Advertisement
ಹೆಮ್ಮಾಡಿ ಗ್ರಾಮದ ಸಂತೋಷನಗರ ಸಮೀಪದ ಬುಗುರಿಕಡುವಿನಲ್ಲಿ ಶೀನ ಪೂಜಾರಿ ಅವರು 20 ವರ್ಷಗಳಿಗೂ ಹೆಚ್ಚು ಕಾಲದಿಂದ ಗೌರಿ – ಗಣೇಶ ಹಬ್ಬ, ನವರಾತ್ರಿ, ತುಳಸಿ ಹಬ್ಬಕ್ಕೆಂದೇ ಕಬ್ಬು ಬೆಳೆಯುತ್ತಿದ್ದಾರೆ.
ಈ ಬಾರಿ ಮಳೆಗಾಲದಲ್ಲಿ ಹಾಗೂ ಕಬ್ಬಿನ ಬೆಳವಣಿಗೆ ವೇಳೆಯೂ ನಿರಂತರ ಮಳೆಯಾದ ಕಾರಣ ಹಳದಿ ಕಬ್ಬಿಗೆ ರೋಗ ಬಾಧಿಸಿದೆ. ಶೀನ ಪೂಜಾರಿಯವರು 60-70 ಸೆಂಟ್ಸ್ ಜಾಗದಲ್ಲಿ ಕಬ್ಬು ಬೆಳೆದಿ ದ್ದಾರೆ. ಈ ಪೈಕಿ 25 ಸೆಂಟ್ಸ್ ಜಾಗದಲ್ಲಿ ಕೆಂಪು ಕಬ್ಬು ಬೆಳೆದಿದ್ದು, ಅದಕ್ಕೆ ಯಾವುದೇ ರೋಗ ಬಾಧೆ ಇಲ್ಲ. ಉಳಿದ ಜಾಗದಲ್ಲಿರುವ ಹಳದಿ ಕಬ್ಬು ಬಹುತೇಕ ರೋಗಕ್ಕೆ ತುತ್ತಾಗಿದೆ. ಚೌತಿಗೆ ಹೆಚ್ಚಿನ ಬೇಡಿಕೆ ಇರುವುದೇ ಹಳದಿ ಕಬ್ಬಿಗೆ. ಬಾಧಿಸಿರುವ ರೋಗ ಎನ್ನುವುದು ಸ್ಪಷ್ಟವಾಗಿಲ್ಲ. ಬೆಂಕಿ ರೋಗ ಕಂಡುಬರುತ್ತಿದೆ ಎನ್ನುತ್ತಾರೆ ಶೀನ ಪೂಜಾರಿ. ಚೌತಿಯಿಂದ ಆರಂಭಗೊಂಡು, ಉತ್ಥಾನ ದ್ವಾದಶಿ (ತುಳಸಿ ಹಬ್ಬ) ಹಬ್ಬ, ನವರಾತ್ರಿ, ದೀಪಾವಳಿ, ಕೊಡಿ ಹಬ್ಬ, ಉಪ್ಪುಂದ ಹಬ್ಬಗಳಿಗೆ ಇಲ್ಲಿಂ ದಲೇ ಅನೇಕ ಮಂದಿ ಕಬ್ಬು ತೆಗೆದುಕೊಂಡು ಹೋಗುತ್ತಾರೆ. ಕುಂದಾಪುರ, ಬೈಂದೂರು, ಕೋಟೇಶ್ವರ, ಗಂಗೊಳ್ಳಿ, ಹೆಮ್ಮಾಡಿ ಸಹಿತ ಸುತ್ತಮುತ್ತಲಿನ ಹತ್ತಾರು ಊರುಗಳಿಂದ ಇವರಲ್ಲಿಗೆ ಕಬ್ಬಿಗಾಗಿ ಜನ ಬರುತ್ತಿದ್ದಾರೆ. ತುಳಸಿ ಹಬ್ಬಕ್ಕೆ ಹೆಮ್ಮಾಡಿ ಗ್ರಾಮದ ಬಹುತೇಕ ಮನೆಯವರು ಇವರಿಂದಲೇ ಕಬ್ಬು ಖರೀದಿಸುವುದು ವಾಡಿಕೆ. ಮೊದಲು ಹೆಮ್ಮಾಡಿಯ ಈ ಬುಗುರಿಕಡುವಿನಲ್ಲಿ ಅನೇಕ ಮಂದಿ ಕಬ್ಬು ಬೆಳೆಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದುಬಾರಿ ಕೂಲಿ, ಕೆಲಸಕ್ಕೆ ಜನ ಸಿಗದಿರುವುದು, ನೀರಿನ ಸಮಸ್ಯೆ, ಪ್ರತಿಕೂಲ ಹವಾಮಾನ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಸ್ಥಗಿತ ಸಹಿತ ಇನ್ನಿತರ ಕಾರಣಗಳಿಂದ ಈಗ ಕೇವಲ ಒಬ್ಬರು ಮಾತ್ರ ಬೆಳೆಯುತ್ತಿದ್ದಾರೆ.
Related Articles
ಕಬ್ಬಿಗೆ ಬೇಡಿಕೆಯಿದೆ. ಆದರೆ ಅಷ್ಟೊಂದು ಕಬ್ಬು ಇಲ್ಲ. ಹಳದಿ ಕಬ್ಬು ಜಾಸ್ತಿ ಬೇಡಿಕೆಯಿದ್ದರೂ, ರೋಗದಿಂದಾಗಿ ಇಳುವರಿಯೇ ಇಲ್ಲ. ಕೆಂಪು ಕಬ್ಬಿನ ಒಂದು ಜೊಲ್ಲೆಗೆ 25-30 ರೂ., ಜೋಡಿಗೆ ಆದರೆ 50 ರೂ.ಗೆ ಮಾರುತ್ತಿದ್ದೇನೆ.
– ಶೀನ ಪೂಜಾರಿ ಬುಗುರಿಕಡು, ಕಬ್ಬು ಬೆಳೆಗಾರರು
Advertisement