Advertisement
ಬಿಜೆಪಿ ಆಯೋಜಿಸಿರುವ ಪರಿ ವರ್ತನಾ ಯಾತ್ರೆಯ ಪ್ರಯುಕ್ತ ಸೋಮವಾರ ಕುಂದಾಪುರದ ನೆಹರೂ ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಯಡಿಯೂರಪ್ಪ ಅವರು ಮಾತನಾಡಿದರು. ಹಾಲಾಡಿ ಅವರೇ ಮುಂದಿನ ಬಿಜೆಪಿ ಅಭ್ಯರ್ಥಿ. ಅದನ್ನು ವಿರೋ ಧಿಸುವವರು ಗೂಂಡಾ ಕಾರ್ಯಕರ್ತರು. ವಿರೋಧಿಗಳಿದ್ದರೆ ಕೂಡಲೇ ಎದ್ದು ಹೋಗಿ ಎಂದ ಅವರು ಮುಂದಿನ ಜನವರಿಯಲ್ಲಿ ಹಾಲಾಡಿ ಅವರು ಬಿಜೆಪಿಗೆ ಸೇರಿ ನಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂದರು.
ನೋಟು ಅಪಮೌಲ್ಯ ಮಾಡಿದ್ದರಿಂದ ತೊಂದರೆ ಆಗಿದೆ ಎಂದು ಸಚಿವರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಜಯಪ್ರಕಾಶ್ ಹೆಗ್ಡೆ, ತೆರಿಗೆ ಕಟ್ಟಿದವರಿಗೆ ಯಾವುದೇ ತೊಂದರೆ ಆಗಿಲ್ಲ. ಹೆಚ್ಚು ಹಣ ಇದ್ದವರಿಗೆ ಮಾತ್ರ ಸಮಸ್ಯೆ ಆಗಿದೆ ಎಂದು ಲೇವಡಿ ಮಾಡಿದರು.
Related Articles
ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಮಾಜಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಬಿಜೆಪಿ ನಾಯಕರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯ್ ಕುಮಾರ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ದಿನಕರ ಬಾಬು, ಕುಯಿಲಾಡಿ ಸುರೇಶ್ ನಾಯಕ್, ಯಶ್‌ಪಾಲ್ ಸುವರ್ಣ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಭಾರತಿ ಶೆಟ್ಟಿ, ಶೀಲಾ ಕೆ. ಶೆಟ್ಟಿ, ಶ್ಯಾಮಲಾ ಕುಂದರ್, ನಳಿನಿ ಪ್ರದೀಪ್ ರಾವ್, ಗೀತಾಂಜಲಿ ಸುವರ್ಣ, ಜಯಶ್ರೀ ಮೊಗವೀರ, ಅರುಣ್ ಕುಮಾರ್, ರಾಘವೇಂದ್ರ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.
Advertisement
ಸಭೆಯಲ್ಲಿ ಹಾಲಾಡಿ ಭಾಗಿಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸಭೆ ಆರಂಭವಾದೊಡನೆ ಕಾರ್ಯಕರ್ತರ ನಡುವೆ ಬಂದು ಕುಳಿತುಕೊಂಡು ಎಲ್ಲ ನಾಯಕರ ಮಾತುಗಳನ್ನು ಆಲಿಸಿದರು. ಬಿ.ಎಸ್. ಯಡಿಯೂರಪ್ಪ ಅವರು ವೇದಿಕೆ ಬಳಿ ಆಗಮಿಸುವಾಗ ಶ್ರೀನಿವಾಸ ಶೆಟ್ಟರು ಹೂಗುತ್ಛ ನೀಡಿ ಸ್ವಾಗತಿಸಿದರು. ಕುಂದಾಪುರ ಬಿಜೆಪಿ ಕೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ ಸ್ವಾಗತಿಸಿದರು. ಸತೀಶ್ ಪೂಜಾರಿ ಅವರು ಕಾರ್ಯಕ್ರಮ ನಿರ್ವಹಿಸಿದರು. “ಕಸಬ್ ಜಯಂತಿಯೂ ಮಾಡ್ತಾರೆ’
ಕಾಂಗ್ರೆಸ್‌ಗೆ ನಾಡು-ನುಡಿಯ ಬಗ್ಗೆ ಕಲ್ಪನೆಯೇ ಇಲ್ಲ. ಈ ಮಣ್ಣಿನ ಬಗ್ಗೆ ಅಭಿಮಾನವಿಲ್ಲ. ಟಿಪ್ಪು ಜಯಂತಿಗೆ ಸಾರ್ವಜನಿಕರು ಸೇರಿದಂತೆ ಎಲ್ಲೆಡೆಯಿಂದ ಪ್ರಬಲ ವಿರೋಧವಿದ್ದರೂ ಆಚರಿಸಿದರು. ಇದಿಷ್ಟೇ ಅಲ್ಲ. ಬಿಟ್ಟರೆ ಮುಂದಿನ ದಿನಗಳಲ್ಲಿ ಕಸಬ್‌ಜಯಂತಿಯನ್ನೂ ಆಚರಿಸುತ್ತಾರೆ. ದೇಶದ್ರೋಹಿಗಳೇ ಅವರೇ ಬೇಕಾಗಿರುವುದು. ದೇಶದ್ರೋಹಿಗಳ ವೋಟಿಗಾಗಿ ಏನು ಬೇಕಾದರೂ ಮಾಡ್ತಾರೆ. ಜನರಿಗೆ ಹೊಸ ವ್ಯವಸ್ಥೆ ಬೇಕಿದೆ. ಅದಕ್ಕಾಗಿ ಬದಲಾವಣೆ ಅನಿವಾರ್ಯ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಿದೆ. ಮೇಲೆ ಮೋದಿ ಸರಕಾರವಿದ್ದು, ಇಲ್ಲಿಯೂ ನಮ್ಮ ಸರಕಾರ ಬಂದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ಹೇಳಿದರು.