ಕೆಲವು ದಿನಗಳಿಂದ ಹವಾಮಾನ ದಲ್ಲಿ ಇದನ್ನು ಪುಷ್ಟೀಕರಿಸುವ ಬದಲಾ ವಣೆ ಗೋಚರವಾಗಿದೆ. ಮುಂಗಾರು ಮಳೆಯ ಅಬ್ಬರ ಕಡಿಮೆ ಆಗಿ ನಾಲ್ಕೈದು ದಿನ ಬಿಸಿಲು ಕಾಣಿಸಿ ಕೊಂಡ ಬೆನ್ನಲ್ಲೇ ಹಿಂಗಾರು ರೀತಿ ಮೋಡವಾಗಿ ಮಳೆ ಸುರಿಯಲಾರಂಭಿಸಿದೆ. ಮುಂಗಾರು ವೇಳೆ ಪಶ್ಚಿಮದಿಂದ ಬರುವ ಮೋಡಗಳು ಮಳೆ ಸುರಿಸುತ್ತವೆ ಎಂಬುದು ಇದುವರೆಗಿನ ಲೆಕ್ಕಾಚಾರ ವಾಗಿತ್ತು. ಈಗ ಕೆಲವು ದಿನಗಳಿಂದ ಪೂರ್ವದಿಂದ ಮೋಡ ಸೃಷ್ಟಿಯಾಗಿ ಮಳೆಯಾಗುತ್ತಿದೆ.
Advertisement
ಯಾವುದೇ ಮುನ್ಸೂಚನೆ ಇಲ್ಲದೆ ಕೆಲವು ಕಡೆಗಳಲ್ಲಿ ಸ್ಥಳೀಯವಾಗಿ ಮೋಡಗಳು ದಟ್ಟೈಸಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮಧ್ಯಾಹ್ನ ಬಳಿಕ ಹೆಚ್ಚು. ಸಿಡಿಲಿನ ಆರ್ಭಟವೂ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ, ಕೆಲವು ದಿನಗಳಿಂದ ಪಂಜ, ಕೊಲ್ಲಮೊಗರು, ಸುಬ್ರಹ್ಮಣ್ಯ ಭಾಗ ದಲ್ಲಿ ಸಂಜೆ-ರಾತ್ರಿ ಧಾರಾಕಾರ ಮಳೆಯಾಗಿದೆ. ಶನಿ ವಾರ ಉಡುಪಿಯಲ್ಲಿ ಸಂಜೆ ಸಿಡಿಲು ಸಹಿತ ಮಳೆಯಿತ್ತು.
ಹವಾಮಾನದಲ್ಲಿ ಬದಲಾವಣೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಮಳೆ ಮಾರುತ ನೈಋತ್ಯ ಭಾಗದಿಂದ ಬಂದು ರಾಜ್ಯ ಕರಾವಳಿ ತೀರದಿಂದ ದಕ್ಷಿಣ ತರಂಗಾಂತರ ವಾಗಿ ಶ್ರೀಲಂಕಾ ಮೂಲಕ ಬಂಗಾಲಕೊಲ್ಲಿಗೆ ಸೇರುತ್ತಿದೆ. ಅಲ್ಲಿಂದ ತಿರುವು ಪಡೆದು ತಮಿಳುನಾಡಿನ ಮೂಲಕಕರ್ನಾಟಕಕ್ಕೆ ಪ್ರವೇಶಿಸುತ್ತಿದೆ. ಬಂಗಾಲಕೊಲ್ಲಿಯಿಂದ ಬರುವ ಮೋಡಗಳ ಜತೆ ಸ್ಥಳೀಯ ಮೋಡ ಸೃಷ್ಟಿಯಾದ ಕಾರಣ ಮೇಘಸ್ಫೋಟದಂತಹ ಭಾರೀ ಮಳೆ ಅಲ್ಲಲ್ಲಿ ಆಗು ತ್ತಿದೆ. ಕರ್ನಾಟಕದ ಕೆಲವು ಭಾಗ ಸೇರಿದಂತೆ ಕೇರಳದಲ್ಲಿ ಹೆಚ್ಚು ಮಳೆಯಾಗಿ ತೇವಾಂಶ ಹೆಚ್ಚಾಗಿದೆ. ಇದರಿಂದ ಉಷ್ಣಾಂಶ ಕಡಿಮೆಯಾಗಿ ಅಲ್ಲಿ ಒತ್ತಡ ಹೆಚ್ಚಾಗುತ್ತದೆ. ಅರಬಿ ಸಮುದ್ರ ದಿಂದ ಬರುವ ಮೋಡ ಹೆಚ್ಚು ಒತ್ತಡ ಇರುವ ಪ್ರದೇಶವನ್ನು ತಪ್ಪಿಸಿ, ಕಡಿಮೆ ಒತ್ತಡ ಇರುವ ಪ್ರದೇಶಕ್ಕೆ ಚಲಿಸುತ್ತದೆ.
