ಜಡ್ಕಲ್‌, ಮುದೂರಿನಲ್ಲಿ ಮಳೆಯಾಗಿದ್ದು ಯಾವುದೇ ಅನಾಹುತದ ಬಗ್ಗೆ ವರದಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next