ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘ, ಶ್ರೀ ಗಜೇಂದ್ರ ಸಾಂಸ್ಕೃತಿಕ ಕಲಾಸಂಘದಿಂದ 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ನಾಟಕೋತ್ಸವಕ್ಕೆ ನಗರದ ಡಾ.ರಾಜ್‌ಕುಮಾರ್ ಕಲಾಮಂದಿರದಲ್ಲಿ ಚಾಲನೆ ನೀಡಲಾಯಿತು.
ನಗರಸಭಾ ಸದಸ್ಯ ಟಿ.ಎನ್.ಪ್ರಭು ದೇವ್ ಮಾತನಾಡಿ, ಕಲೆಗೆ ಉತ್ತೇಜನ ನೀಡಿ ಗ್ರಾಮೀಣ ಪ್ರದೇಶಗಳ ಪ್ರತಿಭೆ ಗಳನ್ನು ಬೆಳಕಿಗೆ ತರುವಲ್ಲಿ ಉತ್ತಮ ವೇದಿಕೆಗಳ ಅಗತ್ಯವಿದ್ದು, ಕಲಾವಿದರಿಗೆ ಹೆಚ್ಚಿನ ಉತ್ತೇಜನ ನೀಡಬೇಕಿದೆ. ಸಂಕಷ್ಟ ದಲ್ಲಿರುವ ಕಲಾವಿದರಿಗೆ ಸರ್ಕಾರ ಅಗತ್ಯ ನೆರವು ನೀಡುವುದರೊಂದಿಗೆ ಕಲೆಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.
ಇದನ್ನೂ ಓದಿ:- ಮುಖ್ಯಮಂತ್ರಿಯನ್ನು ಬಲಿ ಪಡೆಯಲಿದೆ ಬಿಟ್ ಕಾಯಿನ್ ಹಗರಣ: ಪ್ರಿಯಾಂಕ್ ಖರ್ಗೆ ಭವಿಷ್ಯ
ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನು ಮಂತರಾಯಪ್ಪ, ನಗರಸಭಾ ಸದಸ್ಯ ಜಿ.ನಾಗರಾಜು, ಬಿಜೆಪಿ ಜಿಲ್ಲಾ ಫಲಾನುಭವಿಗಳ ಪ್ರಕೋಷ್ಟದ ಸಂಚಾಲಕ ಧೀರಜ್ ಮುನಿರಾಜು, ಗಜೇಂದ್ರ ಸಾಂಸ್ಕೃತಿಕ ಕಲಾಸಂಘದ ಎನ್.ರವಿಕುಮಾರ್, ಚಂದ್ರಶೇಖರ್, ತಾಲೂಕು ಕಲಾವಿದರ ಸಂಘದ ಗೌ. ಅಧ್ಯಕ್ಷ ಎಸ್.ರಾಮ ಮೂರ್ತಿ, ಅಧ್ಯಕ್ಷ ಎನ್.ರಾಮಾಂಜಿನಪ್ಪ, ಉಪಾಧ್ಯಕ್ಷರಾದ ಎಚ್. ಪ್ರಕಾಶ್ ರಾವ್, ಕೆ.ನರಸಿಂಹಯ್ಯ, ಪ್ರಧಾನ ಕಾರ್ಯ ದರ್ಶಿ ಬಿ.ಚಂದ್ರಶೇಖರ್, ಸಹ ಕಾರ್ಯ ದರ್ಶಿ ಎ. ಮಂಜುನಾಥ್ , ಖಜಾಂಚಿ ಎಚ್ ಮುನಿಪಾಪಯ್ಯ, ಸಲಹಾಸಮಿತಿ ಸದಸ್ಯರಾದ ವೆಂಕಟರಾಜು, ಜಿ ಮುನಿ ರಾಜು, ಟಿ.ವಿ.ಕೃಷ್ಣಪ್ಪ, ಎನ್.ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.
ನಾಟಕ ಮಂಡಲಿಯಿಂದ ಆನಂದ ಮೂರ್ತಿ ನಿರ್ದೇಶನದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು. ಜಿಲ್ಲಾಮಟ್ಟದ ನಾಟಕೋತ್ಸವದ ವೇದಿಕೆ ಚಯಲ್ಲಿ ನ.10ರಂದು ಸಂಜೆ 6.30ಕ್ಕೆ ಕರಿರಾಜ ಚರಿತ್ರೆ ಎಂಬ ಮೂಡಲಪಾಯ ಯಕ್ಷಗಾನ ಪ್ರದರ್ಶನವಿದೆ.