Advertisement

ರಂಗಕಲೆಯತ್ತ ಯುವಕರ ಒಲವು ಹೆಮ್ಮೆ ವಿಚಾರ

05:46 PM May 03, 2022 | Team Udayavani |

ನೆಲಮಂಗಲ: ವಿದ್ಯಾರ್ಥಿಗಳು ಬೇಸಿಗೆ ರಜೆ ದಿನಗಳಲ್ಲಿ ನಡೆಯುವ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಅತ್ಯುತ್ತಮ ವೇದಿಕೆಯನ್ನು ಕಲ್ಪಿಸಿಕೊಂಡಂತ್ತಾಗುತ್ತದೆ ಎಂದು ರಂಗ ಕರ್ಮಿ ಡಾ.ಗೋವಿಂದಸ್ವಾಮಿ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಸದಾಶಿವ ನಗರದ ರಂಗಶಿಕ್ಷಣ ಕೇಂದ್ರದಲ್ಲಿ ನಡೆದ ಬೇಸಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಂಗ ಕಲೆಯೆಂಬುದು ಕಲೆಗಳಲ್ಲಿಯೇ ಅತ್ಯಂತ ಶ್ರೇಷ್ಠ ಕಲೆಯಾಗಿದೆ. ಮಕ್ಕಳು ಆಧುನಿಕತೆ ಮತ್ತು ತಾಂತ್ರಿಕತೆಯ ಅಬ್ಬರದ ನಡುವೆಯೂ ರಂಗ ಚಟುವಟಿಕೆ, ನೃತ್ಯದ ಕಡೆಗೆ ಗಮನವಹಿಸಿರುವುದು ಸಂತಸದ ವಿಚಾರ. ಇತ್ತೀಚಿನ ದಿನಗಳಲ್ಲಿ ಆಧುನಿಕ ಬೆಳ್ಳಿತೆರೆ ಮತ್ತು ಕಿರುತೆರೆಗಳ ಅಬ್ಬರದ ನಡುವೆ ಜೀವಂತ ಕಲೆಗಳ ಕಲಿಕೆಗೆ ಯುವಪೀಳಿಗೆ ಮುಂದಾಗಿರುವುದು ಹೆಮ್ಮೆಯನ್ನುಂಟು ಮಾಡಿದೆ.

ಪ್ರಸ್ತುತ ರಂಗಭೂಮಿ ಕಲಾವಿದರು ಮತ್ತು ಜಾನಪದ ಕಲಾವಿದರು ತಮ್ಮಲ್ಲಿರುವ ಕಲೆಯನ್ನು ಯುವಪೀಳಿಗೆಗೆ ಹಸ್ತಾಂತರಿಸುವ ಸಲುವಾಗಿ ಅವರನ್ನು ಪ್ರೇರೆಪಿಸಿ, ಕಲೆಯನ್ನು ಧಾರೆಯೆರೆಯ ಬೇಕಾಗಿದೆ. ಇಲ್ಲವಾದಲ್ಲಿ ಕಲೆಗಳು ಮುಂಬರುವ ದಿನಗಳಲ್ಲಿ ಇತಿಹಾಸವಾಗಿ ಉಳಿಯುವುದರಲ್ಲಿ ಸಂಶಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮತ್ತಷ್ಟು ಕಲಾ ಸೇವೆ ನಮ್ಮೆಲ್ಲರ ಹಂಬಲ: ರಂಗ ಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಕೇಂದ್ರವತಿಯಿಂದ ತಾಲೂಕಿನ ವಿವಿಧ ಗ್ರಾಮಗಳ ಆಸಕ್ತ ಕಲಾವಿದರಿಗೆ ಸೂಕ್ತ ತರಬೇತಿ ಮತ್ತು ಪ್ರದರ್ಶನಕ್ಕೆ ಸೂಕ್ತ ಸಹಕಾರವನ್ನು ನೀಡುತ್ತಾ ಬಂದಿದೆ. ಸಂಸ್ಥೆಯು 27ನೇ ವರ್ಷಕ್ಕೆ ಕಾಲಿಟ್ಟಿರುವುದು ತಾಲೂಕಿನ ಕೀರ್ತಿಯಾಗಿದೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾ ಸ್ಪರ್ಧೆಗಳಲ್ಲಿ ಕೇಂದ್ರ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಿ, ಪ್ರಶಸ್ತಿಗಳಿಗೆ ಭಾಜನರಾಗಿರುವುದು ನಮ್ಮ ಕೇಂದ್ರದ ಶ್ರಮಕ್ಕೆ ಸಿಕ್ಕ ಪ್ರತಿಫ‌ಲವಾಗಿದೆ. ಮತ್ತಷ್ಟು ಕಲಾ ಸೇವೆ ಮಾಡಬೇಕೆಂಬುದು ನಮ್ಮೆಲ್ಲರ ಹಂಬಲವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಪರಿಸರ ಜಾಗೃತಿ ಮೂಡಿಸಲು ಕಾಡ್ಗಿಚ್ಚು ನಾಟಕ ಪ್ರದರ್ಶನ ಮಾಡಿದರು. ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.

Advertisement

ಲಂಬಾಣಿ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷೆ ವರಲಕ್ಷ್ಮೀ, ಉಪವಲಯ ಅರಣ್ಯಾಧಿಕಾರಿ ಗುರುಮೂರ್ತಿ, ರಂಗ ಶಿಕ್ಷಣ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕಿ ಮಂಜುಳ ಸಿದ್ದರಾಜು, ರಂಗಕರ್ಮಿ ದಿನೇಶ್‌ ಚಿಕ್ಕಮಾರನಹಳ್ಳಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next