Advertisement

ಮರೆಯಾಗುತ್ತಿದೆ ನಾಟಕ ಸಂಸ್ಕೃತಿ: ರಜೀಯಾ ಬಳಬಟ್ಟಿ

05:51 PM Mar 06, 2021 | Team Udayavani |

ಬೀದರ: ಸಿನಿಮಾ, ಧಾರವಾಹಿಗಳ ಭರಾಟೆ ನಡುವೆಯೂ ನಾಟಕ ಸಂಸ್ಕೃತಿ ಜೀವಂತಿಕೆಗೆ ಕಲೆ ಮತ್ತು ಕಲಾವಿದರ ಪ್ರೋತ್ಸಾಹ ಅಗತ್ಯ ಎಂದು ಹಿರಿಯ ಸಾಹಿತಿ ರಜೀಯಾ ಬಳಬಟ್ಟಿ ಹೇಳಿದರು.

Advertisement

ಜನಪದ ಕಲಾವಿದರ ಬಳಗ, ಅಖೀಲ ಕರ್ನಾಟಕಕಲಾವಿದರ ಒಕ್ಕೂಟ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಗರದ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ರಾಜ್ಯ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ನಿತ್ಯ ಪ್ರಸಾರವಾಗುವ ಧಾರವಾಹಿಗಳು ಮಹಿಳೆಯರ ಮನಸ್ಸು ಹಿಡಿದಿಟ್ಟಿವೆ. ಹೀಗಾಗಿ ಮಹಿಳೆಯರು ನಾಟಕ ಸೇರಿದಂತೆ ಚಟುವಟಿಕೆಗಳಲ್ಲಿ ಭಾಗವಹಿಸಲು ಮನಸ್ಸು ಮಾಡಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಸಕ್ತಿ ರೂಢಿಸಿಕೊಳ್ಳಬೇಕಿದೆ ಎಂದರು.

ಜ್ಞಾನ ಗಂಗಾ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಹೇಡೆ ಮಾತನಾಡಿ, ಜನಪದ ಸಾಹಿತ್ಯದ ಸೊಗಡು ಮರೆಯಾಗುತ್ತಿರುವುದು ಬೇಸರದ ಸಂಗತಿ. ನಶಿಸಿ ಹೋಗುತ್ತಿರುವ ಜನಪದ ಸಂಸ್ಕೃತಿ ಉಳಿಸಿ-ಬೆಳೆಸಲು ಜನಪದ ಕಲಾವಿದರ ಬಳಗ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಹಿರಿಯ ರಂಗ ಕಲಾವಿದ ಚಂದ್ರಗುಪ್ತ ಚಾಂದಕವಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳೇಬೇರುಗಳ ಜತೆ ಹೊಸ ಚಿಗರು ಬೆರೆತುಕೊಂಡುಜನಪದ ಸಾಹಿತ್ಯ, ಸಂಸ್ಕೃತಿ ಬೆಳೆಸಬೇಕಿದೆ ಎಂದು ಸಲಹೆ ನೀಡಿದರು.

Advertisement

ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಜನಪದಕಲಾವಿದರನ್ನು ಗುರುತಿಸಿ- ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಕರುನಾಡು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಗೌರವಾಧ್ಯಕ್ಷ ಡಾ| ಸಂಜೀವಕುಮಾರ ಅತಿವಾಳೆ,ಸಾಹಿತಿ ರೂಪಾ ಪಾಟೀಲ, ಜಾನಪದ ಕಲಾವಿದ ಶಂಭುಲಿಂಗ ವಾಲ್ಖೋಡ್ಡಿ, ಸಾಣೇಹಳ್ಳಿಯ ಶಿವ ಸಂಚಾರ ತಂಡದ ಜೀವನಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಇದ್ದರು. ಭಕ್ತಕುಂಬಾರ ನಿರೂಪಿಸಿದರು.

ನಾಟಕ ಪ್ರದರ್ಶನ ಇಂದು: ಫೆ.6ರಂದು ಸಂಜೆ 5 ಗಂಟೆಗೆ ಬಳ್ಳಾರಿ ಜಿಲ್ಲೆಯ ಪುರುಷೋತ್ತಮ ಹಂದ್ಯಾಳ ಮತ್ತು ತಂಡದಿಂದ “ದನ ಕಾಯುವವರ ದೊಡ್ಡಾಟ’ ನಾಟಕ ಪ್ರದರ್ಶನವಾಗಲಿದೆ. ಕೆವಿಕೆ ಮುಖ್ಯಸ್ಥಸುನೀಲಕುಮಾರ ಎನ್‌.ಎಂ. ಉದ್ಘಾಟಿಸುವರು.ಹಿರಿಯ ರಂಗ ಕಲಾವಿದ ಸಂಗಮೇಶ ನಾಶೀಗಾರ ಅಧ್ಯಕ್ಷತೆ ವಹಿಸುವರು. ಕನ್ನಡಾಂಬೆ ಗೆಳೆಯರಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಎನ್‌ಎಸ್‌ ಎಸ್‌ಕೆ ನಿರ್ದೇಶಕ ವೀರಶೆಟ್ಟಿ ಪಟ್ನೆ, ಕರುಣಾಮಯ ಯುವಕ ಸಂಘದ ಅಧ್ಯಕ್ಷ ರಾಜಕುಮಾರ ಹೆಬ್ಟಾಳೆ,ಸಾಹಿತಿ ಭಾರತಿ ವಸ್ತ್ರದ, ಜಾನಪದ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಮ್ಮಾ ಸಂತಾಜಿ, ಜೈ ಕರವೇ ಜಿಲ್ಲಾಧ್ಯಕ್ಷ ಶ್ರೀಮಂತ ಸಪಾಟೆ, ಉದ್ಯಮಿ ದಯಾನಂದ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು.

Advertisement

Udayavani is now on Telegram. Click here to join our channel and stay updated with the latest news.

Next