ಸುಳ್ಯದಲ್ಲಿ ನೆರೆ, ಮಂಗಳೂರು, ಉಡುಪಿಯಲ್ಲಿ ಬಿಸಿಲು!
ಸಾಮಾನ್ಯವಾಗಿ ಮುಂಗಾರು ಮಳೆ ಎಂದರೆ ಕರಾವಳಿಯಾದ್ಯಂತ ಒಂದೇ ರೀತಿ ಇರುತ್ತದೆ. ಆದರೆ ಈ ಬಾರಿ ಸುಳ್ಯ ಆಸುಪಾಸಿನಲ್ಲಿ ನೆರೆ ಬಂದರೆ ಮಂಗಳೂರು, ಉಡುಪಿಯಲ್ಲಿ ಬಿಸಿಲು ಇರುತ್ತದೆ. ಆ. 14ರಿಂದ 17ರ ವರೆಗೆ ಸುಳ್ಯ ಭಾಗದಲ್ಲಿ ಇದ್ದ ಮಳೆಯ ಪ್ರಮಾಣ ಮಂಗಳೂರು, ಉಡುಪಿಯಲ್ಲಿ ಇರಲಿಲ್ಲ.
ಹಿಂಗಾರಿನ ಮೇಲೆ ಪರಿಣಾಮವಾದೀತೇ?
ಈ ಮಳೆ ಹಿಂಗಾರಿನ ಮೇಲೆ ಪರಿಣಾಮ ಬೀರೀತೇ ಎಂದು ಈಗಲೇ ಹೇಳಲಾಗದು. ಹವಾಮಾನ ಈಗ ಹಿಂದಿನಂತೆ ನಿರ್ದಿಷ್ಟವಾಗಿ ಇಲ್ಲ. ಆಗಾಗ ಬದಲಾಗುತ್ತದೆ ಎನ್ನುತ್ತಾರೆ ಹವಾಮಾನ ತಜ್ಞರು.
Related Articles
– ಸಿ.ಎಸ್. ಪಾಟೀಲ್, ನಿರ್ದೇಶಕ ಹಾಗೂ ವಿಜ್ಞಾನಿ, ಭಾರತೀಯ ಹವಾಮಾನ ಇಲಾಖೆ (ಐಎಂಡಿ), ಬೆಂಗಳೂರು ವಿಭಾಗ
Advertisement
ಸೀಮಿತ ವ್ಯಾಪ್ತಿಯಲ್ಲಿ ದಿಢೀರ್ ಮಳೆಇತ್ತೀಚೆಗೆ 30ರಿಂದ 40 ಕಿ.ಮೀ. ವ್ಯಾಪ್ತಿಯಲ್ಲಿ ಹವಾಮಾನ ಬದಲಾವಣೆಯಾ ಗುತ್ತಿದೆ. ಇದನ್ನು “ಲೋಕಲೈಸ್ಡ್ ಎಫೆಕ್ಟ್’ ಎನ್ನಬಹುದು. ಒಂದು ಕಡೆ ಗಾಳಿಯಲ್ಲಿ ತೇವಾಂಶ ಹೆಚ್ಚಾಗಿದ್ದರೆ, ಮತ್ತೂಂದು ಕಡೆ ಕಡಿಮೆ ಇರುತ್ತದೆ. ತೇವಾಂಶ ಹೆಚ್ಚಿ ರುವಲ್ಲಿ ಮೋಡ ಸೃಷ್ಟಿಯಾಗುತ್ತವೆ. ಆಗ ಮಳೆಯ ಬಿರುಸು ಹೆಚ್ಚು ತ್ತದೆ. ಇನ್ನು ಇತ್ತೀಚೆಗೆ ಒಂದೇ ನಗರದ ವಿವಿಧ ಭಾಗಗಳಲ್ಲಿಯ ತಾಪಮಾನದಲ್ಲಿ ಏರಿಳಿತ ಕಂಡು ಬರುತ್ತದೆ’ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.