Advertisement

ಕುಂದಾಪುರ:  ರಂಗ ಅಧ್ಯಯನ ಕೇಂದ್ರದ ನಾಟಕೋತ್ಸವದ ಉದ್ಘಾಟನೆ

06:21 PM Mar 06, 2017 | Team Udayavani |

ಕುಂದಾಪುರ: ನಾಡಿನ ಪ್ರಮುಖ ರಂಗಶಾಲೆಯಾಗಿರುವ ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ನಾಟಕೋತ್ಸವದ ಉದ್ಘಾಟನಾ ಸಮಾರಂಭ ಮಾ.3ರಂದು  ಕೇಂದ್ರದ ಪದ್ಮಾವತಿ ಭಂಡಾರ್ಕರ್‌ ರಂಗಮಂದಿರದಲ್ಲಿ ಜರಗಿತು.

Advertisement

ಕೇಂದ್ರದ ನಿರ್ದೇಶಕ ಡಾ| ಎಚ್‌. ಶಾಂತಾರಾಮ್‌ ಅವರು  ನಾಟಕೋತ್ಸವ ವನ್ನು ಉದ್ಘಾಟಿಸಿ  ಮಾತನಾಡಿ,  ರಂಗ ಅಧ್ಯಯನ ಕೇಂದ್ರವು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ರಂಗಶಾಲೆಯಾಗಿದ್ದು,  ಪ್ರತಿವರ್ಷ 12 ರಿಂದ 15 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತವೆ. ಅವರಿಗೆ ಸತತ ಒಂದು ವರ್ಷಗಳ ಕಾಲ ರಂಗ ತರಬೇತಿ ನೀಡಲಾಗುತ್ತವೆ. ಆ ಮೂಲಕ ಅವರು ತಮ್ಮ ಕಾಲ ಮೇಲೆ ತಾವು ನಿಲ್ಲಲು ಸ್ಫೂರ್ತಿಯನ್ನು ನೀಡಲಾಗುತ್ತದೆ. ಹಾಗಾಗಿ ಕೇಂದ್ರದಲ್ಲಿ ಪ್ರತಿವರ್ಷ ನಾಟಕೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತವೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ರೀತಿಯ ರಂಗ ಪರಿಕಲ್ಪನೆಗಳ ಪರಿಚಯವಾಗು ತ್ತವೆ ಎಂದರು.

ಈ ಕಾರ್ಯಕ್ರಮದಲ್ಲಿ ಕೇಂದ್ರದ ಕೇಂದ್ರದ ಆಡಳಿತ ಮಂಡಳಿ ಸದಸ್ಯರಾದ  ಶಾಂತಾರಾಮ್‌ ಪ್ರಭು,  ರಾಜೇಂದ್ರ ತೋಳಾರ್‌, ಕೇಂದ್ರದ ಕಾರ್ಯದರ್ಶಿ ಡಾ| ಎನ್‌.ಪಿ. ನಾರಾಯಣ ಶೆಟ್ಟಿ, ಸಂಚಾಲಕ  ವಸಂತ ಬನ್ನಾಡಿ, ಕೇಂದ್ರದ ಉಪನ್ಯಾಸಕರಾಗಿರುವ ಮಹೇಶ ಆಚಾರಿ, ವಿನಾಯಕ ಎಸ್‌.ಎಂ., ಡಾ| ರಜತ ರಾವ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅನಂತರ ಕೇಂದ್ರದ ಹಳೆಯ ವಿದ್ಯಾರ್ಥಿ ಅರುಣ ಬಿ.ಟಿ. ನಿರ್ದೇಶನದ ಅಂಧಯುಗ ನಾಟಕ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next